ಸ್ಯಾಂಡಲ್ ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ (Radhika Kumaraswamy) ಸದ್ಯ ಸಿನಿಮಾಗಳಿಂದ ಬ್ರೇಕ್ ಪಡೆದುಕೊಂಡಂತಿದೆ. ಕೊರೋನಾ ಅಬ್ಬರದ ನಡುವೆ ಸಿನಿಮಾ ಚಟುವಟಿಕೆಗಳು ಸ್ಥಗಿತಗೊಂಡಂತಿರುವಾಗಲೇ ರಾಧಿಕಾ ಕೂಡಾ ಅಭಿಮಾನಿಗಳ ಕಣ್ಮುಂದೆ ಬರೋದನ್ನು ನಿಲ್ಲಿಸಿ ಸೈಲೆಂಟ್ ಆಗಿದ್ದಾರೆ. ಆದರೇ ಬಣ್ಣ ಹಚ್ಚದಿದ್ದರೂ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಎಂಟರಟೈನ್ಮೆಂಟ್ ನೀಡೋದನ್ನು ಮಾತ್ರ ನಿಲ್ಲಿಸಿಲ್ಲ.
ಮೊನ್ನೆ ಮೊನ್ನೆ ಸಮುದ್ರ ತೀರದಲ್ಲಿ ಸಖತ್ತಾಗಿ ಸೊಂಟ ಬಳುಕಿಸಿದ್ದ ರಾಧಿಕಾ ಕುಮಾರಸ್ವಾಮಿ ವೀಡಿಯೋ ಶೇರ್ ಮಾಡಿಕೊಂಡು ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದರು. ಬಹುದಿನಗಳ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದ ರಾಧಿಕಾ ಕುಮಾರಸ್ವಾಮಿ ಈ ವಿಡಿಯೋಗೆ ಲಕ್ಷಾಂತರ ಲೈಕ್ಸ್ ಗಳು ಹರಿದು ಬಂದಿತ್ತು.ಇದರಿಂದ ಖುಷಿಯಾದಂತಿರೋ ರಾಧಿಕಾ ಕುಮಾರಸ್ವಾಮಿ ಈಗ ಮತ್ತೊಂದು ಸಖತ್ ಸ್ಟೈಲಿಶ್ ಡ್ಯಾನ್ಸ್ ವಿಡಿಯೋ ಶೇರ್ ಮಾಡಿದ್ದಾರೆ.
ಈ ಭಾರಿ ಸಖತ್ ಹಾಟ್ ಆಗಿ ಪೋಸ್ ನೀಡಿರೋ ರಾಧಿಕಾ ಕುಮಾರಸ್ವಾಮಿ ಬ್ಲ್ಯಾಕ್ ಶಾರ್ಟ್ ಟಾಪ್ ಹಾಗೂ ಫುಲ್ ಕವರ್ ಬ್ಲ್ಯಾಕ್ ಶೂದಲ್ಲಿ ಕುಣಿದು ಮತ್ತೇರಿಸಿದ್ದಾರೆ. ಹಿಂದಿಯ ಮೇರೆ ಯಾರ್ ಹಾಡಿಗೆ ರಾಧಿಕಾ ಡ್ಯಾನ್ಸ್ ಮಾಡಿದ್ದು ಅಭಿಮಾನಿಗಳಿಗಾಗಿ ರಾಧಿಕಾ ಕುಮಾರಸ್ವಾಮಿ ಈ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಯಾವುದೋ ರೆಸಾರ್ಟ್ ಬ್ಯಾಕ್ ಗ್ರೌಂಡ್ ನಲ್ಲಿ ರಾಧಿಕಾ ಮಾಡಿರೋ ಈ ವಿಡಿಯೋ ಅಭಿಮಾನಿಗಳ ಮನಗೆದ್ದಿದ್ದು, ನೂರಾರು ಮಂದಿ ಮತ್ತೆ ನಿಮ್ಮ ನಟನೆ ನೋಡೋಕೆ ಕಾದಿದ್ದೇವೆ. ಪ್ಲೀಸ್ ಸಿನಿಮಾಗೆ ವಾಪಸ್ ಬನ್ನಿ ಎಂದು ಮನವಿ ಕೂಡ ಮಾಡಿದ್ದಾರೆ. ಬಣ್ಣದ ಲೋಕಕ್ಕೆ ಕಾಲಿಟ್ಟಾಗಿನಿಂದಲೂ ಡ್ಯಾನ್ಸ್ ನಲ್ಲಿ ವಿಶೇಷ ಆಸಕ್ತಿ ಹೊಂದಿರುವ ರಾಧಿಕಾ ಕುಮಾರಸ್ವಾಮಿ ತಮ್ಮ ಎಲ್ಲಾ ಸಿನಿಮಾಗಳಲ್ಲಿ ಸಖತ್ ಡ್ಯಾನ್ಸ್ ಮಾಡೋ ಮೂಲಕ ಗಮನ ಸೆಳೆದಿದ್ದರು.
ಮಾತ್ರವಲ್ಲ ಕನ್ನಡದ ಹಲವು ಡ್ಯಾನ್ಸ್ ರಿಯಾಲಿಟಿ ಶೋದಲ್ಲೂ ನಿರ್ಣಾಯಕರಾಗಿ ಪಾಲ್ಗೊಳ್ಳೋ ಮೂಲಕ ಗಮನ ಸೆಳೆದಿದ್ದರು. ಈ ಡ್ಯಾನ್ಸ್ ನಲ್ಲೂ ರಾಧಿಕಾ ಕುಮಾರಸ್ವಾಮಿ ಎನರ್ಜಿ ಸಖತ್ ಗಮನ ಸೆಳೆದಿದ್ದು, ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಸದ್ಯ ಯಾವುದೇ ಹೊಸ ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ನಟಿಸುತ್ತಿಲ್ಲ. ಅಲ್ಲದೇ ಹೊಸ ಸಿನಿಮಾ ನಿರ್ಮಾಣಕ್ಕೂ ಕೈಹಾಕಿಲ್ಲ. ಹೀಗಾಗಿ ರಾಧಿಕಾ ಕುಮಾರಸ್ವಾಮಿ ಅಭಿಮಾನಿಗಳು ನಿರಾಸೆಯಲ್ಲಿದ್ದು ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳೋ ಈ ವಿಡಿಯೋದಲ್ಲಿ ತಮ್ಮ ನೆಚ್ಚಿನ ನಟಿಯನ್ನು ಕಣ್ತುಂಬಿಕೊಂಡು ಸಮಾಧಾನಪಡುತ್ತಿದ್ದಾರೆ.
ಇದನ್ನೂ ಓದಿ : ಮಡಿದ ಮಗಳಿಗಾಗಿ ಮಿಡಿದ ಅಮೃತಾ ನಾಯ್ಡು: ಮತ್ತೆ ನನ್ನ ಹೊಟ್ಟೆಯಲ್ಲಿ ಸಮನ್ವಿಯೇ ಹುಟ್ಟಿ ಬರಲಿ ಎಂದ ನಟಿ
ಇದನ್ನೂ ಓದಿ : ಕನಸು ನನಸಾದ ಖುಷಿಯಲ್ಲಿ ಕಿರಿಕ್ ಹುಡುಗಿ : ಪ್ರಭುದೇವಾ ಜೊತೆ ಹೆಜ್ಜೆ ಹಾಕಿದ ಸಂಯುಕ್ತಾ ಹೆಗ್ಡೆ
( Radhika Kumaraswamy video viral to social media)