ಸೋಮವಾರ, ಏಪ್ರಿಲ್ 28, 2025
HomeCinemaShwetha Srivatsav: ಯಶೋಧಾ-ಕೃಷ್ಣಾವತಾರದಲ್ಲಿ ಸಿಂಪಲ್ ಬೆಡಗಿ: ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಯ್ತು ಪೋಟೋಸ್

Shwetha Srivatsav: ಯಶೋಧಾ-ಕೃಷ್ಣಾವತಾರದಲ್ಲಿ ಸಿಂಪಲ್ ಬೆಡಗಿ: ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಯ್ತು ಪೋಟೋಸ್

- Advertisement -

ನಾಡಿನಾದ್ಯಂತ ಶೃದ್ಧೆ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿರುವ ಶ್ರೀಕೃಷ್ಣಾ ಜನ್ಮಾಷ್ಟಮಿಗೆ ಸಿನಿತಾರೆಯರು ಗ್ರ್ಯಾಂಡ್ ಪೋಟೋಶೂಟ್  ಜೊತೆಗೆ ಮತ್ತಷ್ಟು ರಂಗು ತುಂಬಿದ್ದಾರೆ. ಸಿಂಪಲ್ ಹುಡುಗಿ ಶ್ವೇತಾ ಶ್ರೀವಾಸ್ತವ್ ತಮ್ಮ ಮಗಳೊಂದಿಗೆ ಮನಸೆಳೆಯುವ ಪೋಟೋಶೂಟ್ ನಡೆಸಿದ್ದು, ಮುದ್ದು ರಾಧೆ-ಕೃಷ್ಣ ಹಾಗೂ ಯಶೋಧೆ ಅವತಾರದಲ್ಲಿ  ಅಮ್ಮ ಮಗಳು ಮನಸೆಳೆದಿದ್ದಾರೆ.

ಸಿಂಪಲ್ಲಾಗ್ ಒಂದ ಲವ್ ಸ್ಟೋರಿ ಮೂಲಕ ಕನ್ನಡಿಗರ ಮನಗೆದ್ದ ನಟಿ ಶ್ವೇತಾ ಶ್ರೀವಾಸ್ತವ್ ಕಳೆದ ಎರಡು ಮೂರು  ವರ್ಷದಿಂದ ಸಿನಿಮಾ ರಂಗದಿಂದ ದೂರ ಉಳಿದಿದ್ದರೂ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.

ಸದಾ ಒಂದಿಲ್ಲೊಂದು ಪೋಟೋಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುವ ಶ್ವೇತಾ ಶ್ರೀಕೃಷ್ಣಾ ಜನ್ಮಾಷ್ಟಮಿಗೆ ಮಗಳಿಗೆ ಕೃಷ್ಣ ಹಾಗೂ ರಾಧೆ ಎರಡು ವೇಷ ಹಾಕಿಸಿ ತಾವು ಯಶೋಧೆಯಾಗಿ ಮಿಂಚಿದ್ದಾರೆ.

ಗ್ರ್ಯಾಂಡ್ ಡ್ರೆಸ್, ಅದಕ್ಕೊಪ್ಪುವ ಬ್ಯಾಕ್ ಗ್ರೌಂಡ್ ಅಲಂಕಾರ, ಅಮ್ಮ ಮಗಳ ಸುಂದರ ಭಾವಾಭಿವ್ಯಕ್ತಿಯಿಂದ ಪೋಟೋಶೂಟ್ ಸಖತ್ ಸುಂದರವಾಗಿ ಮೂಡಿಬಂದಿದ್ದು, ಅಭಿಮಾನಿಗಳು ಖುಷಿಯಿಂದ ಪೋಟೋ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಮೊಸರು ಕದಿಯುವ ಕೃಷ್ಣ,  ಕೊಳಲು ನುಡಿಸುವ ಕೃಷ್ಣ, ಬಿಂದಿಗೆ ಹೊತ್ತ ರಾಧೆ ಹೀಗೆ ನಾನಾ ಅವತಾರದಲ್ಲಿ  ಶ್ವೇತಾ ಪುತ್ರಿ ಕೂಡ ಸುಂದರವಾಗಿ ಪೋಟೋಗೆ ಪೋಸ್ ನೀಡಿದ್ದು, ಪೋಟೋಗಳು ಒಂದಕ್ಕಿಂತ ಒಂದು ಸುಂದರವಾಗಿ ನೋಡುಗರನ್ನು ಸೆಳೆಯುತ್ತಿದೆ.

ಈ ಹಿಂದೆ ನವರಾತ್ರಿ ವೇಳೆಯೂ ಶ್ವೇತಾ ಶ್ರೀವಾಸ್ತವ್ ಮಗಳ ಜೊತೆ ಅಷ್ಟಲಕ್ಷ್ಮೀ ಅವತಾರದಲ್ಲಿ ಪೋಟೋ ಶೂಟ್ ಮಾಡಿಸಿ ಗಮನ ಸೆಳೆದಿದ್ದರು.

RELATED ARTICLES

Most Popular