ಸೋಮವಾರ, ಏಪ್ರಿಲ್ 28, 2025
HomeCinemaAryan Khan entry Bollywood : ಬಾಲಿವುಡ್ ಗೆ ಕಿಂಗ್ ಖಾನ್ ಪುತ್ರ : ಹೀರೋ...

Aryan Khan entry Bollywood : ಬಾಲಿವುಡ್ ಗೆ ಕಿಂಗ್ ಖಾನ್ ಪುತ್ರ : ಹೀರೋ ಆಗ್ತಿದ್ದಾರಾ ಆರ್ಯನ್ ಖಾನ್

- Advertisement -

ಬಾಲಿವುಡ್ ನ ಕಿಂಗ್ ಖಾನ್ ಖ್ಯಾತಿಯ ಶಾರೂಕ್ ಈಗಲೂ ಸ್ಟಾರ್ ನಟ. ಬಾಲಿವುಡ್ ನಲ್ಲಿ ಶಾರೂಖ್ ಒಂದು ಕಾಲದಲ್ಲಿ ಅನಭಿಷಿಕ್ತ ದೊರೆಯಂತೆ‌ ಮೆರೆದವರು.ಈಗಲೂ ಶಾರೂಕ್ ಖಾನ್ ಬಹುಬೇಡಿಕೆಯ ನಟರೇ. ಈಗ ಈ ಸಾಲಿಗೆ ಶಾರೂಖ್ ಉತ್ತರಾಧಿಕಾರಿಯೊಬ್ಬರು ಸೇರ್ಪಡೆಗೊಳ್ಳುತ್ತಿದ್ದಾರೆ.‌ ಕಳೆದ ವರ್ಷ ದೇಶದಾದ್ಯಂತ‌ ಸಂಚಲನ ಮೂಡಿಸಿದ್ದ ಶಾರೂಖ್ ಪುತ್ರ ಆರ್ಯನ್ ಖಾನ್ (Aryan Khan entry Bollywood )ಈಗ ಬಾಲಿವುಡ್ ಗೆ ಎಂಟ್ರಿಕೊಡಲು ಸಿದ್ಧವಾಗಿದ್ದಾರೆ.

ಹಾಗಂತ ಆರ್ಯನ್ ಖಾನ್ ಹೀರೋ ರೂಪದಲ್ಲಿ ಬಾಲಿವುಡ್ ಗೆ ಎಂಟ್ರಿಕೊಡ್ತಿದ್ದಾನೆ ಅಂತ ನೀವಂದ್ರುಕೊಂಡ್ರೇ ಅದು ತಪ್ಪು. ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಬಾಲಿವುಡ್ ಗೆ ಎಂಟ್ರಿಕೊಡ್ತಿರೋದು ಬರಹಗಾರನಾಗಿ. ಹೌದು ಆರ್ಯನ್ ಖಾನ್ ಒಂದು ಚಿತ್ರಕಥೆ ಹಾಗೂ ಮತ್ತೊಂದು ವೆಬ್ ಸೀರಿಸ್ ಕತೆಯೊಂದಿಗೆ ಸಿದ್ಧವಾಗಿದ್ದಾರೆ. ಈ ಚಿತ್ರಕಥೆ ಹಾಗೂ ವೆಬ್ ಸೀರಿಸ್ ಜೊತೆ ಆರ್ಯನ್ ಖಾನ್ ಬಾಲಿವುಡ್ ಗೆ ಬರ್ತಿದ್ದಾರೆ. ಅದರಲ್ಲೂ ವೆಬ್ ಸೀರಿಸ್ ನ್ನು ಸ್ವತಃ ಆರ್ಯನ್ ಖಾನ್ ನಿರ್ದೇಶನ ಮಾಡಲಿದ್ದಾರಂತೆ.ಇಷ್ಟಕ್ಕೂ ಕಿಂಗ್ ಖಾನ್ ಪುತ್ರ ಯಾವುದೇ ಸಿದ್ಧತೆ ಇಲ್ಲದೇ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾನೆ ಎಂದು ನೀವಂದುಕೊಂಡಿದ್ರೇ ಅದು ತಪ್ಪು.

ಆರ್ಯನ್ ಖಾನ್, ದಕ್ಷಿಣ ಕ್ಯಾಲಿಪೋರ್ನಿಯಾದ ವಿವಿ ಯಿಂದ ಕಲೆ, ಸಿನಿಮಾ ಹಾಗೂ ಟಿವಿ ವಿಭಾಗದಲ್ಲಿ ಪದವಿ ಮುಗಿಸಿದ್ದಾರೆ. ಅಲ್ಲದೇ ಈ ಅನುಭವ ವನ್ನೇ ಬಳಸಿಕೊಂಡು ಈಗ ಒಂದು ಸಿನಿಮಾ ಸ್ಟೋರಿ ಹಾಗೂ ವೆಬ್ ಸೀರಿಸ್ ಕತೆ ಜೊತೆ ಬಂದಿದ್ದಾರೆ. ತಮ್ಮ ವೆಬ್ ಸೀರಿಸ್ ಸ್ಟೋರಿಯ ಬಗ್ಗೆ ಈಗಾಗಲೇ ಆರ್ಯನ್ ಖಾನ್ ಒಂದು ಒಟಿಟಿ ಜೊತೆ ಮಾತುಕತೆ ನಡೆಸಿದ್ದು ಒಟಿಟಿ ಆರ್ಯನ್ ಕತೆಯನ್ನು ಮೆಚ್ಚಿದೆಯಂತೆ. ಶೀರ್ಘದಲ್ಲೇ ಕೆಲಸ ಆರಂಭವಾದರೂ ಅಚ್ಚರಿಯೇನಿಲ್ಲ.

ಇನ್ನು ಆರ್ಯನ್ ಖಾನ್ ಸಿದ್ಧಪಡಿಸಿರುವ ಚಿತ್ರಕತೆಯನ್ನು ಶಾರೂಕ್ ಖಾನ್ ತಮ್ಮ ರೆಡ್ ಚಿಲ್ಲಿಸ್ ನಿರ್ಮಾಣ ಸಂಸ್ಥೆಯಿಂದಲೇ ತೆರೆಗೆ ತರಲಿದ್ದಾರಂತೆ. ಆದರೆ ಈ ಸಿನಿಮಾದಲ್ಲಿ ಶಾರೂಕ್ ಖಾನ್ ಅಥವಾ ಆರ್ಯನ್ ಖಾನ್ ನಟಿಸುತ್ತಿಲ್ಲ. ಹೊಸಬರಿಗೆ ಅವಕಾಶ ಸಿಗಲಿದೆ. ಹೀಗೆ ಚಿತ್ರಕತೆಯೊಂದಿಗೆ ಬಾಲಿವುಡ್ ಗೆ ಬರ್ತಿರೋ ಆರ್ಯನ್ ಖಾನ್ ಕಳೆದ ವರ್ಷ ಜೈಲಿನಲ್ಲಿ ಕಳೆದಿದ್ದರು. ಅಕ್ರಮ ಡ್ರಗ್ಸ್ ಪಾರ್ಟಿಯಲ್ಲಿ ಪಾಲ್ಗೊಂಡ ಕಾರಣಕ್ಕೆ ಎನ್ ಸಿಬಿ ಪೊಲೀಸರು ಆರ್ಯನ್ ಖಾನ್ ನನ್ನು ಬಂಧಿಸಿದ್ದರು. ಬಳಿಕ ತಿಂಗಳುಗಳ ಕಾಲ ಆರ್ಯನ್ ಖಾನ್ ಜೈಲಿನಲ್ಲಿ ಕಳೆದಿದ್ದರು.

ಇದನ್ನೂ ಓದಿ : ಕಿರುತೆರೆ ರಿಯಾಲಿಟಿ ಶೋದಲ್ಲಿ ರಚಿತಾರಾಮ್

ಇದನ್ನೂ ಓದಿ : ನ್ಯಾಯಾಂಗ ನಿಂದನೆ ಆರೋಪ : ನಟ ಚೇತನ್ ರನ್ನು ವಶಕ್ಕೆ ಪಡೆದ ಪೊಲೀಸರು

( Shah Rukh Khan son Aryan Khan entry to Bollywood)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular