ಬೆಂಗಳೂರು : ಸ್ಯಾಂಡಲ್‌ವುಡ್ ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ( Puneeth Raj Kumar ) ಅಗಲಿಕೆಯ ಹಿನ್ನೆಲೆಯಲ್ಲಿಂದು ಅನ್ನಸಂತಪರ್ಣೆಯನ್ನು ಆಯೋಜಿಸಲಾಗಿದೆ. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ದೊಡ್ಮನೆ ಕುಟುಂಬಸ್ಥರು ಗಣ್ಯರು, ಅಭಿಮಾನಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಮಾಡಿದ್ದಾರೆ. ಸುಮಾರು ೨೦ ಸಾವಿರಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಪುನೀತ್ ರಾಜ್ ಕುಮಾರ್ ಬಾರದ ಲೋಕ್ಕೆ ಪಯಣಿಸಿ ಇಂದಿಗೆ 12 ದಿನಗಳೇ ಕಳೆದು ಹೋಗಿದೆ. ನಿನ್ನೆ ದೊಡ್ಮನೆ ಕುಟುಂಬಸ್ಥರು 11ನೇ ದಿನದ ಕಾರ್ಯವನ್ನು ನೆರವೇರಿಸಿದ್ದರು. ಇಂದು 12 ನೇ ದಿನದ ಅಂಗವಾಗಿ ಅಭಿಮಾನಿಗಳಿಗೆ, ಗಣ್ಯರಿಗೆ ಅನ್ನಸಂತರ್ಪಣೆಯನ್ನು ಆಯೋಜಿಸಿದ್ದಾರೆ. ಅಪ್ಪು ಅಗಲಿಕೆಯ ನೋವು ದೊಡ್ಮನೆಗಷ್ಟೇ ಅಲ್ಲಾ ಇಡೀ ರಾಜ್ಯದ ಜನರೇ ಕಂಬನಿ ಮಿಡಿದಿದ್ದರು. ಅಲ್ಲದೇ ಲಕ್ಷಾಂತರ ಮಂದಿ ಬೆಂಗಳೂರಿಗೆ ಆಗಮಿಸಿ ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನವನ್ನು ಪಡೆದುಕೊಂಡಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಕಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಆಗಮಿಸಿ ಪೂಜೆಯನ್ನು ಸಲ್ಲಿಸುತ್ತಿದ್ದಾರೆ. ಹೀಗಾಗಿಯೇ ಇಂದಿನ ಅನ್ನಸಂತರ್ಪಣೆಯಲ್ಲಿಯೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆಯನ್ನು ಹೊಂದಲಾಗಿದೆ. ಬೆಳಗ್ಗೆ 11 ಗಂಟೆಗೆ ಅನ್ನಸಂತರ್ಪಣೆ ಆರಂಭವಾಗಲಿದ್ದು, ಒಂದು ಬಾರಿಗೆ ಐದು ಸಾವಿರ ಜನರು ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ನಾಲ್ಕು ಸಾವಿರ ಮಾಂಸಹಾರ ಹಾಗೂ ಒಂದು ಸಾವಿರ ಸಸ್ಯಾಹಾರಿ ಊಟ ಕೌಂಟರ್ ತೆರೆಯಲಾಗಿದೆ.
ಅನ್ನಸಂಪರ್ತಣೆಯ ಹಿನ್ನೆಲೆಯಲ್ಲಿ ಅರಮನೆ ಮೈದಾನದ ಸುತ್ತಲೂ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಸುಮಾರು 1 ಸಾವಿರ ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಗಾಯತ್ರಿ ವಿಹಾರ ಗೇಟ್ ನಂ.4 ರಲ್ಲಿ ಗಣ್ಯರಿಗೆ ಹಾಗೂ ಕೃಷ್ಣ ವಿಹಾರ್ ಗೇಟ್ ನಂ.1ರಲ್ಲಿ ಸಾರ್ವಜನಿಕರಿಗೆ ವಾಹನದ ಪಾರ್ಕಿಂಗ್‌ಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇಂದು ನಡೆಯಲಿರುವ ಅನ್ನಸಂತರ್ಪಣೆಗೆ ಸುಮಾರು ೫೦ ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯನ್ನು ಹೊಂದಲಾಗಿದೆ.
ಇನ್ನು ಸದಾಶಿವನಗರದಲ್ಲಿರುವ ಪುನೀತ್ ರಾಜ್ ಕುಮಾರ್ ಅವರ ಮನೆಗೆ ಗಣ್ಯರು, ಸೆಲೆಬ್ರಿಟಿಗಳು ಆಗಮಿಸುತ್ತಿದ್ದಾರೆ. ಆದರೆ ಪುನೀತ್ ಮನೆಯ ಭೇಟಿಗೆ ಅಭಿಮಾನಿಗಳಿಗೆ ಅವಕಾಶವನ್ನು ಕಲ್ಪಿಸಿಲ್ಲ. ಮನೆಗೆ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.
ಇದನ್ನೂ ಓದಿ : ತಂದೆಯ ಆಸೆ ನೆರವೇರಿಸಿದ ವಂದಿತಾ: ದುಃಖದ ನಡುವೆಯೂ ಪರೀಕ್ಷೆಗೆ ಹಾಜರ್
ಇದನ್ನೂ ಓದಿ : ಅಪ್ಪುಗೆ ಪದ್ಮಶ್ರೀ ಅಭಿಯಾನ : ಸಹೋದರ ಶಿವಣ್ಣ ಹೇಳಿದ್ದೇನು ಗೊತ್ತಾ?