ಬೆಂಗಳೂರು : ಫ್ಯಾಟ್ ಸರ್ಜರಿಯ ವೇಳೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಿನಿಮಾ ಹಾಗೂ ಕಿರುತೆರೆಯ ನಟಿ ಚೇತನಾ ರಾಜ್ (21 ವರ್ಷ) (Chetna Raj Dies) ಸಾವನ್ನಪ್ಪಿದ್ದಾರೆ. ಪೋಷಕರ ಅನುಮತಿಯನ್ನು ಪಡೆಯದೆಯೇ ಸರ್ಜರಿ ಮಾಡಲಾಗಿದ್ದು, ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಪೋಷಕರು ಆರೋಪಿಸಿದ್ದಾರೆ.
ಬೆಂಗಳೂರಿನ ಡಾ.ಶೆಟ್ಟಿಸ್ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ನಟಿ ಚೇತನಾ ರಾಜ್ ಫ್ಯಾಟ್ ಸರ್ಜರಿಯನ್ನು ಮಾಡಿಸಿಕೊಂಡಿದ್ದಾರೆ. ಈ ವೇಳೆಯಲ್ಲಿ ಶ್ವಾಸಕೋಶದಲ್ಲಿ ನೀರು ಸಂಗ್ರಹವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ವೈದ್ಯರು ಮನೆಯವರ ಅನುಮತಿಯನ್ನೇ ಪಡೆಯದೇ ಸರ್ಜರಿ ನಡೆಸಿದ್ದಾರೆ ಎಂದು ಚೇತನಾ ಸಂಬಂಧಿ ರಾಜಣ್ಣ ಆರೋಪಿಸಿದ್ದಾರೆ.
ಕಿರುತೆರೆಯ ಗೀತಾ, ದೊರೆಸಾನಿ ಸೇರಿದಂತೆ ಹಲವು ಧಾರವಾಹಿ ಹಾಗೂ ಸಿನಿಮಾಗಳಲ್ಲಿಯೂ ಚೇತನಾ ರಾಜ್ ನಟಿಸಿದ್ದರು. ಇನ್ನಷ್ಟೇ ತೆರೆ ಕಾಣಬೇಕಾಗಿದ್ದ ಹವಾಯಾಮಿ ಸಿನಿಮಾದಲ್ಲಿಯೂ ಚೇತನಾ ನಟಿಸಿದ್ದರು. ಮಗಳ ಶವದ ಮುಂದೆ ತಾಯಿ ಕಣ್ಣೀರು ಸುರಿಸುತ್ತಿದ್ದಾರೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಸುಬ್ರಹ್ಮಣ್ಯ ನಗರ ಠಾಣೆಯ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ : ಹನಿಟ್ರ್ಯಾಪ್ ಗೆ ಬಿಜೆಪಿ ಮುಖಂಡ ಬಲಿ : ಡೆತ್ ನೋಟ್ ನಲ್ಲಿ ಬಯಲಾಯ್ತು ಸತ್ಯ
ಇದನ್ನೂ ಓದಿ : liquor Rate decline : ಮದ್ಯ ಪ್ರಿಯರಿಗೆ ಸಿಹಿಸುದ್ದಿ : ಇಳಿಕೆಯಾಗಲಿದೆ ಮದ್ಯದ ದರ
Serial Actress Chetna Raj Dies During Fat Surgery