ಸ್ಯಾಂಡಲ್ ವುಡ್ ಸಿನಿ ಅಭಿಮಾನಿಗಳಿಗೆ ಒಂದಾದ ಮೇಲೊಂದರಂತೆ ಬ್ರೇಕಿಂಗ್ ಸುದ್ದಿಗಳು ಸಿಗ್ತಿವೆ. ಜೇಮ್ಸ್, ಕೆಜಿಎಫ್ 2 ದಂತಹ ಬಿಗ್ ಬಜೆಟ್ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗೀರೋ ಖುಷಿಯಲ್ಲಿದ್ದ ಅಭಿಮಾನಿಗಳ ಸಂಭ್ರಮ ದುಪ್ಪಟ್ಟಾಗಿಸಲು ಕಾಮಿಡಿ ಕಿಂಗ್ ಹಾಗೂ ಹೀರೋ ಶರಣ್ (Sharan) ನಟನೆಯ ಅವತಾರ ಪುರುಷ (Avatara Purusha)ಕೂಡ ತೆರೆಗೆ ಬರೋ ದಿನಾಂಕ ಘೋಷಿಸಿದ್ದಾರೆ.
ಸಿನಿಮಾದ ಕತೆ, ಪೋಸ್ಟರ್, ತಾರಾಗಣ ಹಾಗೂ ಶರಣನ10 ಅವತಾರದಿಂದಲೇ ಸದ್ದು ಮಾಡಿದ ಈ ಸಿನಿಮಾ ಕೊರೋನಾದಿಂದ ಬಿಡುಗಡೆ ವಿಳಂಬಗೊಂಡು ಅಭಿಮಾನಿಗಳಿಗೆ ನಿರಾಸೆ ತಂದಿತ್ತು. ಎಲ್ಲ ಅಂದುಕೊಂಡಂತೆ ಆಗಿದ್ದರೇ ಈ ಸಿನಿಮಾ 2021 ರ ಡಿಸೆಂಬರ್ ನಲ್ಲೇ ತೆರೆಗೆ ಬರಬೇಕಿತ್ತು. ಆದರೆ ಕೊರೋನಾ ಮೂರನೇ ಅಲೆಯ ಕಾರಣಕ್ಕೆ ಈ ಸಿನಿಮಾ ತೆರೆಗೆ ಬರದೇ ಉಳಿದುಕೊಂಡಿತ್ತು. ಈಗ ಕೊರೋನಾ ಅಬ್ಬರ ತಣ್ಣಗಾಗುತ್ತಿದ್ದಂತೆ ಅವತಾರ ಪುರುಷ ಥಿಯೇಟರ್ ನಲ್ಲಿ ಮೋಡಿಮಾಡಲು ಸಿದ್ಧವಾಗಿದ್ದಾನೆ.
ಕಾಮಿಡಿಕಿಂಗ್ ಹಾಗೂ ಫುಲ್ ಟೈಂ ಹೀರೋ ಶರಣ್ ಈ ಸಿನಿಮಾದಲ್ಲಿ ಸಖತ್ ಸಖತ್ ಅವತಾರಗಳನ್ನು ತಾಳಿದ್ದು ಇವರಿಗೆ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ (Ashika Ranganath) ಸಾಥ್ ನೀಡಿದ್ದಾರೆ. ಈ ಜೋಡಿಯನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾತುರರಾಗಿದ್ದಾರೆ. ಈಗ ಅಭಿಮಾನಿಗಳ ಕಾಯುವಿಕೆ ಕೊನೆಗೊಳ್ಳುವಂತ ಸುದ್ದಿಯೊಂದನ್ನು ಚಿತ್ರತಂಡ ನೀಡಿದ್ದು, 2022 ರ ಮೇ ೬ ರಂದು ಸಿನಿಮಾತೆರೆಗೆ ಬರಲಿದೆ ಎಂದಿದೆ. ಈ ಬಗ್ಗೆ ನಿರ್ದೇಶಕ ಸಿಂಪಲ್ ಸುನಿ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕಪ್ಪು ಜಾದು ಶುರುವಾಗುವ ಸಮಯ. ಮೇ ೬ ರಂದು ಬಿಡುಗಡೆ. ನಿಮ್ಮ ಆಶೀರ್ವಾದವಿರಲಿ ಎಂದಿದ್ದಾರೆ. ಸ್ಯಾಂಡಲ್‌ವುಡ್ ಹಲವು ಕಲಾವಿದರ ತಂಡವೇ ಈ ಸಿನಿಮಾದಲ್ಲಿದ್ದು, ಎಲ್ಲರ ಲುಕ್ ಒಳಗೊಂಡ ಪೋಸ್ಟರ್ ನ್ನು ಚಿತ್ರತಂಡ ಶೇರ್‌ಮಾಡಿದೆ.
ನನ್ನ ಸಾವು-ಬದುಕಿನ ಮದ್ಯೆ ಸಣ್ಣ ಎಳೆಯಂತೆ ಇರುವ ನನ್ನ ಕೊನೆಯ ಆಸರೆ #ಅವತಾರಪುರುಷ Releasing on May 6th 2022 .. ನಿಮ್ಮ ಪ್ರಾರ್ಥನೆ ಹಾಗು ಬೆಂಬಲ ನನ್ನ ಜೊತೆಯಿರಲಿ 🙏🕉 pic.twitter.com/32poxScar5
— Pushkara Mallikarjunaiah (@Pushkara_M) March 11, 2022
ಈ ಸಿನಿಮಾವನ್ನು ಸ್ಯಾಂಡಲ್‌ವುಡ್ ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿದ್ದು, ನನ್ನ ಸಾವು ಬದುಕಿನ ಮಧ್ಯೆ ಸಣ್ಣ ಎಳೆಯಂತೆ ಇರುವ ನನ್ನ ಕೊನೆಯ ಆಸರೆ ಅವತಾರ ಪುರುಷ (Avatara Purusha). ನಿಮ್ಮ ಪ್ರಾರ್ಥನೆ ಮತ್ತು ಬೆಂಬಲ ನನ್ನ ಜೊತೆಯಿರಲಿ ಎಂದು ಬರೆದಿದ್ದಾರೆ. ಅವತಾರ ಪುರುಷ ಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದ್ದು, ವಿಲಿಯಮ್ ಡೇವಿಡ್ ಛಾಯಾಗ್ರಹಣ ನೀಡಿದ್ದಾರೆ. ಪೋಸ್ಟರ್ ಹಾಗೂ ಶರಣ್ ಲುಕ್ ನಿಂದ ಸಾಕಷ್ಟು ಕುತೂಹಲ ಮೂಡಿಸಿರುವ ಸಿನಿಮಾ (Avatara Purusha) ರಿಲೀಸ್ ಗೆ ಅಭಿಮಾನಿಗಳು ಕಾದಿದ್ದು, ಶರಣ್ ಗೆ ಈ ಸಿನಿಮಾ ಮತ್ತೊಂದು ಗೆಲುವು ತಂದುಕೊಡುವ ಸಾಧ್ಯತೆ ದಟ್ಟವಾಗಿದೆ.
#ಕಪ್ಪುಜಾದು ಶುರುವಾಗುವ ಸಮಯ#ಮೇ 6 ರಂದು ಬಿಡುಗಡೆ
— ಸುನಿ/SuNi (@SimpleSuni) March 11, 2022
ಎಂದಿನಂತೆ ನಿಮ್ಮ ಸಹಕಾರವಿರಲಿ.. @PushkarFilms @Pushkara_M@realSharaan @AshikaRanganath @williamdaviddop @ArjunJanyaMusic pic.twitter.com/hFOYMvoD8L
ಇದನ್ನೂ ಓದಿ : ಕಿಕ್ ಏರಿಸಲು ಹೊರಟ ಸಮಂತಾಗೆ ಅಭಿಮಾನಿಗಳ ಕಿರಿಕ್
ಇದನ್ನೂ ಓದಿ : ಸ್ಟಾರ್ ಪುತ್ರಿಯನ್ನೂ ಕಾಡಿದ ಕಾಸ್ಟಿಂಗ್ ಕೌಚ್ : ನಟಿ ಹಂಚಿಕೊಂಡ್ರು ಕಹಿನೆನಪು
( Sharan Avatara Purusha Release Date Fix)