ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಷ್ಟು ದಿನ ಚಿತ್ರ ನಟಿಯರ ಸುತ್ತಲೇ ಗಿರಕಿ ಹೊಡೆಯುತ್ತಿದ್ದ ಡ್ರಗ್ಸ್ ಮಾಫಿಯಾದಲ್ಲೀಗ ಸ್ಟಾರ್ ನಟನೋರ್ವನ ಹೆಸರು ಕೇಳಿಬಂದಿದೆ. ಅಷ್ಟೇ ಅಲ್ಲಾ ವಿಚಾರಣೆಯ ವೇಳೆಯಲ್ಲಿ ನಟಿ ರಾಗಿಣಿ ಹಾಗೂ ಸಂಜನಾ ಆ ನಟನ ಹೆಸರನ್ನು ಬಾಯ್ಬಿಟ್ಟಿದ್ದಾರೆ.

ಡ್ರಗ್ಸ್ ಮಾಫಿಯಾದ ಕಿಂಗ್ ಪಿನ್ ಅನಿಕಾ ಬಂಧನದ ಬೆನ್ನಲ್ಲೇ ರಾಜಕಾರಣಿಗಳ ಮಕ್ಕಳು, ಉದ್ಯಮಿಗಳು, ಸೆಲೆಬ್ರಿಟಿಗಳು, ನಟ, ನಟಿಯರು ನಿರ್ದೇಶಕರ ಹೆಸರುಗಳು ಕೇಳಿಬಂದಿದೆ. ಡ್ರಗ್ಸ್ ಮಾಫಿಯಾ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಟಿಯರಿಬ್ಬರನ್ನು ಬಂಧಿಸಿರುವ ಸಿಸಿಬಿ ಅಧಿಕಾರಿಗಳು 12 ಮಂದಿ ಆರೋಪಿಗಳ ವಿರುದ್ದ ಪ್ರಕರಣವನ್ನು ದಾಖಲಿಸಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಮಾಫಿಯಾ ಇದೀಗ ಬಾಲಿವುಡ್ ಗೂ ಲಿಂಕ್ ಹೊಂದಿರೋದು ಬಯಲಾಗಿದೆ. ಮಾತ್ರವಲ್ಲ ಸುಶಾಂತ್ ಸಿಂಗ್ ಸಾವಿನಲ್ಲಿಯೂ ಡ್ರಗ್ಸ್ ಮಾಫಿಯಾದ ಹೆಸರು ಕೇಳಿಬಂದಿದೆ. ಇನ್ನು ಅಂತರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ ಗಳ ಜೊತೆಗೆ ಡ್ರಗ್ಸ್ ಮಾಫಿಯಾದ ಲಿಂಕ್ ಇರೋದು ಬಯಲಾಗಿತ್ತು. ಇನ್ನು ನಟಿ ರಾಗಿಣಿ ಹಾಗೂ ಸಂಜನಾ ವಿಚಾರಣೆಯ ವೇಳೆಯಲ್ಲಿ ಹಲವರ ಹೆಸರುಗಳನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಇಷ್ಟು ದಿನ ಕೇವಲ ಸ್ಟಾರ್ ನಟಿಯರನ್ನೇ ಡ್ರಗ್ಸ್ ದಂಧೆಯಲ್ಲಿ ಸಿಲುಕಿಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದ್ದ ಬೆನ್ನಲ್ಲೇ ಇದೀಗ ಕನ್ನಡದ ಸ್ಟಾರ್ ನಟನೋರ್ವನ ಹೆಸರು ಡ್ರಗ್ಸ್ ದಂಧೆಯಲ್ಲಿ ಕೇಳಿಬಂದಿದೆ. ಆ ಸ್ಟಾರ್ ನಟನ ಹೆಸರನ್ನು ಕೇಳಿ ಸಿಸಿಬಿ ಪೊಲೀಸರೇ ಒಮ್ಮೆ ಬೆಚ್ಚಿಬಿದ್ದಿದ್ದಾರೆ. ಇನ್ನು ಸಂಜನಾ ಹಾಗೂ ರಾಗಿಣಿ ಆ ಸ್ಟಾರ್ ನಟನ ಬಗ್ಗೆ ಸುಳಿವು ನೀಡಿದ್ದಾರೆ.

ಸ್ಯಾಂಡಲ್ ವುಡ್ ನ ಆ ಖ್ಯಾತ ನಟ ಕ್ಯಾಸಿನೋ ಗೀಳು ಅಂಟಿಸಿಕೊಂಡಿದ್ದು, ಈಗಾಗಲೇ ಬರೋಬ್ಬರಿ 30 ಕೋಟಿ ರೂಪಾಯಿ ಹಣವನ್ನು ಕ್ಯಾಸಿನೋದಲ್ಲಿ ಕಳೆದಿದ್ದಾನೆ. ಅಷ್ಟೇ ಅಲ್ಲಾ ಬುಕ್ಕಿಗಳ ಕೈಯಲ್ಲಿ ಕೋಟಿ ಕೋಟಿ ಹಣವನ್ನು ಪಡೆದು ಶ್ರೀಲಂಕಾ, ಗೋವಾಕ್ಕೆ ತೆರಳಿ ಕ್ಯಾಸಿನೋದಲ್ಲಿ ಹಣವನ್ನು ಕಳೆದುಕೊಂಡಿದ್ದಾನಂತೆ. ಪ್ರತೀ ಬಾರಿಯೂ ಬರೋಬ್ಬರಿ 2 ಕೋಟಿ ರೂಪಾಯಿ ಹಣವನ್ನು ಕಳೆದು ಬರುತ್ತಿದ್ದ ಅನ್ನೋ ಮಾಹಿತಿ ಇದೀಗ ಸಿಸಿಬಿ ಪೊಲೀಸರಿಗೆ ಲಭ್ಯವಾಗಿದೆ.

ಸೂಪರ್ ಸ್ಟಾರ್ ನಟನ ಹೆಸರು ಕೇಳಿಬಂದ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳು ಕೂಡ ಅಲರ್ಟ್ ಆಗಿದ್ದಾರೆ. ನಟನ ಕುರಿತು ಸಾಕ್ಷಾಧಾರ ಗಳನ್ನು ಕಲೆಹಾಕುವ ಕಾರ್ಯವನ್ನು ಮಾಡುತ್ತಿದ್ದಾರೆ. ಕ್ಯಾಸಿನೋದಲ್ಲಿ ಕೋಟ್ಯಾಂತರ ರೂಪಾಯಿ ಹಣವನ್ನು ಆ ನಟ ಹೂಡಿಕೆ ಮಾಡಿರುವುದರ ಹಿಂದೆ ಡ್ರಗ್ಸ್ ಮಾಫಿಯಾದ ನೆರಳಿರೋ ಅನುಮಾನ ವ್ಯಕ್ತವಾಗುತ್ತಿದೆ. ಅಲ್ಲದೇ ಸ್ಟಾರ್ ನಟನಿಗೆ ಡ್ರಗ್ಸ್ ಮಾಫಿಯಾದ ನಂಟು ಇದೆಯಾ ಅನ್ನೋ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಈಗಾಗಲೇ ಸ್ಯಾಂಡಲ್ ವುಡ್ ನಟಿ ಮಣಿಯರಾದ ರಾಗಿಣಿ ಹಾಗೂ ಸಂಜನಾರಿಗೆ ಮಾರ್ನಿಂಗ್ ಶಾಕ್ ಕೊಟ್ಟಿದ್ದ ಸಿಸಿಬಿ ಸ್ಟಾರ್ ನಟನಿಗೂ ಮಾರ್ನಿಂಗ್ ಶಾಕ್ ಕೊಡುವ ಸಾಧ್ಯತೆಯ ದಟ್ಟವಾಗಿದೆ.