ಸೆಂಚುರಿ ಸ್ಟಾರ್ ಶಿವ ರಾಜ್‌ಕುಮಾರ್ ಕಳೆದ ಹತ್ತರಿಂದ ಹದಿನೈದು ದಿನಗಳ ಕಾಲ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಸಕ್ರಿಯವಾಗಿದ್ದರು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರ ಪ್ರಾರಂಭವಾಗಿದ್ದು, ಎರಡನೇ ದಿನದ ಅಧಿವೇಶ ಕಾರ್ಯಕ್ರಮ ಕೂಡ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ (Shiva Rajkumar – Randeep Singh Surjewala) ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಂಗಳವಾರ ಶಿವಣ್ಣ ಹಾಗೂ ಗೀತಾ ದಂಪತಿಗಳನ್ನು ಭೇಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಶಿವ ರಾಜ್‌ಕುಮಾರ್ ಅವರ ಮನೆಗೆ ತೆರಳಿದರು. ಈ ಸಂದರ್ಭದಲ್ಲಿ ದಂಪತಿಗಳನ್ನು ಭೇಟಿಯಾಗಿ ಮಾತು ಕತೆ ಮಾಡಿದ್ದಾರೆ. ಈ ಕುರಿತಂತೆ ತಮ್ಮ ಟ್ವಿಟರ್ ಖಾತೆಯನ್ನು ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ರಣದೀಪ್ ಸಿಂಗ್ ಸುರ್ಜೇವಾಲಾ ಅವರು ತಮ್ಮ ಟ್ವೀಟ್‌ನಲ್ಲಿ, “ಶಿವ ರಾಜ್‌ಕುಮಾರ್ ಅವರನ್ನು ಭೇಟಿಯಾಗಲು ನಿಜವಾಗಿಯೂ ಸಂತೋಷ ಮತ್ತು ಗೌರವವಾಗಿದೆ. ನಿಮ್ಮ ಶಿವಣ್ಣ & ಗೀತಾ ಶಿವರಾಜಕುಮಾರ್ ಅವರ ನಿವಾಸದಲ್ಲಿ ನಾವು ಇದ್ದೇವೆ. ಕಾಂಗ್ರೆಸ್ ಪ್ರಚಾರಕ್ಕೆ ಶಕ್ತಿ ತುಂಬಿದ ಮತ್ತು ಕರ್ನಾಟಕದ ಅಭಿವೃದ್ಧಿಗಾಗಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿದ್ದಕ್ಕಾಗಿ ಅತ್ಯಂತ ಜನಪ್ರಿಯ ಕಲಾವಿದ ಮತ್ತು ಉತ್ತಮ ಮಾನವನಿಗೆ ಧನ್ಯವಾದಗಳು. ತಮ್ಮ ವಿಶಿಷ್ಟ ಪರಂಪರೆಯೊಂದಿಗೆ, ಗೀತಾ ಶಿವರಾಜಕುಮಾರ್ ಈಗಾಗಲೇ ಕಾಂಗ್ರೆಸ್ ಕುಟುಂಬದ ಭಾಗವಾಗಿದ್ದಾರೆ. ಕರ್ನಾಟಕವನ್ನು ಅಭಿವೃದ್ಧಿ ಮತ್ತು ಸಮೃದ್ಧಿಯ ಪ್ರತಿಜ್ಞೆಯ ಮೇಲೆ ಒಟ್ಟಾಗಿ ಓಡಿಸಲು ನಾವು ಬದ್ಧರಾಗಿದ್ದೇವೆ” ಎಂದು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.
Was indeed a pleasure and honour to meet with one and only Sh. Shiva Rajkumar @NimmaShivanna & Geetha Shivarajkumar at their residence.
— Randeep Singh Surjewala (@rssurjewala) May 23, 2023
Thanked one of the most popular artist and even a better human being for powering the Congress campaign and participating in the festival of… pic.twitter.com/mrkefIwfpY
ಇದನ್ನೂ ಓದಿ : ಹೊಸ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ ಕಿಚ್ಚ ಸುದೀಪ್
ಇದನ್ನೂ ಓದಿ : ಬೆಂಗಳೂರಿನಲ್ಲಿ ವರುಣನ ಆರ್ಭಟ : ಮಳೆ ನೀರಿನಲ್ಲಿ ಮುಳುಗಿದ ನಟ ಜಗ್ಗೇಶ್ ಅವರ ಐಷಾರಾಮಿ ಕಾರು
ನಟ ಶಿವ ರಾಜ್‌ಕುಮಾರ್ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್ ಸೇರಿದಂತೆ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು. ಇನ್ನು ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ಸಿಗದ ಕಾರಣಕ್ಕೆ ಶಿವ ರಾಜ್‌ಕುಮಾರ್ ಬೇಸರಗೊಂಡಿದ್ದಾರೆ. ಅಷ್ಟೇ ಅಲ್ಲದೇ ತಮಗೆ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಮಧು ಬಂಗಾರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅದಕ್ಕೆ ಶಿವ ರಾಜ್‌ಕುಮಾರ್ ಕೂಡ ದ್ವನಿ ಸೇರಿಸಿದ್ದಾರೆ. ತಮ್ಮ ವಿಶಿಷ್ಟ ಪರಂಪರೆಯೊಂದಿಗೆ, ಗೀತಾ ಶಿವ ರಾಜ್‌ಕುಮಾರ್ ಈಗಾಗಲೇ ಕಾಂಗ್ರೆಸ್ ಕುಟುಂಬದಲ್ಲಿ ಒಬ್ಬರಾಗಿದ್ದಾರೆ. ನಾವು ಒಟ್ಟಾಗಿ ಕರ್ನಾಟಕದ ಅಭಿವೃದ್ಧಿ ಮತ್ತು ಸಮೃದ್ಧಿಯ ಪ್ರತಿಜ್ಞೆಗೆ ಬದ್ಧರಾಗಿದ್ದೇವೆ ಎಂದು ಸುರ್ಜೇವಾಲಾ ಹೇಳಿದ್ದಾರೆ.
Shiva Rajkumar – Randeep Singh Surjewala : Randeep Singh Surjewala met Sandalwood actor Shiva Rajkumar.