ಸೋಮವಾರ, ಏಪ್ರಿಲ್ 28, 2025
HomeCinemaPriya Sudeep special gift : ತಾಯವ್ವನಿಂದ ವಿಕ್ರಾಂತ್ ರೋಣದವರೆಗೆ, ಸುದೀಪ್ ಸಿನಿ ಜರ್ನಿಗೆ 26...

Priya Sudeep special gift : ತಾಯವ್ವನಿಂದ ವಿಕ್ರಾಂತ್ ರೋಣದವರೆಗೆ, ಸುದೀಪ್ ಸಿನಿ ಜರ್ನಿಗೆ 26 ರ ಸಂಭ್ರಮ : ಹೃದಯಸ್ಪರ್ಶಿ ಮೆಸೆಜ್ ನೀಡಿದ ಪ್ರಿಯಾ

- Advertisement -

ಸ್ಯಾಂಡಲ್ ವುಡ್ ನಿಂದ ಪಯಣ ಆರಂಭಿಸಿ ಬಾಲಿವುಡ್ ತನಕ ಬೆಳೆದು ನಿಂತ ಬಾದ್ ಷಾ ಕಿಚ್ಚ ಸುದೀಪ್ ಈ ಬಹುಭಾಷಾ ನಟ. ಚಂದನವನದಲ್ಲಿ ಸುದೀಪ್ 26 ವರ್ಷಗಳನ್ನು ಯಶಸ್ವಿಯಾಗಿ ಪೊರೈಸಿದ್ದು ಅಭಿಮಾನಿಗಳ ಈ ಖುಷಿಯನ್ನು ಹಬ್ಬದಂತೆ ಸಂಭ್ರಮಿಸಿದ್ದಾರೆ. ಸಣ್ಣ ಪಾತ್ರದಿಂದ ಸ್ಯಾಂಡಲ್ ವುಡ್ ಬಣ್ಣದ ಪಯಣ ಆರಂಭಿಸಿದ ಕಿಚ್ಚ ಸುದೀಪ್ ಇಂದು ಕಾಲಿವುಡ್ ,ಬಾಲಿವುಡ್ ನಲ್ಲೂ ಬಹುಬೇಡಿಕೆಯ ನಟ. ಸುದೀಪ್ 26 ವರ್ಷದ ಸಿನಿ‌ಜರ್ನಿ ಬಗ್ಗೆ ಅವರ ಪತ್ನಿ ಪ್ರಿಯಾ ಸುದೀಪ್ ಸೋಷಿಯಲ್ (Priya Sudeep special gift) ಮೀಡಿಯಾದಲ್ಲಿ ಸಂಭ್ರಮ ಹಂಚಿಕೊಂಡಿದ್ದು ಭಾವುಕರಾಗಿ ತಮ್ಮ ಭಾವನೆಯನ್ನು ಶೇರ್ ಮಾಡಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಸುದೀಪ್ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದಾಗ ತೆಗೆದುಕೊಂಡ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಪ್ರಿಯಾ ಸುದೀಪ್, ವಿಶ್ವದಾದ್ಯಂತ ನಿಮಗಾಗಿ ನೀವು ಸಂಪಾದಿಸಿರುವ ಪ್ರೀತಿ ಗೌರವದ ಬಗ್ಗೆ ನಮಗೆ ಹೆಮ್ಮೆಯಿದೆ. ನಮ್ಮಲ್ಲಿ ಹಲವರು ನಿಮ್ಮ ಕಠಿಣ ಪರಿಶ್ರಮ, ಸಮರ್ಪಣೆಯಿಂದ ಪ್ರೇರಣೆ ಪಡೆಯುತ್ತಾರೆ. ನೆಗೆಟಿವ್ ನಿಂದ ಡಿಜಿಟಲ್ ಗೆ, ಸಿಂಗಲ್ ಸ್ಕ್ರಿನ್ ನಿಂದ ಮಲ್ಟಿಪ್ಲೆಕ್ಸ್ ಗೆ, ತಾಯವ್ವನ ರಾಮುವಿನಿಂದ ವಿಕ್ರಾಂತ್ ರೋಣದವರೆಗೆ, ಐರನ್ ಲೆಗ್ ನಿಂದ ಗೋಲ್ಡನ್ ಲೆಗ್ ವರೆಗೆ,ಸರೋವರ ಹೊಟೇಲ್ ನಿಂದ ಬುರ್ಜಾ ಖಲೀಫಾ ವರೆಗೂ,ನನ್ನ ದೀಪುವಿನಿಂದ, ಬಾದ್ ಶಾ ಕಿಚ್ಚ ಸುದೀಪ್ ವರೆಗಿನ ಅದ್ಭುತ ಪಯಣವನ್ನು ನೀವು ನೋಡಿದ್ದೀರಿ ಎಂದು ಪ್ರಿಯಾ ಸುದೀಪ್ ಬರೆದಿದ್ದಾರೆ.

ಪ್ರಿಯಾ ಸುದೀಪ್ ಹೃದಯ ತುಂಬಿದ ಬರಹ ಹಾಗೂ ಹಾರೈಕೆಗೆ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದು, ಪ್ರಿಯಾ ಸುದೀಪ್ ಪೋಸ್ಟ್ ಶೇರ್ ಮಾಡಿ ಸಂಭ್ರಮಿಸಿದ್ದಾರೆ. ಬಹುತೇಕರು ಸುದೀಪ್ ‌ಮೊದಲ ಸಿನಿಮಾ ಸ್ಪರ್ಶ ಎಂದು ಕೊಂಡಿದ್ದಾರೆ. ಆದರೆ ಸುದೀಪ್ ತಾಯವ್ವ ಸಿನಿಮಾದಿಂದ ತಮ್ಮ ಕೆರಿಯರ್ ಆರಂಭಿಸಿದ್ದು, ಈಗ ಈ ಜರ್ನಿ ವಿಕ್ರಾಂತ್ ರೋಣದವರೆಗೆ ತಲುಪಿದೆ. ಕಳೆದ ವರ್ಷವಷ್ಟೇ ಸಿನಿಕೆರಿಯರ್ ನ ಬೆಳ್ಳಿ ಹಬ್ಬವನ್ನು ಆಚರಿಸಿದ ಕಿಚ್ಚ ಸುದೀಪ್ ಈಗ ೨೬ ನೇ ವರ್ಷದ ಸಂಭ್ರಮದಲ್ಲಿದ್ದು, ಸುದೀಪ್ ಆಭಿಮಾನಿಗಳನ್ನು ಈ ಖುಷಿ ಯನ್ನು ವೈರೈಟಿ ವೈರೈಟಿ ಪೋಸ್ಟ್ ಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ನಟ,ನಟಿಯರು,ನಿರ್ಮಾಪಕ, ನಿರ್ದೇಶಕರು, ಬಾಲಿವುಡ್ ಗಣ್ಯರು ಸೇರಿದಂತೆ ಹಲವರು ಸ್ಪೆಶಲ್ ಪೋಟೋಗಳ ಮೂಲಕ ಸುದೀಪ್ ಗೆ ಶುಭಾಶು ಕೋರಿದ್ದಾರೆ. ಇನ್ನೂ ಎಲ್ಲರಿಗೂ ಧನ್ಯವಾದ ಹೇಳಿರೋ ನಟ ಸುದೀಪ್, ಪತ್ನಿಗೆ ಲವ್ ಮತ್ತು ಹಗ್ ಎಂಬ ಕಮೆಂಟ್ ನೀಡಿದ್ದಾರೆ. ಈ 26 ವರ್ಷಗಳ ಜರ್ನಿಯಲ್ಲಿ ಜೊತೆ ನಿಂತಿದ್ದ ಕ್ಕೆ, ನೀವು ಮಾಡಿದ ತ್ಯಾಗಗಳಿಗೆ ಕೃತಜ್ಞತೆ ಎಂದಿರುವ ಸುದೀಪ್ ನಟನೆಯನ್ನು ಸುಧಾರಿಸಿಕೊಳ್ಳುವಂತಹ ನಿಮ್ಮ ಟೀಕೆಗಳಿಗೂ ಧನ್ಯವಾದ ಎಂದಿದ್ದಾರೆ.‌

ಇದನ್ನೂ ಓದಿ : ಚಿನ್ನದ ಗೌನ್, ವಜ್ರದ ಅಲಂಕಾರ : ಬಾಲಿವುಡ್ ಬೆಡಗಿ ಊರ್ವಶಿ ಒಂದು ರಾಂಪ್‌ವಾಕ್‌ ಗೆ 40 ಕೋಟಿ ಡ್ರೆಸ್

ಇದನ್ನೂ ಓದಿ : ಜೇಮ್ಸ್’ಗೆ ದಾರಿ ಮಾಡಿಕೊಟ್ಟ ರಾಜಮೌಳಿ : ಮಾರ್ಚ್ 18 ಅಲ್ಲ ಮಾರ್ಚ್ 25ಕ್ಕೆ ಆರ್‌ಆರ್‌ಆರ್ ಸಿನಿಮಾ ರಿಲೀಸ್

(Sudeep Cine Journey Celebrates 26 years, Priya Sudeep special gift)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular