ಸ್ಯಾಂಡಲ್ ವುಡ್ ನಟ ಸುದೀಪ್ ಬರ್ತಡೇ ರಾಜಕೀಯ ನಾಯಕರು,ಸೆಲಿಬ್ರೆಟಿಗಳು, ನಟ-ನಟಿಯರು, ಕ್ರೀಡಾಪಟುಗಳು ಹೀಗೆ ಎಲ್ಲರಿಂದಲೂ ಶುಭಾಶಯಗಳು ಹರಿದು ಬಂದಿವೆ. ಆದರೆ ಅಪ್ಪನ ಹುಟ್ಟುಹಬ್ಬಕ್ಕೆ ಮಗಳು ಸಾನ್ವಿ ಸ್ಪೆಶಲ್ ಪೋಸ್ಟ್ ಜೊತೆ ವಿಶ್ ಮಾಡಿದ್ದು ಗಮನಸೆಳೆಯುತ್ತಿದೆ.

ಸಾನ್ವಿ ತಂದೆಯ ಸ್ಪೆಶಲ್ ಗುಣಗಳನ್ನು ಪಟ್ಟಿ ಮಾಡಿದ್ದು ಮೊದಲ ಗುಣ Leadership ಎಂದಿದ್ದು ಇದಕ್ಕಾಗಿ ಅಪ್ಪನ ಕ್ರಿಕೇಟ್ ಪ್ಲೇಯರ್ ಪೋಟೋ ಹಂಚಿಕೊಂಡಿದ್ದಾರೆ. Loyalty ಸುದೀಪ್ ಎರಡನೇ ಗುಣ ಎಂದ ಸಾನ್ವಿ ಈ ಲಾಯಲ್ಟಿಯನ್ನೇ ನಾವಿಂದು ಸೆಲಿಬ್ರೇಟ್ ಮಾಡುತ್ತಿದ್ದೇವೆ ಎಂಬರ್ಥದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ತೆರೆ ಮೇಲೆ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡರೂ ಸುದೀಪ್ ಹೃದಯದಿಂದ ಒಬ್ಬ ಮುಗ್ಧ ವ್ಯಕ್ತಿ ಎಂದಿರುವ ಸಾನ್ವಿ ತಂದೆಯ ಮೂರನೇ ಗುಣ ಅವರ Innocence ಎಂದು ಉಲ್ಲೇಖಿಸಿದ್ದಾರೆ. ತಮ್ಮ ನಿಲುವು ಹಾಗೂ ನಂಬಿಕೆಗಳಿಗೆ ಬದ್ಧವಾಗಿ ನಡೆದುಕೊಳ್ಳುವ ಸುದೀಪ್ ರದ್ದು Assertion ಗುಣ ಎಂದು ಸಾನ್ವಿ ಗುರುತಿಸಿದ್ದಾರೆ.
ಸ್ಯಾಂಡಲ್ ವುಡ್ ಅಗತ್ಯ ಉಳ್ಳವರಿಗೆ ಹಾಗೂ ಜನಸಾಮಾನ್ಯರಿಗೂ ನೆರವಾಗುವ ಸುದೀಪ್ ಮಾನವೀಯತೆಯನ್ನು ಸಾನ್ವಿ ಮೆಚ್ಚಿದ್ದು Campassion ಸುದೀಪ್ 5ನೇ ಒಳ್ಳೆ ಗುಣ ಎಂದು ಸಾನ್ವಿ ಪೋಸ್ಟ್ ಮಾಡಿದ್ದಾರೆ.

Strength, Diligence, Sentiments, Infinity love, Perseverance ಗಳು ಸುದೀಪ್ ಸ್ಪೆಶಲ್ ಗುಣ ಎಂದು ಗುರುತಿಸಿರುವ ಸಾನ್ವಿ ಸುದೀಪ್ ಈ ಗುಣಗಳ ಸಂಭ್ರಮವನ್ನು ನಾವಿಂದು ಸೆಲಿಬ್ರೇಟ್ ಮಾಡುತ್ತಿದ್ದೇವೆ ಎಂದಿದ್ದಾರೆ. ಸುದೀಪ್ ಮಗಳ ಸ್ಪೆಶಲ್ ವಿಶ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಎಲ್ಲರೂ ಸಾನ್ವಿ ವಿಶ್ ಗೆ ಲೈಕ್ಸ್ ಒತ್ತಿದ್ದಾರೆ.
(Sanvi highlights Sudeep’s 10 qualities: Dad’s Special Wish )