ಸಿನಿಮಾ ನಟ, ನಟಿಯರ ಹುಟ್ಟಿದ ದಿನದಂದೇ ಅವರ ಸಿನಿಮಾದ ಪೋಸ್ಟರ್ ರಿವೀಲ್ ಮಾಡೋದು ಮಾಮೂಲು. ಆದ್ರೀಗ ಶಬರಿ ಸರ್ಚಿಂಗ್ ಫಾರ್ ರಾವಣ ಸಿನಿಮಾ ತಂಡ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಹುಟ್ಟುಹಬ್ಬದಂದು ಪೋಸ್ಟರ್ ರಿಲೀಸ್ ಮಾಡುವ ಮೂಲಕ ಭರ್ಜರಿ ಗಿಫ್ಟ್ ಕೊಟ್ಟಿದೆ.

ಶಬರಿ ತಂಡ ರಿಲೀಸ್ ಮಾಡಿರುವ ಪೋಸ್ಟರ್ ನಲ್ಲಿ ರಚಿತಾ ಹೊಸಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ರಚಿತಾ ಮೊದಲ ಬಾರಿಗೆ ಶಾರ್ಟ್ ಹೇರ್ ಕಟ್ ನಲ್ಲಿ ಕಾಣಿಸಿಕೊಂಡಿದ್ದಾರೆ, ಸಿನಿಮಾದಲ್ಲಿ ಆಫೀಸರ್ ಪಾತ್ರದಲ್ಲಿ ರಚಿತಾ ನಟಿಸುತ್ತಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್‌ವುಡ್‌ನ ಡಿಂಪಲ್ ರಾಣಿ : 29ನೇ ವಸಂತಕ್ಕೆ ಕಾಲಿಟ್ಟ ಖ್ಯಾತ ನಟಿ ರಚಿತಾ ರಾಮ್

ಪೋಸ್ಟರ್ನಿಂದಾಗಿ ಅಭಿಮಾನಿಗಳಿಗೆ ಬಹುದೊಡ್ಡ ಅಚ್ಚರಿ ಎದುರಾಗಿದೆ. ಕಾರಣ, ರಚಿತಾ ಇದುವರೆಗೂ ಕಾಣಿಸಿಕೊಳ್ಳದ ಗೆಟಪ್ನಲ್ಲಿ ಮಿಂಚುತ್ತಿದ್ದಾರೆ. ಸಣ್ಣ ಕೂದಲಿನ ಮಾಸ್ ಲುಕ್ನಲ್ಲಿದ್ದು, ಅವರ ಟೇಬಲ್ನಲ್ಲಿ ಒಂದು ಮುದ್ದಾದ ಬೆಕ್ಕೂ ಇದೆ. ಆಫೀಸರ್ ಲುಕ್ನಲ್ಲಿ ರಚಿತಾ ಕುಳಿತಿರುವುದು ಅವರ ಇದುವರೆಗಿನ ಚಿತ್ರಗಳಿಂದ ಇದು ಕಂಪ್ಲೀಟ್ ಡಿಫರೆಂಟ್ ಎನ್ನುವುದನ್ನು ಒತ್ತಿ ಹೇಳುತ್ತಿದೆ.

ಶಬರಿ ಸರ್ಚಿಂಗ್ ಫಾರ್ ರಾವಣ’ ಚಿತ್ರವನ್ನು ನವೀನ್ ಶೆಟ್ಟಿ ನಿರ್ದೇಶಿಸುತ್ತಿದ್ದು, ರಿವೆಂಜ್ ಥ್ರಿಲ್ಲರ್ ಮಾದರಿಯ ಕಥಾನಕ ಹೊಂದಿರಲಿದೆ. ಅನೂಪ್ ಸೀಳಿನ್ ಸಂಗೀತ ನೀಡಲಿದ್ದು, ವಿಶಾಲ್ ಕುಮಾರ್ ಗೌಡ ಛಾಯಾಗ್ರಹಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಚಿತಾ ಎರಡು ಶೇಡ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ರಘು ಮುಖರ್ಜಿ, ಅರ್ಚನಾ ಕೊಟ್ಟಿಗೆ ಮೊದಲಾದವರು ಬಣ್ಣ ಹಚ್ಚುತ್ತಿದ್ದಾರೆ.
ಇದನ್ನೂ ಓದಿ: Riteish Deshmukh : ಪತ್ನಿ ಜೆನಿಲಿಯಾ ಅಶ್ಲೀಲ ಆಂಟಿ ಎಂದವನಿಗೆ ಖಡಕ್ ಉತ್ತರ ಕೊಟ್ಟ ರಿತೇಶ್ ದೇಶಮುಖ್
(Shabari Search For Ravana ‘Poster Reveal On Dimple Queen Birthday)