ನೂರಾರು ಕೋಟಿ ಬಜೆಟ್ ಹಾಕಿ ವಿದೇಶದಲ್ಲಿ ಶೂಟ್ ಮಾಡಿದ ಸಿನಿಮಾ ಹಾಡುಗಳ ನಡುವೆ ಎರಡೇ ದಿನದಲ್ಲಿ ಶೂಟ್ ಮಾಡಿದ ಕನ್ನಡ ಹಾಡೊಂದು 100 ಮಿಲಿಯನ್ ವೀವ್ಸ್ (100 million views) ಪಡೆಯೋ ಮೂಲಕ ರಿಲೀಸ್ ಆದ ನಾಲ್ಕು ವರ್ಷಗಳ ಬಳಿಕ ಹೊಸ ದಾಖಲೆ ಬರೆದಿದೆ. ನಿರ್ದೇಶಕ ಯೋಗರಾಜ್ ಭಟ್ ಬಳಿ ಸಹಾಯಕ ನಿರ್ದೇಶಕರಾಗಿದ್ದ ಮಹೇಶ್ ಕುಮಾರ್ ನಿರ್ದೇಶನದ ಚೊಚ್ಚಲ ಚಿತ್ರ ಅಯೋಗ್ಯ. ನೀನಾಸಂ ಸತೀಶ್ ಹಾಗೂ ರಚಿತಾರಾಮ್ ಜೊತೆಯಾಗಿ ನಟಿಸಿದ್ದ ಈ ಸಿನಿಮಾ ೨೦೧೮ ರಲ್ಲಿ ರಿಲೀಸ್ ಆಗಿತ್ತು. ಸಿನಿಮಾ ಬಾಕ್ಸಾಫೀಸಿನಲ್ಲಿ ಗೆದ್ದಿದ್ದು ಮಾತ್ರವಲ್ಲ ಹಾಡುಗಳು ಸಖತ್ ಸದ್ದು ಮಾಡಿದ್ದವು.
ಈ ಸಿನಿಮಾದ ಯಾಕಮ್ಮಿ, ಏನಮ್ಮಿ ಎಂಬ ಲೋ ಬಜೆಟ್ ನ ಎರಡೇ ಎರಡು ದಿನದಲ್ಲಿ ಗ್ರಾಮೀಣ ಸೊಗಡಿನಲ್ಲಿ ಚಿತ್ರೀಸಲಾದ ಹಾಡು ಈಗ 100 ಮಿಲಿಯನ್ ವೀವ್ಸ್ ಪಡೆಯೋ ಮೂಲಕ ದಾಖಲೆ ಬರೆದಿದೆ. ಅರ್ಜುನ್ ಜನ್ಯ ಕಂಪೋಸ್ ಮಾಡಿರೋ ಈ ಹಾಡು 100 ಮಿಲಿಯನ್ ವೀವ್ಸ್ ಪಡೆದ ಕನ್ನಡದ ಕೆಲವೇ ಕೆಲವು ಹಾಡುಗಳ ಪೈಕಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಏನಮ್ಮಿ ಯಾಕಮ್ಮಿ ಹಾಡು 100 ಮಿಲಿಯನ್ ವೀವ್ಸ್ ಪಡೆದ ಕನ್ನಡದ ನಾಲ್ಕನೇ ಹಾಡಾಗಿದೆ. ಇದಕ್ಕೂ ಮೊದಲು ಶರಣ್ ಅಭಿನಯದ ರ್ಯಾಂಬೋ ಸಿನಿಮಾದ ಚುಟು ಚುಟು ಹಾಡು 100 ಮಿಲಿಯನ್ ವೀವ್ಸ್ ಪಡೆದಿತ್ತು. ಸದ್ಯ ಈ ಹಾಡು 150 ಮಿಲಿಯನ್ ವೀವ್ಸ್ ಪಡೆದಿದೆ. ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದ ಖರಾಬು ಖರಾಬು ಹಾಡು 279 ಮಿಲಿಯನ್ ವೀವ್ಸ್ ಪಡೆದಿದೆ. ಇದರ ಬಳಿಕ ರಾಬರ್ಟ್ ಸಿನಿಮಾದ ಕಣ್ಣೇ ಹೊಡೆಯಾಕ್ ಹಾಡು 112 ಮಿಲಿಯನ್ ವೀವ್ಸ್ ಪಡೆದಿದೆ. ಇದರ ಬಳಿಕ ಈಗ 100 ಮಿಲಿಯನ್ ಗೌರವಕ್ಕೆ ಏನಮ್ಮಿ ಯಾಕಮ್ಮಿ ಹಾಡು ಪಾತ್ರವಾಗಿದೆ.
ಭರ್ಜರಿ ಮೋಹನ್ ಕೊರಿಯೋಗ್ರಫಿ ಮಾಡಿದ್ದ ಈ ಹಾಡನ್ನು ಮಂಡ್ಯದ ಗ್ರಾಮೀಣ ಪರಿಸರದಲ್ಲಿ ಅಪ್ಪಟ ಗ್ರಾಮೀಣ ಬ್ಯಾಕ್ ಗ್ರೌಂಡ್ ನಲ್ಲಿ ಎರಡನೇ ದಿನ ಚಿತ್ರೀಕರಣ ಮಾಡಲಾಗಿತ್ತು. ನಂಜನಗೂಡು, ಪಾಂಡವರಪುರ, ಕರಿ ಗುಡ್ಡ ಸೇರಿದಂತೆ ಹಲವು ಗ್ರಾಮೀಣ ಪ್ರದೇಶದಲ್ಲಿ ಏನಮ್ಮಿ ಯಾಕಮ್ಮಿ ಹಾಡಿಗೆ ನೀನಾಸಂ ಸತೀಶ್ ಹಾಗೂ ರಚಿತಾರಾಮ್ ಹೆಜ್ಜೆ ಹಾಕಿದ್ದರು. ಈ ಹಾಡು 100 ಮಿಲಿಯನ್ ವೀವ್ಸ್ ಪಡೆದಿದ್ದು ದಾಖಲೆಗೆ ಚಿತ್ರತಂಡ ಸಂಭ್ರಮಿಸಿದೆ.
ಇದನ್ನೂ ಓದಿ : ಸುದೀಪ್ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆ : ವಿಕ್ರಾಂತ್ ರೋಣ ರಿಲೀಸ್ ಮುಂದೂಡಿಕೆ
ಇದನ್ನೂ ಓದಿ : ಅಪ್ಪುಗೆ ವಿಭಿನ್ನ ಗೌರವ ಸಲ್ಲಿಕೆ : ಜೇಮ್ಸ್ ಸಿನಿಮಾ ರಿಲೀಸ್ ವೇಳೆ ತೆರೆಗೆ ಬರಲ್ಲ ಬೇರೆ ಸಿನಿಮಾ !
( Sathish Ninasam and Rachitha Ram New Record : Ayogya movie Yenammi Yenammi Songs geted 100 million views)