ಸ್ಯಾಂಡಲ್ ವುಡ್ ಐಶೂ ಅಂದ್ರೇ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಬಾಲನಟಿಯಾಗಿ ಚಂದನವನಕ್ಕೆ ಕಾಲಿಟ್ಟ ಅಮೂಲ್ಯ ನೋಡ ನೋಡುತ್ತ ಸಿನಿಮಾ ರಂಗದ ಬಹುಬೇಡಿಕೆಯಾಗಿ ಬೆಳೆದು ನಿಂತರು. ಅಷ್ಟೇ ಅವಸರದಲ್ಲಿ ವೈವಾಹಿಕ ಬದುಕಿಗೆ ಹೊರಟು ನಿಂತರು ಈಗ ಮತ್ತೊಂದು ಸಿಹಿಸುದ್ದಿಯೊಂದಿಗೆ ( amulya baby bump photoshoot ) ಅಭಿಮಾನಿಗಳ ಎದುರು ಹಾಜರಾಗಿದ್ದಾರೆ.

ನಟಿ ಅಮೂಲ್ಯ ನಟನೆಯಿಂದ ಬ್ರೇಕ್ ಪಡೆದು ವರ್ಷಗಳೇ ಕಳೆದರೂ ಇನ್ನು ಅಮೂಲ್ಯ ಮೇಲೆ ಅಭಿಮಾನ ಕಡಿಮೆಯಾಗಿಲ್ಲ.ಹೀಗಾಗಿಇಂದಿಗೂ ಅಮೂಲ್ಯ ಫ್ಯಾನ್ಸ್ ಅಮೂಲ್ಯ ಸಿನಿಮಾ ರಂಗಕ್ಕೆ ವಾಪಸ್ಸಾಗಬೇಕೆಂದು ಕಾಯುತ್ತಲೇ ಇದ್ದಾರೆ. ಆದರೆ ಸದ್ಯ ತಮ್ಮ ಬ್ರೇಕ್ ಮುಂದುವರೆಸಿರುವ ಅಮೂಲ್ಯ ಚಿತ್ರರಂಗಕ್ಕೆಬರೋದು ಇನ್ನಷ್ಟು ಲೇಟಾಗುತ್ತೆ ಅನ್ನೋಸಂದೇಶ ಕೊಟ್ಟಿದ್ದಾರೆ. ಯಾಕಂದ್ರೇ ನಟಿ ಅಮೂಲ್ಯ ಈಗ ತಾಯ್ತನದ ಸಂಭ್ರಮದಲ್ಲಿದ್ದಾರೆ.

2017 ರ ಮೇ 12 ರಂದು ಉದ್ಯಮಿ ಜಗದೀಶ್ ಜೊತೆ ಹೊಸಬದುಕಿಗೆ ಕಾಲಿಟ್ಟ ಅಮೂಲ್ಯ ಮದುವೆಯಾದ ನಾಲ್ಕೂವರೆ ವರ್ಷಗಳ ಬಳಿಕ ತಾಯ್ತನದ ಸಂಭ್ರಮಕ್ಕೆ ಅಣಿಯಾಗಿದ್ದು, ಈ ಸಿಹಿಸುದ್ದಿ ಯನ್ನು ಕೆಲ ದಿನಗಳ ಹಿಂದೆಯಷ್ಟೇ ಅಮೂಲ್ಯ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈಗ ನಟಿ ಅಮೂಲ್ಯ ಚೊಚ್ಚಲ ಬೇಬಿ ಬಂಪ್ ಜೊತೆ ಪೋಟೋ ಶೂಟ್ ಮಾಡಿಸಿದ್ದು, ಪತಿಯೊಂದಿಗೆ ಸಖತ್ ಪೋಸ್ ನೀಡಿದ್ದಾರೆ.

ಲೈಟ್ ಪರ್ಪಲ್ ಕಲರ್ ಗೌನ್ ಹಾಗೂ ಬ್ಲ್ಯಾಕ್ ಹೈಹೀಲ್ಸ್ ನಲ್ಲಿ ಅಮೂಲ್ಯ ತಾಯ್ತನದ ಕಳೆಯಿಂದ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಅಮೂಲ್ಯ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪೋಟೋ ಸಖತ್ ವೈರಲ್ ಆಗಿದ್ದು, ಸಾವಿರಾರು ಅಭಿಮಾನಿಗಳು ಅಮೂಲ್ಯನಿಗೆ ಶುಭಹಾರೈಸಿದ್ದರೇ ಲಕ್ಷಾಂತರ ಅಭಿಮಾನಿಗಳು ಪೋಟೋಗೆ ಲೈಕ್ಸ್ ಒತ್ತಿದ್ದಾರೆ.

ನಟಿ ಅಮೂಲ್ಯಗೆ ಕಿರುತೆರೆಯಲ್ಲಿ ಸಾಕಷ್ಟು ಸ್ನೇಹಿತೆಯರಿದ್ದಾರೆ. ಬೆಳ್ಳಿ ತೆರೆಯಲ್ಲಿ ಮಿಂಚಿದ್ದರೂ ಅಮೂಲ್ಯ ಕಿರುತೆರೆಯ ಸ್ನೇಹಿತೆಯರ ಸಂಘ ಬಿಟ್ಟಿಲ್ಲ. ಅದರಲ್ಲೂ ಅಮೂಲ್ಯ ಮತ್ತು ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಆತ್ಮೀಯ ಸ್ನೇಹಿತೆಯರು. ಇತ್ತೀಚಿಗಷ್ಟೇ ಅಮೂಲ್ಯ ಸ್ನೇಹಿತೆಯರ ಜೊತೆ ಸ್ನೇಹಕೂಟ ಮಾಡಿದ್ದು ವೈಷ್ಣವಿ ಸೇರಿದಂತೆ ಹಲವರು ಅಮೂಲ್ಯ ನಿಗೆ ಭರ್ಜರಿ ಊಟ ಕೊಡಿಸಿ ಪೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದರು.

ಈಗ ಅಮೂಲ್ಯ ಅಧಿಕೃತವಾಗಿ ಪೋಟೋಶೂಟ್ ಮೂಲಕ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ. ಮೂಲಗಳ ಪ್ರಕಾರ ಮಾರ್ಚ್ ವೇಳೆಗೆ ಅಮೂಲ್ಯ ಮಗುವಿನ ನೀರಿಕ್ಷೆಯಲ್ಲಿ ಇದ್ದಾರಂತೆ. ಒಟ್ಟಿನಲ್ಲಿ ಅಮೂಲ್ಯ ರನ್ನು ಮತ್ತೆ ಸ್ಕ್ರೀನ್ ಮೇಲೆ ನೋಡೋ ಖುಷಿಯಲ್ಲಿದ್ದ ಅಭಿಮಾನಿಗಳಿಗೆ ಅಮೂಲ್ಯ ಮಮ್ಮಿಯಾಗೋ ಸುದ್ದಿ ನೀಡೋ ಮೂಲಕ ಸಪ್ರೈಸ್ ನೀಡಿದ್ದಾರೆ.
ಇದನ್ನೂ ಓದಿ : ನಟಿ ಅಮೃತಾ ನಾಯ್ಡು ಬಾಳಲ್ಲಿಇದೆಂತಾ ದುರಂತ : 2 ನೇ ಮಗು ಸಮನ್ವಿಯನ್ನು ಕಳೆದುಕೊಂಡ ಕಿರುತೆರೆ ನಟಿ
ಇದನ್ನೂ ಓದಿ : ಗೋವಾದಲ್ಲಿ ಗಲೀ ಗಲೀ ಹುಡುಗಿ ಕಲ್ಯಾಣ : ಸದ್ದಿಲ್ಲದೇ ಮದುವೆಗೆ ಸಿದ್ಧವಾದ ಮೌನಿ ರಾಯ್
( sandalwood queen amulya baby bump photoshoot viral on social media)