ಮಂಗಳವಾರ, ಏಪ್ರಿಲ್ 29, 2025
HomeCinemaKannadiga Title Track : ಶಿವಣ್ಣ ಫ್ಯಾನ್ಸ್ ಗೆ ಸಿಹಿಸುದ್ದಿ: ರವಿಮಾಮನ ಕನ್ನಡಿಗನಿಗಾಗಿ ಗಾಯಕನಾದ ಹ್ಯಾಟ್ರಿಕ್...

Kannadiga Title Track : ಶಿವಣ್ಣ ಫ್ಯಾನ್ಸ್ ಗೆ ಸಿಹಿಸುದ್ದಿ: ರವಿಮಾಮನ ಕನ್ನಡಿಗನಿಗಾಗಿ ಗಾಯಕನಾದ ಹ್ಯಾಟ್ರಿಕ್ ಹೀರೋ

- Advertisement -

ಚಂದನವನದ ಕ್ರೇಜಿಸ್ಟಾರ್, ಪ್ರೇಮಲೋಕದ ಹೀರೋ ರವಿಚಂದ್ರನ್ ಕನ್ನಡಿಗನಾಗಿ (Kannadiga Title Track) ತೆರೆಗೆ ಬರೋಕೆ ಸಜ್ಜಾಗಿದ್ದಾರೆ.‌ವಿಭಿನ್ನ ಪಾತ್ರದಲ್ಲಿ ಮಿಂಚಲು ಸಿದ್ಧವಾಗಿರೋ ರವಿಮಾಮನ ಹೊಸ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವಣ್ಣ ಧ್ವನಿಯಾಗಿದ್ದು, ರಿಲೀಸ್ ಆಗಿರೋ ಸಿರಿಗನ್ನಡಂ‌ ಏಳ್ಗೆ ಕನ್ನಡದ ಟೈಟಲ್ ಸಾಂಗ್ ಸಖತ್ ಫೇಮಸ್ ಆಗ್ತಿದೆ.

ರವಿಚಂದ್ರನ್ ತಮ್ಮ ಇದುವರೆಗಿನ ಎಲ್ಲ ಇಮೇಜ್ ಗಿಂತ ವಿಭಿನ್ನವಾದ ಪಾತ್ರದಲ್ಲಿ ತೆರೆಗೆ ಬರಲು ಸಿದ್ಧವಾಗಿದ್ದಾರೆ. ಕನ್ನಡ- ಇಂಗ್ಲೀಷ್ ಶಬ್ದಕೋಶ ಸಿದ್ಧಪಡಿಸಿದ ಫರ್ನಿನಾಂಡ್ ಕಿಟೆಲ್ ಕುರಿತಾದ ಈ ಸಿನಿಮಾದಲ್ಲಿ ರವಿಮಾಮ ಕನ್ನಡಕ್ಕಾಗಿ ಹೋರಾಡುವ ಕಲಿಯಾಗಿ ಕಾಣಿಸಿಕೊಂಡಿದ್ದಾರೆ.

ಬಿಳಿ ಪಂಜೆ, ಶರ್ಟ್, ಗಿರಿಜಾ ಮೀಸೆ ಹಾಗೂ ತಲೆಮೇಲೆ ದೊಡ್ಡ ರುಮಾಲು ಧರಿಸಿ ಸಖತ್ ರಗಡ್ ಲುಕ್ ನಲ್ಲಿ ರವಿಚಂದ್ರನ್ ನಟಿಸಿದ್ದಾರೆ. ಈ ಸಿನಿಮಾದ ಟೈಟಲ್ ಸಾಂಗ್ ರಿಲೀಸ್ ಆಗಿದೆ. ಸಂತೋಷ್ ಆನಂದ ರಾಮ್ ಸಾಹಿತ್ಯವಿರುವ ಈ ಹಾಡಿಗೆ ರವಿ ಬಸ್ರೂರು ಸಂಗೀತವಿದ್ದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಗೀತೆಯನ್ನು ಹಾಡಿರೋದು ವಿಶೇಷ.

ಸಿರಿಗನ್ನಡಂ ಏಳ್ಗೆ.. ಕನ್ನಡಂ ಬಾಳ್ಗೆ… ಕನ್ನಡ ನಮ್ಮ ಪಾಲ್ಗೆ ಎಂದು ಆರಂಭವಾಗೋ ಈ ಹಾಡನ್ನು ಶಿವಣ್ಣ ಜೀವತುಂಬಿ ಹಾಡಿದ್ದು ಮಂಗಳವಾರ ರಿಲೀಸ್ ಆಗಿರೋ ಹಾಡಿಗೆ ಶಿವಣ್ಣ ಹಾಗೂ ರವಿಚಂದ್ರನ್ ಅಭಿಮಾನಿಗಳು ಮನಸೋತಿದ್ದಾರೆ. ಶಿವಣ್ಣನೂ ಹಾಡನ್ನು ತುಂಬ ಆನಂದಿಸಿಕೊಂಡು ಹಾಡಿದ್ದಾರೆ. ಹಾಡಿನಲ್ಲಿ ಜಾನಪದ, ವಚನಗಳ ಉಲ್ಲೇಖವಿದ್ದು ಕನ್ನಡದ ಹಿರಿಮೆ ಸಾರುವ ಈ ಹಾಡು ರಿಲೀಸ್ ಆಗಿರೋ ಗಂಟೆಗಳಲ್ಲೇ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಬಿ.ಎಂ.ಗಿರಿರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ರವಿಚಂದ್ರನ್ ಗುಣಭದ್ರ ಎಂಬ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಗತ್ತಿನ ಪಾತ್ರ ರವಿಮಾಮನ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಐತಿಹಾಸಿಕ ಕಥಾಹಂದರ ಹೊಂದಿರುವ ಸಿನಿಮಾ ಅದ್ದೂರಿಯಾಗಿ ಮೂಡಿಬರುತ್ತಿದೆ.

ಪಾವನಾ ರವಿಚಂದ್ರನ್ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದು, ಮುಖ್ಯಭೂಮಿಕೆಯಲ್ಲಿ ಹಿರಿಯ ನಟಿ ಸುಮಲತಾ ಕೂಡಾ ನಟಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಜಯಶ್ರೀ ಬಾಲಾಜಿ ಮನೋಹರ್ ಕೂಡ ನಟಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ನ ಹಲವು ಸಿನಿಮಾಗಳಿಗೆ ಪುನೀತ್ ರಾಜ್ ಕುಮಾರ್ ಹಾಡುಗಳನ್ನು ಹಾಡಿದ್ದರು. ಆದರೆ ಶಿವಣ್ಣ ಸಿನಿಮಾಗಳಿಗೆ ಹಾಡಿದ್ದು ಕೊಂಚ ಕಡಿಮೆಯೇ.ಆದರೆ ಕನ್ನಡಿಗ ಸಿನಿಮಾದ ಟೈಟಲ್ ಸಾಂಗ್ ಗೆ ಶಿವಣ್ಣ ಜೀವತುಂಬಿದ್ದು ಕನ್ನಡದ ಗೀತೆಯೊಂದು ಹ್ಯಾಟ್ರಿಕ್ ಹೀರೋ ಧ್ವನಿಯಲ್ಲಿ ಕನ್ನಡಿಗರ ಮನಗೆಲ್ಲುತ್ತಿದೆ.

ಇದನ್ನೂ ಓದಿ : ಅದ್ಧೂರಿಯಾಗಿ ನೆರವೇರಿತು ‘ಸಖತ್’ ಪ್ರೀ-ರಿಲೀಸ್ ಇವೆಂಟ್ : ಗಣೇಶ್-ಪ್ರೇಮ್ ಹಾಡಿನ ಜುಗಲ್ ಬಂದಿ

ಇದನ್ನೂ ಓದಿ : ಪೆಟ್ರೋಮ್ಯಾಕ್ಸ್ ಗೆ ಸುಮನ್ ರಂಗನಾಥ್ : ಡಿಗ್ಲ್ಯಾಮರ್ ಪಾತ್ರದಲ್ಲಿ ಗ್ಲಾಮರ್ ಬೊಂಬೆ

(Shiva RajKumar is the voice of Ravichandran starrer Kannadiga Title Track )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular