ಸೋಮವಾರ, ಏಪ್ರಿಲ್ 28, 2025
HomeCinemaಸದ್ದಿಲ್ಲದೇ ಓಟಿಟಿಗೆ ಲಗ್ಗೆ ಇಟ್ಟ ನಟಿ ಸಮಂತಾ ಅಭಿನಯದ ಶಾಕುಂತಲಂ

ಸದ್ದಿಲ್ಲದೇ ಓಟಿಟಿಗೆ ಲಗ್ಗೆ ಇಟ್ಟ ನಟಿ ಸಮಂತಾ ಅಭಿನಯದ ಶಾಕುಂತಲಂ

- Advertisement -

ನಟಿ ಸಮಂತಾ ಕಳೆದ ವರ್ಷದಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೂ, ತಮ್ಮ ನಟನೆಯಿಂದ ದೂರ ಉಳಿದಿರಲಿಲ್ಲ. ಸದ್ಯ ಪೌರಾಣಿಕ ಕಥೆಯನ್ನು ಒಳಗೊಂಡ ಶಾಕುಂತಲಂ ಸಿನಿಮಾದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಸಿನಿಮಾ ಸದ್ಯದಲ್ಲೇ ಓಟಿಟಿಗೆ (Shakunthalam Streaming Now) ಬರಲಿದ್ದು, ಕನ್ನಡದಲ್ಲಿ ಕೂಡ ಪ್ರಸಾರವಾಗಲಿದೆ ಎನ್ನಲಾಗಿದೆ.

ಮೊದಲಿಂದಲೂ ಪೌರಾಣಿಕ ಕಥೆಗಳಿಗೆ ಬೇಡಿಕೆ ಇದ್ದೆ ಇತ್ತು. ಆದರೆ ಪೌರಾಣಿಕ ಕಥಾಹಂದರವನ್ನು ಇಟ್ಟುಕೊಂಡು ಮಾಡಿದ ಸಿನಿಮಾಗಳು ಕೂಡ ಕೆಲವೊಮ್ಮೆ ಸೋಲು ಕಂಡಿತ್ತು. ಅದರಂತೆ ನಟಿ ಸಮಂತಾ ಅಭಿನಯದ ಶಾಕುಂತಲಂ ಸಿನಿಮಾ ಹಾಗೆ ಎಂದಿದೆ. ಈ ಸಿನಿಮಾವನ್ನು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

ಆದರೆ ಈ ಸಿನಿಮಾ ಅಂದುಕೊಂಡಂತೆ ಬಾಕ್ಸ್‌ ಆಫೀಸ್‌ನಲ್ಲಿ ಗಳಿಕೆ ಕಂಡಿರುವುದಿಲ್ಲ. ಹಾಗಾಗಿ ಈ ಸಿನಿಮಾದಲ್ಲಿ ಸಿನಿಪ್ರೇಕ್ಷಕರಲ್ಲಿ ಬೇಸರ ಮೂಡಿಸಿದೆ. ಅದಕ್ಕಾಗಿ ಇರಬೇಕು ಅಬ್ಬರದ ಪ್ರಚಾರ ಇಲ್ಲದೇ ಸೈಲೆಂಟ್‌ ಆಗಿ ಈ ಸಿನಿಮಾವನ್ನು ಅಮೇಜಾನ್‌ ಪ್ರೈಂ ವಿಡಿಯೋ ಮೂಲಕ ಸ್ಟ್ರೀಮ್‌ ಮಾಡಲಾಗುತ್ತದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಶಾಕುಂತಲಂ ಸಿನಿಮಾ ತಯಾರಿ ಆಗಿತ್ತು. ಪೌರಾಣಿಕ ಕಥೆಯನ್ನು ಒಳಗೊಂಡ ಸಿನಿಮಾ ಎಲ್ಲಾ ಪ್ರದೇಶಕ್ಕೂ ಅನ್ವಯ ಆಗುತ್ತದೆ. ಆದ್ದರಿಂದ ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳಿ, ಹಿಂದಿ, ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಈ ಸಿನಿಮಾ ಓಟಿಟಿಯಲ್ಲಿ ಕೂಡ ಎಲ್ಲಾ ಭಾಷೆಯಲ್ಲಿ ಲಭ್ಯವಿದೆ.

ಇದನ್ನೂ ಓದಿ : ಆದಿಪುರುಷ್‌ ಟ್ರೇಲರ್‌ ರಿಲೀಸ್‌ : ರಾಮನ ಪಾತ್ರದಲ್ಲಿ ಮಿಂಚಿದ ನಟ ಪ್ರಭಾಸ್‌

ಇದನ್ನೂ ಓದಿ : ನರೇಶ್‌ ಪವಿತ್ರಾ ಲೋಕೇಶ್‌ ಮತ್ತೆ ಮದುವೆ ಸಿನಿಮಾ ಟ್ರೈಲರ್‌ನಲ್ಲಿದೆ ಗೊತ್ತೆ ?

ಈ ಸಿನಿಮಾದಲ್ಲಿ ನಟಿ ಸಮಂತಾ ರುತು ಪ್ರಭು ಶಕುಂತಲೆಯಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್‌ ಪುತ್ರಿ ಅರ್ಹಾ ಕೂಡ ಈ ಸಿನಿಮಾದಲ್ಲಿ ಮಿಂಚಿದ್ದಾರೆ. ಇನ್ನು ಈ ಸಿನಿಮಾಕ್ಕೆ ಖ್ಯಾತ ನಿರ್ದೇಶಕ ಗುಣಶೇಖರ್‌ ಅವರು ಆ್ಯಕ್ಷನ್​-ಕಟ್ ಹೇಳಿದ್ದಾರೆ. ಗ್ರಾಫಿಕ್ಸ್‌ ಮೂಲಕ ಕಟ್ಟಿಕೊಟ್ಟ ದೃಶ್ಯಾವಾಳಿಗಳು ಪ್ರೇಕ್ಷಕರ ಗಮನ ಸೆಳೆದಿದೆ. ಮೇಕಿಂ ಗುಣಮಟ್ಟ ಕೂಡ ಚೆನ್ನಾಗಿದ್ದರೂ ಕೂಡ ಸಿನಿಮಂದಿರಗಳಲ್ಲಿ ಈ ಸಿನಿಮಾ ಪ್ರೇಕ್ಷಕರನ್ನು ಮೋಡಿ ಮಾಡುವುದರಲ್ಲಿ ಸೋಲುಂಡಿದೆ. ಸದ್ಯ ನಟಿ ಸಮಂತಾ ಇವೆಲ್ಲವನ್ನು ಮರೆತು ಮುಂದಿನ ಸಿನಿಮಾಗಳತ್ತ ಗಮನ ಹರಿಸಿದ್ದಾರೆ.

Shakunthalam Streaming Now : Shakunthalam Starring Actress Samantha, Who Made It To OTT Silently

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular