
ಸ್ಯಾಂಡಲ್ ವುಡ್ ನಟ ರಾಂಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಕೊನೆಗೂ ಹಲವು ಸಮಯಗಳ ನಂತರ ಮಗನಿಗೆ ನಾಮಕರಣ ಮಾಡಿದ್ದಾರೆ.

ಯಶ್ ಮತ್ತು ರಾಧಿಕಾ ತಮ್ಮ ಮುದ್ದು ಮಗನಿಗೆ ಯಥರ್ವ್ ಯಶ್ ಎಂದು ನಾಮಕರಣ ಮಾಡಿದ್ದಾರೆ. ನಾಮಕರಣ ಸಂಭ್ರಮದ ವಿಡಿಯೋವನ್ನು ಯಶ್ ಮತ್ತು ರಾಧಿಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಕಳೆದ ವರ್ಷದ ಅಕ್ಟೋಬರ್ 30ರಂದು ರಾಧಿಕಾ ಪಂಡಿತ್ ಫೋರ್ಟಿಸ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಯಶ್ ಮನೆಗೆ ಜೂನಿಯರ್ ಯಶ್ ಆಗಮಿಸಿ ಆರು ತಿಂಗಳ ಬಳಿಕ ಯಶ್ ಮತ್ತು ರಾಧಿಕಾ ಅಭಿಮಾನಿಗಳಿಗೆ ಜೂನಿಯರ್ ರಾಜಾಹುಲಿಯ ದರ್ಶನ ಮಾಡಿಸಿದ್ದರು.

ನಾಮಕರಣದ ಕಾರ್ಯಕ್ರಮವನ್ನು ಯಶ್ ಸರಳವಾಗಿ ಆಚರಿಸಿದ್ದು, ಕಾರ್ಯಕ್ರಮದಲ್ಲಿ ಎರಡು ಕುಟುಂಬದರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು.

ಮಗನ ನಾಮಕರಣದ ವಿಡಿಯೋ ಶೇರ್ ಮಾಡಿರುವ ಸ್ಟಾರ್ ದಂಪತಿ“ನಮ್ಮನ್ನ ಸಂಪೂರ್ಣಗೊಳಿಸಿದವನು. ರಾರಾಜಿಸುತ ಬದುಕು ಮಗನೇ. ಹರಸಿ ಹಾರೈಸಿ” ಬರೆದುಕೊಂಡಿದ್ದಾರೆ.
