ಸೋಮವಾರ, ಏಪ್ರಿಲ್ 28, 2025
HomeCinemaಹೊಸ ಸಿನಿಮಾಗಾಗಿ ಶುಭ ಪೂಂಜಾ ಸಾಹಸ : 20 ಕೆಜಿ ತೂಕದ ಉಡುಪು ತೊಟ್ಟ ಕರಾವಳಿ...

ಹೊಸ ಸಿನಿಮಾಗಾಗಿ ಶುಭ ಪೂಂಜಾ ಸಾಹಸ : 20 ಕೆಜಿ ತೂಕದ ಉಡುಪು ತೊಟ್ಟ ಕರಾವಳಿ ಹುಡುಗಿ

- Advertisement -

ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಭಾವಿ ಪತಿ ಜೊತೆ ಟ್ರಿಪ್ ಗೆ ಹೋಗಿ ಸಖತ್ ಪೋಟೋಸ್ ಹಂಚಿಕೊಂಡಿದ್ದ ನಟಿ ಶುಭಾಪೂಂಜಾ ಮತ್ತೆ ನಟನೆಗೆ ಮರಳಿದ್ದಾರೆ. ವಿಭಿನ್ನ ಪಾತ್ರವೊಂದರಲ್ಲಿ ನಟಿಸುತ್ತಿರುವ ಶುಭಾ ಸಿನಿಮಾಗಾಗಿ 20 ಕೆಜಿ ತೂಕದ ಉಡುಪು ತೊಟ್ಟಿದ್ದಾರೆ.

ಡಬ್ಬಲ್ ಶೇಡ್ ಪಾತ್ರ ಹೊಂದಿರುವ ಅಂಬುಜಾ ಸಿನಿಮಾಗಾಗಿ ಲಂಬಾಣಿ ಹುಡುಗಿ ಹಾಗೂ ಪತ್ರಕರ್ತೆ ಹೀಗೆ ಟೂ ಶೇಡ್ ಪಾತ್ರದಲ್ಲಿ ನಟಿಸುತ್ತಿರುವ ಶುಭಾ ಪೂಂಜಾ ಇದಕ್ಕಾಗಿ ಲಂಬಾಣಿ ಡ್ರೆಸ್ ಧರಿಸಿ ಪೋಸ್ ನೀಡಿದ್ದಾರೆ.

ಗದಗ ಜಿಲ್ಲೆಯ ಲಂಬಾಣಿ ತಾಂಡಾದಲ್ಲಿ ಈ ಸ್ಪೆಶಲ್ ಉಡುಪನ್ನು ಸಿದ್ಧಪಡಿಸಲಾಗಿದ್ದು, ಅಪರೂಪದ ಕುಸುರಿ ಕಲೆಯೊಂದಿಗೆ ಸಿದ್ಧಗೊಂಡ ಈ ಲಂಬಾಣಿ ಡ್ರೆಸ್ ಅಂದಾಜು 20 ಕೆಜಿ ತೂಕವಿದೆಯಂತೆ. ಸತತ ನಾಲ್ಕು ತಿಂಗಳ ಪರಿಶ್ರಮದ ಬಳಿಕ ಡ್ರೆಸ್ ಸಿದ್ಧವಾಗಿದೆಯಂತೆ.

ಶ್ರೀನಿ ಹನುಮಂತ ರಾಜು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ ರಾಯಚೂರಿನ ಸಮೀಪದಲ್ಲಿ ನಡೆದ ನಿಜ ಘಟನೆಯನ್ನು ಆಧರಿಸಿದೆ ಎನ್ನಲಾಗಿದೆ. ಸಮಾಜ ಮುಂದುವರೆದಿದ್ದರೂ ಜನರ ಮುಗ್ಧತೆಯನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬುದನ್ನು ಈ ಚಿತ್ರಕತೆ ನಿರೂಪಿಸಲಿದೆಯಂತೆ.

ಕಾಮಿಡಿ ಶೋನ ಗೋವಿಂದೇ ಗೌಡ್, ಪ್ರಿಯಾಂಕಾ ಕಾಮತ್ ಸೇರಿದಂತೆ ಹಲವರು ನಟಿಸಿರುವ ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು, ಅನುರಾಧಾಭಟ್, ರಾಜೇಶ್ ಕೃಷ್ಣನ್, ಎಂಡಿ ಪಲ್ಲವಿ ಧ್ವನಿ ನೀಡಿದ್ದಾರೆ. ಬಿಗ್ ಬಾಸ್ ನಲ್ಲಿ ತಮ್ಮ ಮುಗ್ಧತೆಯಿಂದಲೇ ಗಮನಸೆಳೆದಿದ್ದ ಶುಭಾ ಪೂಂಜಾ ಗ್ರ್ಯಾಂಡ್ ಫಿನಾಲೆಗೆ ಕೆಲವೇ ವಾರಗಳಿರುವಾಗ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದರು.

( Shubha Poonja Adventure for a new movie: A coastal girl dressed in 20kg weight )

RELATED ARTICLES

Most Popular