ಸ್ಯಾಂಡಲ್ ವುಡ್ ಗುಳಿಕೆನ್ನೆಯ ಬೆಡಗಿ ರಚಿತಾ ರಾಮ್ (Rachita Ram) ಚಂದನವನದ ಅದೃಷ್ಟದೇವತೆ ಎನ್ನಿಸಿಕೊಂಡಿದ್ದಾರೆ. ರಚಿತಾ ರಾಮ್ ನಾಯಕಿಯಾದ್ರೇ ಸಾಕು ಚಿತ್ರ ಅರ್ಧ ಗೆದ್ದಂತೆ ಎಂಬ ಮನಸ್ಥಿತಿಗೆ ಬಂದಿರೋ ಚಿತ್ರರಂಗದಲ್ಲಿ ರಚಿತಾಗೆ ಅವಕಾಶಗಳ ಸುರಿಮಳೆಯಾಗಿದೆ. ಈ ಮಧ್ಯೆ ಅಯ್ ಲವ್ ಯೂ ಬಳಿಕ ಹಾಟ್ ಪಾತ್ರಗಳಲ್ಲಿ ನಟಿಸಲ್ಲ ಎಂದಿದ್ದ ರಚಿತಾ ರಾಮ್ ಮತ್ತೊಮ್ಮೆ ಮೈಚಳಿ ಬಿಟ್ಟಿದ್ದಾರೆ.

ಮೊದಲ ಬಾರಿಗೆ ಡಾರ್ಲಿಂಗ್ ಕೃಷ್ಣಾ ಜೊತೆ ಸಿನಿಮಾದಲ್ಲಿ ನಟಿಸುತ್ತಿರುವ ರಚಿತಾ ರಾಮ್ (Rachita Ram) ಮತ್ತೊಮ್ಮೆ ಮೈಚಳಿ ಬಿಟ್ಟು ಪೋಸ್ ಕೊಡುವ ಮೂಲಕ ಸುದ್ದಿಯಾಗಿದ್ದಾರೆ.

ಉಪೇಂದ್ರ್ ಸಿನಿಮಾ ಅಯ್ ಲವ್ ಯೂದಲ್ಲಿ ಸಖತ್ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಚಿತಾರಾಮ್ ಬಳಿಕ ಕಣ್ಣೀರಿಟ್ಡಿದ್ದರು. ನನ್ನನ್ನು ಯಾಮಾರಿಸಿ ಅತಿಯಾಗಿ ಎಕ್ಸಪೋಸ್ ಮಾಡಿಸಿದ್ದಾರೆ. ನಾನು ಈ ರೀತಿಯ ದೃಶ್ಯದಲ್ಲಿ ನಟಿಸಲು ಸಿದ್ಧವಿಲ್ಲ. ಇನ್ಮುಂದೆ ಇಂಥಹ ಪಾತ್ರದಲ್ಲಿ ನಟಿಸೋದಿಲ್ಲ ಎಂದಿದ್ದರು.

ಈಗ ಮತ್ತೊಮ್ಮೆ ಲವ್ ಯೂ ರಚ್ಚು ಸಿನಿಮಾದಲ್ಲಿ ರಚಿತಾ ರಾಮ್ ಅರೆಬೆತ್ತಲೇ ಪೋಸ್ ನೀಡಿದ್ದು ರಿಲೀಸ್ ಆಗಿರೋ ಪೋಸ್ಟ್ ಗಳು ಪಡ್ಡೆಗಳ ಮೈಬಿಸಿ ಏರಿಸುವಂತಿದೆ.

ಬೆಡ್ ಮೇಲೆ ವೈಟ್ ಬ್ಲಾಂಕೆಟ್ ಹೊದ್ದು ಮಲಗಿದಂತೆ ಅಜಯ್ ರಾವ್ ಜೊತೆ ಕಾಣಿಸಿಕೊಂಡಿರೋ ರಚಿತಾರಾಮ್ ಪೋಟೋ ಸಖತ್ ವೈರಲ್ ಆಗಿದೆ. ಈ ಸಿನಿಮಾದಲ್ಲಿ ರಚಿತ ರಾಮ್ ಗೃಹಿಣಿ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ಆದರೂ ಹಾಟ್ ಅವತಾರದ ಪೋಟೋ ವೈರಲ್ ಆಗಿದೆ.

ನವೆಂಬರ್ 9 ರಂದು ಲವ್ ಯೂ ರಚ್ಚು ಸಿನಿಮಾದ ಮುದ್ದು ನೀನು ಹಾಡು ರಿಲೀಸ್ ಆಗಲಿದೆ. ಈ ಹಾಡಿನಲ್ಲೂ ರಚಿತಾರಾಮ್ ಹೊಸ ಅವತಾರ ನೋಡಲು ಸಿಗಲಿದೆ. ಸದ್ಯ 7 ಸಿನಿಮಾದಲ್ಲಿ ಬ್ಯುಸಿಯಾಗಿರೋ ರಚಿತಾರಾಮ್, ಒಟ್ಟೊಟ್ಟಿಗೆ ಮೂರು ಮೂರು ಸಿನಿಮಾದಲ್ಲಿ ನಟಿಸುತ್ತಿದ್ದಾರಂತೆ. ಒಂದಿಷ್ಟು ಒಳ್ಳೆ ಸಿನಿಮಾದಲ್ಲಿ ನಟಿಸಬೇಕೆಂಬುದು ರಚಿತಾರಾಮ್ ಆಸೆಯಂತೆ.
ಆದರೆ ಲವ್ ಯೂ ಸಿನಿಮಾದ ಬಳಿಕ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳದಿರಲು ನಿರ್ಧರಿಸಿದ್ದ ರಚಿತಾರಾಮ್ ಈ ಅವತಾರಕ್ಕೆ ಅಭಿಮಾನಿಗಳು ಸಖತ್ ಸಪ್ರೈಸ್ ಆಗಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಯಲ್ಲಿ ಕ್ರಾಂತಿ ಸಿನಿಮಾದಲ್ಲೂ ರಚಿತಾರಾಮ್ ನಟಿಸಲಿದ್ದು ಚಾಲೆಂಜಿಂಗ್ ಸ್ಟಾರ್ ಮತ್ತು ಗುಳಿಕೆನ್ನೆಯ ಬೆಡಗಿಯನ್ನು ಒಟ್ಟಿಗೆ ನೋಡೋಕೆ ಅಭಿಮಾನಿಗಳು ಕಾತುರರಾಗಿ ಕಾಯ್ತಿದ್ದಾರೆ. ನಾಳೆ ರಿಲೀಸ್ ಆಗಲಿರೋ ಲವ್ ಯೂ ರಚ್ಚು ಸಿನಿಮಾದ ಹಾಡು ರಚಿತಾ ಲುಕ್ ಬಗ್ಗೆ ಪ್ರೇಕ್ಷಕರಿಗಿರೋ ಕುತೂಹಲಕ್ಕೆ ಉತ್ತರ ನೀಡಲಿದೆ.
ಇದನ್ನೂ ಓದಿ : ಏಕ್ ಲವ್ ಯಾ’ ನಲ್ಲಿ ರಚ್ಚು ಸಖತ್ ಹಾಟ್ : ವೈರಲ್ ಆಯ್ತು ಲಿಪ್ ಲಾಕ್ ಸೀನ್
ಇದನ್ನೂ ಓದಿ : ಸ್ಯಾಂಡಲ್ ವುಡ್ ಗುಳಿಕೆನ್ನೆ ಬೆಡಗಿಯ ಹಾಟ್ ಪೋಟೋಸ್ ವೈರಲ್…!
(Rachita Ram in Hot again with Love You racchu )