ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ರಿಯಲಿಸ್ಟಿಕ್ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಸೂಪರ್ ಹೀರೋ ಆಗಿದ್ದ ಉಪ್ಪಿ ವಿಲನ್ ಪಾತ್ರದಲ್ಲಿ ತೆರೆಗೆ ಬರಲಿದ್ದಾರೆ. ಅಂದಹಾಗೆ ಈ ಸಿನಿಮಾ ಬರ್ತಿರೋದು ಕನ್ನಡದಲ್ಲಾ ಬದಲಾಗಿ ತೆಲುಗಿನಲ್ಲಿ.

ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ಅವರ ‘ಸರ್ಕಾರ ವಾರಿ ಪಾಠ’ ಸಿನಿಮಾದಲ್ಲಿ ಅಭಿನಯ ಚಿಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು.

ಆದ್ರೀಗ ಕಿಚ್ಚ ಸುದೀಪ್ ಮಹೇಶ್ ಬಾಬು ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ. ಸುದೀಪ್ ಬದಲಿಗೆ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಕೇಲಿಬರುತ್ತಿದೆ.

ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ್ ಸಿನಿಮಾದ ಟೈಟಲ್ ಫಿಕ್ಸ್ ಮಾಡುವ ಮೊದಲೇ ಚಿತ್ರತಂಡ ಉಪೇಂದ್ರ ಅವರನ್ನು ಸಂಪರ್ಕ ಮಾಡ ಮಾತುಕತೆ ನಡೆಸಿದ್ದಾರೆ.

ನಟ ಮಹೇಶ್ ಬಾಬು ನಟನೆಯ ಸಿನಿಮಾದಲ್ಲಿ ಉಪ್ಪಿ ನಟಿಸೋದು ಬಹುತೇಕ ಖಚಿತವೆನ್ನಲಾಗುತ್ತಿದೆ. ಆದ್ರೆ ನಟ ಉಪೇಂದ್ರ ಅವರು ಈ ಕುರಿತು ಯಾವುದೇ ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ. ಉಪ್ಪಿ ಮತ್ತು ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾ ಬರುತ್ತೆ ಅನ್ನೋ ಸುದ್ದಿ ಕೇಳುತ್ತಿದ್ದಂತೆಯೇ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.