ಮಂಗಳವಾರ, ಏಪ್ರಿಲ್ 29, 2025
HomeCinemaSaran Raj passes away : ಖ್ಯಾತ ನಿರ್ದೇಶಕ ಶರಣ್ ರಾಜ್ ಅಪಘಾತದಲ್ಲಿ ನಿಧನ

Saran Raj passes away : ಖ್ಯಾತ ನಿರ್ದೇಶಕ ಶರಣ್ ರಾಜ್ ಅಪಘಾತದಲ್ಲಿ ನಿಧನ

- Advertisement -

ತಮಿಳು ಸಿನಿರಂಗದ ನಟ ಹಾಗೂ ನಿರ್ದೇಶಕ ಶರಣ್‌ರಾಜ್‌ (Saran Raj passes away) ಅವರು ರಸ್ತೆ ಅಪಘಾತದಲ್ಲಿ ತಮ್ಮ ಇಹಲೋಕದ ಪಯಣವನ್ನು ಮುಗಿಸಿದ್ದಾರೆ. ನಿರ್ದೇಶಕ ಶರಣ್‌ರಾಜ್‌ ಮರಣ ಹೊಂದಿದ ಸುದ್ದಿಯು ಗೆಳೆಯರು ಹಾಗೂ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿದೆ. ಹೀಗಾಗಿ ಅವರೆಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಅವರ ಸಾವಿಗೆ ಸಂತಾಪವನ್ನು ಸೂಚಿಸಿದ್ದಾರೆ.

ಸದ್ಯ ಈ ಅಪಘಾತವು ಚೆನ್ನೈನ ಕೆಕೆ ನಗರದಲ್ಲಿ ಸಂಭವಿಸಿದೆ. ನಿನ್ನೆ ತಡರಾತ್ರಿ ಶರಣ್‌ರಾಜ್‌ ಅವರು ಬೈಕ್‌ನಲ್ಲಿ ತೆರಳುತ್ತಿದ್ದಾಗ, ಅದೇ ವೇಳೆಯಲ್ಲಿ ಬಂದ ಪೋಷಕ ನಟ ಪಳನಿಪ್ಪನ್‌ ಅವರು ಶರಣ್‌ ರಾಜ್‌ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಆ ಸಂದರ್ಭದಲ್ಲಿ ಶರಣ್‌ ರಾಜ್‌ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಹೇಳಿದರು.

ಇದನ್ನೂ ಓದಿ : ಹಿಮಾಲಯದ ಕೊರೆವ ಚಳಿಯಲ್ಲೂ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್

ಈ ಘಟನೆ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸ್‌ ಅಧಿಕಾರಿಗಳು, ಪಳನಿಪ್ಪನ್‌ ವಿರುದ್ಧ ಕೇಸ್‌ ದಾಖಲಾಗಿದೆ. ಸದ್ಯ ಶರಣ್‌ ರಾಜ್‌ ಅವರ ಶವವನ್ನು ಮರಣೋತ್ತರ ಪರೀಕ್ಷಗೆ ಕಳುಹಿಸಲಾಗಿದೆ. ಪೋಷಕ ನಟ ಪಳನಿಪ್ಪನ್‌ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಘಟನೆಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

Saran Raj passes away: Famous director Saran Raj passed away in an accident

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular