ಮದಗಜ (Madhagaja) ಶ್ರೀಮುರುಳಿ ಮತ್ತು ಆಶಿಕಾ ರಂಗನಾಥ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಬಹು ನಿರೀಕ್ಷಿತ ಸಿನಿಮಾ. ಬಿಗ್ ಬಜೆಟ್ ಸಿನಿಮಾದಗಳು ಬಿಡುಗಡೆಯಾದ ಬೆನ್ನಲ್ಲೇ ಚಿತ್ರತಂಡ ಮದಗಜ ಸಿನಿಮಾದ ಟೈಟಲ್ ಸಾಂಗ್ ರಿಲೀಸ್ ಮಾಡಿದೆ. ಹಾಡು ಸಖತ್ ಸೌಂಡ್ ಮಾಡ್ತಿದ್ದು, ಮದಗಜ ಮೂಲಕ ಶ್ರೀಮುರುಳಿ ಆಬ್ಬರಿಸಿದ್ದಾರೆ.

ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಶ್ರೀ ಮುರುಳಿ ಟೈಟಲ್ ಸಾಂಗ್‌ಗೆ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ. ಬಿಗ್ ಬಜೆಟ್‌ನಲ್ಲಿ ಸಿನಿಮಾವನ್ನು ಅದ್ದೂರಿಯಾಗಿಯೇ ಸಿದ್ದಪಡಿಸ ಲಾಗಿದೆ. ರವಿ ಬಸ್ರೂರು ಅವರ ಮ್ಯೂಸಿಕ್ ಮೋಡಿ ಮಾಡುವಂತಿದೆ. ಹಾಡು ನೋಡಿದ ಪ್ರೇಕ್ಷಕರು ಸೂಪರ್ ಅಂತ ಕಮೆಂಟ್ ಮಾಡುತ್ತಿದ್ದಾರೆ.

ಶ್ರೀಮುರುಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಜಗಪತಿ ಬಾಬು ಎಂಟ್ರಿ ಕೊಟ್ಟಿರುವುದು ಸಿನಿಮಾದ ಬಗೆಗಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಭಾಷೆಯಲ್ಲಿಯೂ ಮದಗಜ ಮೂಡಿಬರುತ್ತಿದೆ.
ಸಿನಿಮಾದ ಟೈಟಲ್ ಟ್ರ್ಯಾಕ್ ಸಖತ್ ರಿಚ್ ಆಗಿ ಮೂಡಿಬಂದಿದೆ. ನವೀನ್ ಕುಮಾರ್ ಅವರ ಕ್ಯಾಮರಾ ವರ್ಕ್ ನಿಜಕ್ಕೂ ಅದ್ಬುತವಾಗಿದ್ದು, ಹರೀಶ್ ಕೊಮ್ಮೆ ಸಂಕಲನ ಸಖತ್ ವರ್ಕೌಟ್ ಆಗಿದೆ. ಟೀಸರ್, ಹಾಡುಗಳಿಂದಲೇ ಮೋಡಿ ಮಾಡಿರುವ ಮದಗಜ (Madhagaja) ಥಿಯೇಟರ್‌ಗೆ ಎಂಟ್ರಿ ಕೊಡುವುದನ್ನೇ ಅಭಿಮಾನಿಗಳು ಕಾಯುತ್ತಿದ್ದಾರೆ.

(Sri Muruli and Ashika Ranganth new Movie Madhagaja Title Song Released )