ಕರುನಾಡಿನ ಮನೆಮಗ ಪುನೀತ್ ರಾಜ್ ಕುಮಾರ್ ಕನ್ನಡಿಗರನ್ನು ಅಗಲಿ ಮೂರು ತಿಂಗಳು ಕಳೆದಿದೆ. ಆದರೂ ಅಭಿಮಾನಿಗಳ ಶೋಕಾಚರಣೆ ಬಿಂತಿಲ್ಲ. ಈ ಮಧ್ಯೆ ಮುಂದಿನ ತಿಂಗಳು ಪುನೀತ್ ಹುಟ್ಟುಹಬ್ಬವಿದ್ದು, ಅದೇ ದಿನ ತೆರೆಕಾಣೋ ಪುನೀತ್ ನಟನೆಯ ಕೊನೆ ಸಿನಿಮಾ ಜೇಮ್ಸ್ ಅಭಿಮಾನಿಗಳ ದುಃಖಕ್ಕೆ ಕೊಂಚ ರಿಲ್ಯಾಕ್ಸ್ ನೀಡೋ ಭರವಸೆ ಇದೆ. ಈಗ ಚಿತ್ರತಂಡದಿಂದ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ತಮ್ಮನ ಸಿನಿಮಾದಲ್ಲಿ ಅಣ್ಣನ ಧ್ವನಿ ( Shiva Rajkumar James ) ಅಭಿಮಾನಿಗಳನ್ನು ರಂಜಿಸಲಿದೆ.
ಕರ್ನಾಟಕವೂ ಸೇರಿದಂತೆ ಪ್ರಪಂಚದಾದ್ಯಂತ ಇದ್ದ ಅಭಿಮಾನಿಗಳಿಗೆ ಹೃದಯಾಘಾತವಾಗುವಂತೆ ದೀಢೀರ್ ಅಗಲಿ ಹೋದರು ಪುನೀತ್ ರಾಜ್ ಕುಮಾರ್. ಪುನೀತ್ ನಿಧನದ ವೇಳೆ ಅವರ ನಟಿಸುತ್ತಿದ್ದ ಬಹುನೀರಿಕ್ಷಿತ ವಿಭಿನ್ನ ರೋಲ್ ನ ಸಿನಿಮಾ ಜೇಮ್ಸ್ ಕೊನೆಯ ಹಂತದಲ್ಲಿತ್ತು. ಒಂದೆರಡು ಸೀನ್ ಗಳ ಶೂಟಿಂಗ್ ಮುಗಿದಿದ್ದರೇ ಸಿನಿಮಾ ತಂಡ ಕುಂಬಳಕಾಯಿ ಒಡೆಯ ಬೇಕಿತ್ತು.
ಆದರೆ ಪುನೀತ್ ನಿಧನದಿಂದ ಚಿತ್ರತಂಡ ಅಕ್ಷರಷಃ ಕಂಗಲಾಗಿ ಹೋಗಿತ್ತು. ಈ ವೇಳೆ ಸಿನಿಮಾವನ್ನು ತೆರೆಗೆ ತರಬಹುದು. ಆದರೆ ಸಿನಿಮಾದಲ್ಲಿ ಪುನೀತ್ ಧ್ವನಿಗೆ ಜೀವ ತುಂಬುವವರು ಯಾರು ಅನ್ನೋ ಪ್ರಶ್ನೆ ಇತ್ತು. ಈ ವೇಳೆ ಮಾತನಾಡಿದ್ದ ನಿರ್ದೆಶಕ ಚೇತನ್ ಟೆಕ್ನಾಲಜಿ ಬಳಸಿ ಪುನೀತ್ ಶೂಟಿಂಗ್ ವೇಳೆ ಮಾತನಾಡಿದ್ದನ್ನೇ ಬಳಸಿಕೊಳ್ಳಲು ಪ್ರಯತ್ನ ನಡೆದಿದೆ ಎಂದಿದ್ದರು. ಆದರೆ ಈಗ ಪುನೀತ್ ಸ್ಕೆಲಿಟನ್ ಧ್ವನಿಯನ್ನು ಹೊಂದಿಸಿ ಡಬ್ಬಿಂಗ್ ಮಾಡೋ ಚಿತ್ರತಂಡದ ಪ್ರಯತ್ನ ಯಶಸ್ವಿಯಾಗಿಲ್ಲವಂತೆ. ಹೀಗಾಗಿ ಸಿನಿಮಾ ತಂಡ ಜೇಮ್ಸ್ ಡಬ್ಬಿಂಗ್ ಗಾಗಿ ಶಿವಣ್ಣ ಮೊರೆ ಹೋಗಿದೆ.
ಸ್ವತಃ ಜೇಮ್ಸ್ ಸಿನಿಮಾದಲ್ಲಿ ನಟಿಸಿರೋ ಶಿವಣ್ಣ ಕೂಡ ತಮ್ಮನ ಸಿನಿಮಾಕ್ಕಾಗಿ ಪ್ರೀತಿಯಿಂದ ಡಬ್ಬಿಂಗ್ ಮಾಡಿಕೊಟ್ಟಿದ್ದಾರಂತೆ. ಸುಮಾರು ನಾಲ್ಕು ತಾಸುಗಳ ಕಾಲ ಶಿವಣ್ಣ ಡಬ್ಬಿಂಗ್ ಮಾಡಿದ್ದಾರೆ. ಹೀಗಾಗಿ ಸದ್ಯ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗಿದ್ದು ಮಾರ್ಚ್ 17 ರಂದು ಸಿನಿಮಾ ತೆರೆಗೆ ಬರಲಿದೆ. ಈ ಸಿನಿಮಾದ ಇನ್ನೊಂದು ವಿಶೇಷತೆ ಎಂದರೇ ಈ ಸಿನಿಮಾದಲ್ಲಿ ಮೂವರು ಅಣ್ಣಾವ್ರ ಮಕ್ಕಳು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ಅಪ್ಪು ಹಾಗೂ ದೊಡ್ಮನೆಯ ಕನಸು ಈಡೇರಿಸುವುದಕ್ಕಾಗಿ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ್ ರಾಜ್ ಕುಮಾರ್ ಈ ಸಿನಿಮಾದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸದ್ಯ ಸ್ಯಾಂಡಲ್ ವುಡ್ ನಲ್ಲಿ ಜೇಮ್ಸ್ ಹವಾ ಜೋರಾಗಿದ್ದು ಅಭಿಮಾನಿಗಳು ಸಿನಿಮಾ ರಿಲೀಸ್ ಗೆ ಈಗಾಗಲೇ ಸಿದ್ಧವಾಗಿದ್ದು ನೆಚ್ಚಿನ ಹೀರೋ ಕಟೌಟ್ ಗೆ ಹೂಮಳೆ ಸುರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ಅನೀರಿಕ್ಷಿತವಾದ ಅವಕಾಶವೊಂದು ಒದಗಿ ಬಂತು : ಮನದಾಳದ ಮಾತು ಹಂಚಿಕೊಂಡ ಮೇಘನಾ ಸರ್ಜಾ
ಇದನ್ನೂ ಓದಿ : ನಿಧಿ ನೆನಪಿನಲ್ಲೇ ಆದಿ ಪಯಣ : ಅಭಿಮಾನಿಗಳನ್ನು ಸೆಳೆದ ಲವ್ ಮಾಕ್ಟೆಲ್-2 ಟ್ರೇಲರ್
(Shiva Rajkumar on voice dubbing for his brother Puneeth Rajkumar’s last film James)