ಸೋಮವಾರ, ಏಪ್ರಿಲ್ 28, 2025
HomeCinemaSudeep: ಹೆಬ್ಬುಲಿ ಬರ್ತಡೆಗೇ ಜಂಬೋವೀರನ ಗಿಫ್ಟ್: ವೈರಲ್ ಆಯ್ತು ಸ್ಪೆಶಲ್ ಪೋಟೋ!

Sudeep: ಹೆಬ್ಬುಲಿ ಬರ್ತಡೆಗೇ ಜಂಬೋವೀರನ ಗಿಫ್ಟ್: ವೈರಲ್ ಆಯ್ತು ಸ್ಪೆಶಲ್ ಪೋಟೋ!

- Advertisement -

ಭಾರತೀಯ ಕ್ರಿಕೆಟ್ ನ ದಂತಕತೆ ಹಾಗೂ ಕನ್ನಡಿಗ ಅನಿಲ್ ಕುಂಬ್ಳೆ ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಸುದೀಪ್ ಬರ್ತಡೆಗೇ ಸ್ಪೆಶಲ್ ಗಿಫ್ಟ್ ನೀಡಿದ್ದು, ಸುದೀಪ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

ಸಪ್ಟೆಂಬರ್ 2 ರಂದು ಕಿಚ್ಚ ಸುದೀಪ್, 50 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಸುದೀಪ್ ಅಭಿಮಾನಿಗಳಿಗೆ ಹಬ್ಬವಾಗಿರೋ ಈ ದಿನವನ್ನು ಸೆಲಿಬ್ರೆಟ್ ಮಾಡೋಕೆ ಅದಾಗಲೇ ಸಿದ್ಧತೆ ನಡೆದಿದೆ.

ಈ ಮಧ್ಯೆ ಸುದೀಪ್ ಬರ್ತಡೇಗೆ ಕಾಮನ್ ಡಿಪಿ ಸಿದ್ಧವಾಗಿದ್ದು, ಇದನ್ನು ಕನ್ನಡಿಗ ಅನಿಲ್ ಕುಂಬ್ಳೆ ರಿಲೀಸ್ ಮಾಡಿದ್ದಾರೆ. ಬಾದ್ ಷಾ ಎಂಬ ಟೈಟಲ್ ನ ಈ ಡಿಪಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಡಿಪಿ ಬಿಡುಗಡೆ ಮಾಡಿರೋ ಅನಿಲ್ ಕುಂಬ್ಳೆ,  ನನ್ನ ಸ್ನೇಹಿತನ ಹುಟ್ಟುಹಬ್ಬಕ್ಕೆ ಕಾಮನ್ ಡಿಪಿ ರಿಲೀಸ್ ಮಾಡಲು ಖುಷಿಯಾಗುತ್ತಿದೆ. ನಮ್ಮನ್ನು ಹೀಗೆ ಇನ್ಸಸ್ಪೈರ್ ಮಾಡ್ತೀರಿ ಎಂದು ಟ್ವೀಟ್ ಮಾಡಿದ್ದಾರೆ.

ಕೊರೋನಾ ಕಾರಣಕ್ಕೆ ಕಳೆದ ಎರಡು ವರ್ಷದಿಂದ ಸುದೀಪ್ ಅದ್ದೂರಿ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ.  ಈ ಭಾರಿಯೂ ಹುಟ್ಟುಹಬ್ಬ ಆಚರಿಸಿಕೊಳ್ಳೋದು ಅನುಮಾನ. ಆದರೆ ಸುದೀಪ್ ಹುಟ್ಟುಹಬ್ಬದಂದು ಅವರ ಬಹುನೀರಿಕ್ಷಿತ ಸಿನಿಮಾ ಕೋಟಿಗೊಬ್ಬ-2 ರಿಲೀಸ್ ಡೇಟ್ ಅನೌನ್ಸ್ ಆಗೋ ಸಾಧ್ಯತೆ ಇದೆ.

ಇದನ್ನೂ ಓದಿ : ಬಡ ಪ್ರೇಮಿಗಳ ಪ್ರೀತಿಗೆ ಶಕ್ತಿ ತುಂಬಿದ ಸುದೀಪ್: ಕಿಚ್ಚ ಟ್ರಸ್ಟ್ ನಿಂದ ಸಿಕ್ತು ಮದುವೆಗೆ ನೆರವು!!

ಇದನ್ನೂ ಓದಿ : ರಾಖಿ ಹಬ್ಬದಲ್ಲಿ ಮಿಂಚಿದ ರಾಕಿಂಗ್ ಸ್ಟಾರ್ ಮಕ್ಕಳು: ಆಯ್ರಾ-ಯಥರ್ವ್ ಕ್ಯೂಟ್ ಪೋಟೋ ವೈರಲ್!

RELATED ARTICLES

Most Popular