Sanket Kannada Movie : ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಅಭಿರುಚಿಯ ಸಿನಿಮಾಗಳು ತೆರೆಗೆ ಬಂದು ಸಕ್ಸಸ್ ಕಾಣುತ್ತಿದೆ. ಇದೀಗ ಮತ್ತೊಂದು ಹೊಸ ಸಿನಿಮಾ ಬಿಡುಗಡೆ ಸಿದ್ದವಾಗಿದೆ. ಆದ್ರೆ ಈ ಸಿನಿಮಾ ಬಿಡುಗಡೆಗೂ ಮುನ್ನ ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿದೆ. ಕನ್ನಡ ಸಿನಿಮಾ ರಂಗದ ಮಟ್ಟಿಗೆ ಹೊಸ ಶೈಲಿಯಲ್ಲಿ ತೆರೆ ಕಾಣುತ್ತಿರುವ ಸಿನಿಮಾ ಸಾಂಕೇತ್.

ವಿಭಿನ್ನ ಹೆಸರಿನ ಮೂಲಕ ಸಾಕಷ್ಟು ಸೌಂಡ್ ಮಾಡುತ್ತಿರುವ ಸಾಂಕೇತ್ ಸಿನಿಮಾದ ಹೊಸ ಶೈಲಿಯ ಮೇಕಿಂಗ್ಗ್ ಈಗಾಗಲೇ ಸಿನಿ ಪ್ರೇಕ್ಷಕರ ಗಮನ ಸೆಳೆದಿದೆ. ಮಹಿಳಾ ನಿರ್ದೇಶಕಿ ಜೋಸ್ನಾ ರಾಜ್ ಈಗಾಗಲೇ ಅದ್ಬುತ ಮೇಕಿಂಗ್ ಮೂಲಕ ಸೈ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ : ಕರುನಾಡ ಚಕ್ರವರ್ತಿಯ ಬಹು ನಿರೀಕ್ಷಿತ ಲುಕ್ ಬಿಡುಗಡೆ ಮಾಡಿದ “ಉತ್ತರಕಾಂಡ”
ನಾಯಕ ನಟಿ ಚೈತ್ರಾ ಶೆಟ್ಟಿ, ನಾಯಕ ನಟ ಚಿಕ್ಕಿ ರಾವ್ ಮನೋಜ ನಟನೆಯಲ್ಲಿ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ. ರೂಪ ಶ್ರೀ ವರ್ಕಾಡಿ, ಮೋಹನ್ ಶೇಣಿ, ನಿರೀಕ್ಷಾ ಶೆಟ್ಟಿ, ರಾಹುಲ್ ಅಮೀನ್, ನಿರೀಕ್ಷಾ ರಾಣಿ, ಮೇಘನಾ ರಕ್ಷಿತ್, ರಜೀತ್ ಕದ್ರಿ ಸೇರಿದಂತೆ ಹಲವು ನಟ, ನಟಿಯರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ : ಕೈವಾ ಬೆಡಗಿ ಮೇಘಾ ಶೆಟ್ಟಿ ಕಮಾಲ್ ಪೋಸ್: ವೈಟ್ ಡ್ರೆಸ್ ನಲ್ಲಿ ಅನು ಸಿರಿಮನೆ ಮಿಂಚಿಂಗ್
ಖ್ಯಾತ ಸಂಗೀತ ನಿರ್ದೇಶಕ ಕಾರ್ತೀಕ್‌ರಾಜ್ ಅವರ ಹಿನ್ನೆಲೆ ಸಂಗೀತ ಗಮನ ಸೆಳೆದಿದೆ. ಸಾಂಕೇತ್ ಸಿನಿಮಾದ ಪ್ರೀಮಿಯರ್ ಶೋ ನೋಡಿದ ಪ್ರೇಕ್ಷಕರು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ನಿರ್ದೇಶಕಿ ಜೋಸ್ನಾ ರಾಜ್ ಯುವಕನೋರ್ವನ ಜೀವನದ ತಲ್ಲಣಗಳನ್ನು ಸಿನಿಮಾದ ಮೂಲಕ ಹೇಳ ಹೊರಟಿದ್ದಾರೆ.
ಇದನ್ನೂ ಓದಿ : Sonu Gowda : ಯಾರೀ ಸೋನು ಗೌಡ ? ಟಿಕ್ ಟಾಕ್ ಸ್ಟಾರ್ ಸೋನುಶ್ರೀನಿವಾಸ್ ಗೌಡ ಅಸಲಿಯತ್ತೇನು ! ಇಲ್ಲಿದೆ Exclusive ಸ್ಟೋರಿ
Sanket Kannada Movie Released On July 26