ನಟ ಚಿರಂಜೀವಿ ಸರ್ಜಾ ಅಗಲಿಕೆಯ ಬೆನ್ನಲ್ಲೇ ಸ್ಯಾಂಡಲ್ ವುಡ್ ಮಂದಿ ಮೇಘನಾ ರಾಜ್ ಸರ್ಜಾ ಮನೆಗೆ ಭೇಟಿ ಕೊಡುತ್ತಿದ್ದಾರೆ. ನಟ ಪ್ರಥಮ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೊಸೆ ಸ್ಮಿತಾ ಮೇಘನಾ ರಾಜ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಗರ್ಭಿಣಿಯಾಗಿರುವ ಮೇಘನಾರಾಜ್ ಸದ್ಯ ತಾಯಿ ತಂದೆಯ ಜೊತೆಗೆ ಅಮ್ಮನ ಮನೆಯಲ್ಲಿದ್ದಾರೆ. ಚಿರು ಇಲ್ಲದ ನೋವಿನ ದಿನಗಳನ್ನು ಕಳೆಯುತ್ತಿರುವ ಮೇಘನಾ ಅವರಿಗೆ ಧೈರ್ಯ ತುಂಬುವ ಕಾರ್ಯವನ್ನು ಮಾಡಲಾಗುತ್ತಿದೆ.

ಇಂತಹ ಸಂದರ್ಭದಲ್ಲಿ ಸ್ನೇಹಿತರು ಹಾಗೂ ಹಿತೈಶಿಗಳ ಒಂದೊಳ್ಳೆ ಮಾತು ಅವರ ಮನಸ್ಸಿಗೆ ಸಮಾಧಾನ ನೀಡುತ್ತದೆ. ಇದೇ ಕಾರಣದಿಂದಲೇ ಸ್ಮಿತಾ ಮತ್ತು ಪ್ರಥಮ್ ಅವರು ಭೇಟಿ ನೀಡಿದ್ದಾರೆ.

ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ಸ್ನೇಹಿತರಾಗಿದ್ದ ನಟ ಪ್ರಥಮ್ ಒಂದಿಷ್ಟು ಹೊತ್ತು ಮನೆಯಲ್ಲಿದ್ದು ಮೇಘನಾ ಅವರಿಗೆ ಧೈರ್ಯ ತುಂಬುವ ಕಾರ್ಯವನ್ನು ಮಾಡಿದ್ದಾರೆ.