ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty’s photos) ವಯಸ್ಸು 48 ದಾಟಿದರೂ ಯಾರಿಗಿಂತ ಕಮ್ಮಿ ಇಲ್ಲ ಎನ್ನುವಷ್ಟು ಮೈಮಾಟವನ್ನು ಕರಾವಳಿ ಬೆಡಗಿ ಹೊಂದಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಪ್ರತಿನಿತ್ಯ ಯೋಗ, ಫಿಟ್ನೆಸ್ ಅಂತಾ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಮದುವೆ ಆಗಿ ಮಕ್ಕಳಾದರೂ ಶಿಲ್ಪಾ ಶೆಟ್ಟಿ ಅಪಾರ ಸಂಖ್ಯೆ ಅಭಿಮಾನಿಗಳನ್ನು ಹೊಂದಿದ್ದು, ಇಂದಿಗೂ ಇಂಡಸ್ಟ್ರಿಯಲ್ಲಿ ಸಕ್ರಿಯವಾಗಿದ್ದಾರೆ. ಸದ್ಯ ಇಟಲಿಯಲ್ಲಿ ಸ್ವಿಮ್ ಸೂಟ್ ತೊಟ್ಟು ಮಿಂಚಿದ ಶಿಲ್ಪಾ ಶೆಟ್ಟಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕಡಲನಗರಿಯ ಈ ಬ್ಯೂಟಿ ಬಾಲಿವುಡ್ ಸಿನಿರಂಗದಲ್ಲೇ ತಮ್ಮದೇ ಛಾಪು ಮೂಡಿಸಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಸಿನಿರಂಗದಲ್ಲಿ ಮಾತ್ರವಲ್ಲದೇ ಫ್ಯಾಷನ್, ಫಿಟ್ನೆಸ್ ಹಾಗೂ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕೂಡ ಕಾಣಿಸಿಕೊಂಡಿದ್ದಾರೆ. ಸದ್ಯ ನಟಿ ಶಿಲ್ಪಾ ಶೆಟ್ಟಿ ರಜೆದಿನಗಳನ್ನು ಎಂಜಾಯ್ ಮಾಡುತ್ತಿದ್ದು, ಮೊನೊಕಿನಿ ತೊಟ್ಟು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಈ ಫೋಟೋ ಪಡ್ಡೆಹುಡುಗರ ನಿದ್ದೆಗೆಡಿಸಿರುತ್ತದೆ. 48 ಹರೆಯದ ನಟಿ ಶಿಲ್ಪಾ ಶೆಟ್ಟಿ ಯುವ ನಟಿಯರಿಗೆ ಸೌಂದರ್ಯ ಸಮರಲ್ಲಿ ಪೈಪೋಟಿ ನೀಡುತ್ತಿದ್ದಂತೆ ಕಾಣುತ್ತಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ನಟಿ ಶಿಲ್ಪಾ ಶೆಟ್ಟಿ ಹಂಚಿಕೊಂಡ ಫೋಟೋದಲ್ಲಿ ಸ್ಥಳದ ಬಗ್ಗೆ ಕೂಡ ಮಾಹಿತಿ ನೀಡಿದ್ದಾರೆ. ಮೂರು ಸಾವಿರದಷ್ಟು ಹಳೆಯದಾದ ಪವಿತ್ರ ನೀರಿನರು. ಭೂಮಿಯ ಅಂತಾರಳದಿಂದ ಬಿಸಿ ನೀರಿನ ಬುಗ್ಗೆಯು ಚಿಮ್ಮಿ ಹೊರಬರುತ್ತದೆ, ಈ ನೀರಿನಲ್ಲಿ ಅಗಾಧವಾದ ಆರೋಗ್ಯ ಪ್ರಯೋಜನಗಳನ್ನು ತರುತ್ತದೆ. ಇದರಿಂದ ಆರೋಗ್ಯ ಪ್ರಯೋಜನಗಳು ಕೂಡ ಇವೆ ಎಂದು ಶಿಲ್ಪಾ ಶೆಟ್ಟಿ ತಿಳಿಸಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಆಕೆಯ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ.
ಸದ್ಯ ಜೋಗಿ ಸಿನಿಮಾ ಖ್ಯಾತಿಯ ಪ್ರೇಮ್ ನಿರ್ದೇಶಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮವಾದ ಕೆಡಿಯಲ್ಲಿ ನಟಿ ಶಿಲ್ಪಾ ಶೆಟ್ಟಿ ಸತ್ಯವತಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಹಲವು ವರ್ಷಗಳ ನಂತರ ನಟಿ ಶಿಲ್ಪಾ ಶೆಟ್ಟಿ ಕನ್ನಡ ಸಿನಿರಂಗದಲ್ಲಿ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕೂಡ ನಟಿಸಲಿದ್ದಾರೆ. ಹಾಗೆಯೇ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಅಣ್ಣಯ್ಯ ಪಾತ್ರದಲ್ಲಿ ಮಿಂಚಲಿದ್ದಾರೆ ಎನ್ನುವ ಸುದ್ದಿ ಇದೆ.
Shilpa Shetty’s photos: Shilpa Shetty still hot at 48 years old