ಸ್ಯಾಂಡಲ್ ವುಡ್ ಹಾಸ್ಯನಟ ಚಿಕ್ಕಣ್ಣ ಮತ್ತು ಟಗರು ಸಿನಿಮಾ ಖ್ಯಾತಿಯ ತ್ರಿವೇಣಿ ರಾವ್ ಅವರಿಗೆ ವಿವಾಹವಾಗಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆದ್ರೆ ಸುದ್ದಿಯನ್ನು ಕೇಳಿದ್ದ ಜನರು ಚಿಕ್ಕಣ್ಣ ಕೊನೆಗೂ ಮದುವೆ ಆದ್ರಲ್ಲಾ ಅಂತಾ ಮಾತಾಡಿಕೊಂಡಿದ್ರು. ಅದ್ರಲ್ಲೂ ಚಿಕ್ಕಣ್ಣ ಗುಟ್ಟಾಗಿ ಮದುವೆ ಆಗಿದ್ಯಾಕೆ ಅಂತಾನೂ ಪ್ರಶ್ನಿಸುತ್ತಿದ್ರು. ಈ ನಡುವಲ್ಲೇ ಟಗರು ಸರೋಜಾ ಖ್ಯಾತಿಯ ನಟಿ ತ್ರಿವೇಣಿ ರಾವ್ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ನಟಿ ತ್ರಿವೇಣಿ ರಾವ್ ಟಗರು’ಸಿನಿಮಾದಲ್ಲಿ ಸರೋಜ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಅಂದಿನಿಂದ ಟಗರು ಸರೋಜ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ.

ಚಿಕ್ಕಣ್ಣ ಮತ್ತು ಟಗರು ಸರೋಜ ವಧು-ವರರ ಉಡುಪಿನಲ್ಲಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅದನ್ನು ನೋಡಿ ಇವರಿಬ್ಬರಿಗೂ ಮದುವೆಯಾಗಿದೆ ಎಂದು ಅನೇಕರು ಶುಭಾಶಯ ಕೋರುತ್ತಿದ್ದರು.

ಇದೀಗ ಚಿಕ್ಕಣ್ಣ ಹಾಗೂ ತ್ರಿವೇಣಿ ರಾವ್ ಮದುವೆಯಾಗಿರುವ ಸುದ್ದಿ ಸುಳ್ಳು ಎಂದು ಟಗರು ಸರೋಜ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.