ಮಂಡ್ಯ : ಬೆಂಗಳೂರಿನಲ್ಲಿ ಪುನೀತ್ ರಾಜ್ ಕುಮಾರ್ ( Puneeth Raj Kumar)11 ನೇ ದಿನದ ತಿಥಿಕಾರ್ಯ ಶಾಸ್ತ್ರೋಕ್ತವಾಗಿ ನೆರವೇರಿದ್ದರೇ ಅತ್ತ ನಟ ಹಾಗೂ ಡಾ.ರಾಜ್ ಕುಟುಂಬದ ಆಪ್ತ ಮತ್ತು ಅಭಿಮಾನಿ ವಿನೋದ್ ರಾಜ್ (Vinod Raj) ಕೂಡ ತಿಥಿ ಕಾರ್ಯ ನಡೆಸಿ ಗೌರವ ಸಲ್ಲಿಸಿದ್ದಾರೆ.
ಮಂಡ್ಯದ ಶ್ರೀರಂಗಪಟ್ಟಣದ ಗಂಜಾಮ್ ಬಳಿ ಸಂಗಮ ಕ್ಕೆ ಆಗಮಿಸಿದ ವಿನೋದ್ ರಾಜ್ ಹಿಂದೂ ಸಂಪ್ರದಾಯದಂತೆ ತಿಥಿ ಕಾರ್ಯ ನೆರವೇರಿಸಿದ್ದಾರೆ. ಅಲ್ಲದೇ ಆತ್ಮಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಕಾವೇರಿ ನದಿ ತೀರದಲ್ಲಿ ಇಬ್ಬರು ವೈದಿಕರ ಜೊತೆ ಪುನೀತ್ ರಾಜ್ ಕುಮಾರ್ ತಿಥಿ ಕಾರ್ಯನಡೆಸಿದ ವಿನೋದ್ ರಾಜ್ ಪಿಂಡ ಪ್ರದಾನ ಮಾಡಿದ್ದಾರೆ. ಮಾತ್ರವಲ್ಲ ಆಶ್ಲೇಷಾ ಬಲಿ ಹಾಗೂ ನಾರಾಯಣ ಬಲಿ ಪೂಜೆ ನೆರವೇರಿಸಿದ್ದಾರೆ. ಕಾವೇರಿ ನದಿಯಲ್ಲಿ ತರ್ಪಣ ಬಿಟ್ಟು ಪುನೀತ್ ಗೆ ತಮ್ಮ ಗೌರವ ಸಲ್ಲಿಸಿದ್ದಾರೆ. ಈ ವೇಳೆ ವಿನೋದ್ ರಾಜ್ ತಾಯಿ ಹಾಗೂ ಹಿರಿಯ ನಟಿ ಲೀಲಾವತಿ ಕೂಡ ಹಾಜರಿದ್ದರು.

ಪುನೀತ್ ನಿಧನದ ಬಳಿಕ ಆಸ್ಪತ್ರೆಗೆ ಭೇಟಿ ನೀಡಿದ್ದ ವಿನೋದ್ ರಾಜ್ ಹಾಗೂ ಲೀಲಾವತಿ ಪುನೀತ್ ಕಂಡು ಕಣ್ಣೀರಿಟ್ಟಿದ್ದರು. ಮಾತ್ರವಲ್ಲ ಈ ಸಾವು ನ್ಯಾಯವಲ್ಲ ಎಂದು ನೊಂದು ಮಾತನಾಡಿದ್ದರು. ಲೀಲಾವತಿ ಚಿಕ್ಕ ಮಗುವಿನಿಂದ ಪುನೀತ್ ರನ್ನು ಎತ್ತಿ ಆಡಿಸಿದ ದೃಶ್ಯ ನೆನಪಿಸಿಕೊಂಡು ಭಾವುಕರಾಗಿದ್ದರು.

ಹಿರಿಯ ನಟಿ ಲೀಲಾವತಿ ಡಾ.ರಾಜ್ ಕುಮಾರ್ ಕುಟುಂಬದ ಜೊತೆ ಆತ್ಮೀಯ ನಂಟು ಹೊಂದಿದ್ದು ಯಾವುದೇ ಸಂದರ್ಭದಲ್ಲೂ ರಾಜ್ ಕುಟುಂಬದ ಕಷ್ಟಕ್ಕೆ ಮಿಡಿಯುತ್ತಾರೆ. ಈ ಹಿಂದೆ ನಟ ಶಿವರಾಜ್ ಕುಮಾರ್ ಅನಾರೋಗ್ಯದಿಂದ ಬಳಲಿ ಆಸ್ಪತ್ರೆ ಸೇರಿದಾಗಲೂ ನಟಿ ಲೀಲಾವತಿ ಆಸ್ಪತ್ರೆಗೆ ಭೇಟಿ ನೀಡಿ ಶಿವಣ್ಣ ಆರೋಗ್ಯ ವಿಚಾರಿಸಿದ್ದರು.
ಇದನ್ನೂ ಓದಿ : ಪುನೀತ್‌ಗೆ ಪದ್ಮಶ್ರೀ : ಪ್ರಧಾನಿ ಮೋದಿಗೆ ಪತ್ರದ ಬರೆದ ರೇಣುಕಾಚಾರ್ಯ
ಇದನ್ನೂ ಓದಿ : ಸರ್ಕಾರದ ಸಹಕಾರಕ್ಕೆ ಧನ್ಯವಾದ: ಜಿಲ್ಲಾಧಿಕಾರಿಗಳಿಗೆ ಪುನೀತ್ ಪತ್ನಿ ಅಶ್ವಿನಿ ಪತ್ರ
(Vinod Raj, who performed the Punit Raj Kumar 11th day rituals)