ನಂದಿನಿ ಹಾಲಿನ ಉತ್ಪನ್ನಗಳಿಗೆ ನಟ ಶಿವರಾಜ್‌ಕುಮಾರ್ (Shivarajkumar) ರಾಯಭಾರಿಯಾಗಿ ಕೆಎಂಎಫ್ ನೇಮಕ ಮಾಡಿದೆ. ಈ ಹಿಂದೆ ನಟ ಪುನೀತ್ ರಾಜ್‌ಕುಮಾರ್ ಅವರು ನಂದಿನಿ ಉತ್ಪನ್ನಗಳಿಗೆ ರಾಯಭಾರಿಯಾಗಿದ್ದರು. ಇದೀಗ ದೊಡ್ಮನೆಯವರೇ ಮತ್ತೆ ಹಾಲಿನ ಉತ್ಪನ್ನಕ್ಕೆ ರಾಯಭಾರಿಯಾಗಿ ಆಯ್ಕೆಗೊಂಡಿದ್ದು, ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.
ನಟ ಶಿವ ರಾಜ್‌ಕುಮಾರ್ ನಂದಿನಿ ಉತ್ಪನ್ನಗಳಿಗೆ ರಾಯಭಾರಿಯಾಗಲು ಒಪ್ಪಿಕೊಂಡಿದ್ದಕ್ಕೆ, ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹಾಗೂ ಎಂಡಿ ಜಗದೀಶ್ ಅವರು ಹೂಗುಚ್ಛ ನೀಡುವುದರ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಟ್ವೀಟ್‌ನಲ್ಲಿ “ಸ್ಯಾಂಡಲ್‌ವುಡ್ ನಟ ಹ್ಯಾಟ್ರಿಕ್ ಹೀರೋ ಡಾ.ಶಿವ ರಾಜ್‌ಕುಮಾರ್ ಅವರನ್ನು ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಒಪ್ಪಿಕೊಂಡಿರುವ ಕರುನಾಡ ಚಕ್ರವರ್ತಿಗೆ ಕೆಎಂಎಫ್ ಮತ್ತು ಸಮಸ್ತ ಕರ್ನಾಟಕ ರೈತರ ಹಾಗೂ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಎಂದು ಬರೆದು ಹಂಚಿಕೊಂಡಿದ್ದಾರೆ.
ಸ್ಯಾಂಡಲ್ ವುಡ್ ನಟ ಹ್ಯಾಟ್ರಿಕ್ ಹೀರೋ ಡಾ|| @NimmaShivanna ರವರನ್ನು "ನಂದಿನಿ" ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಒಪ್ಪಿಕೊಂಡಿರುವ ಕರುನಾಡ ಚಕ್ರವರ್ತಿಗೆ ಅಭಿನಂದನೆ ಸಲ್ಲಿಸಿ ಶುಭ ಕೊರಲಾಯಿತು.
— Bheema Naik (@BheemaNaikINC) August 1, 2023
ಅವರಿಗೆ ಕೆ.ಎಂ.ಎಫ್ ಮತ್ತು ಸಮಸ್ತ ಕರ್ನಾಟಕ ರೈತರ ಹಾಗೂ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು🙏💐💐 pic.twitter.com/MBwRh1dX3v
ಇದನ್ನೂ ಓದಿ : Soujanya case : ಸೌಜನ್ಯ ಪ್ರಕರಣಕ್ಕೆ “ಭೀಮಬಲ”: ಧರ್ಮಸ್ಥಳಕ್ಕೆ ಹೋಗಲ್ಲ ಎಂದ ದುನಿಯಾ ವಿಜಿ
ಈ ಹಿಂದೆ ಮೊದಲು ರಾಜ್‌ಕುಮಾರ್ ಅವರು ಕೂಡ ನಂದಿನಿ ಉತ್ಪನ್ನದ ರಾಯಭಾರಿ ಆಗಿದ್ದರು. ಪ್ರಚಾರಕ್ಕೆ ಯಾವುದೇ ಸಂಭಾವನೆ ಪಡೆದಿರಲಿಲ್ಲ. ಯಾಕೆಂದರೆ ರೈತರಿಗೆ ಸಹಕಾರಿ ಆಗುತ್ತದೆ ಎನ್ನುವುದಾಗಿತ್ತು. ನಂತರ ನಟ ಪುನೀತ್ ರಾಜ್‌ಕುಮಾರ್ ನಂದಿನಿ ಉತ್ಪನ್ನಗಳಿಗೆ ರಾಯಭಾರಿಯಾಗಿದ್ದರೂ, ಸಂಭಾವನೆ ಪಡೆಯದೇ ಅಪ್ಪನ ಹಾದಿಯಲ್ಲೇ ನಡೆದರು.
Shivarajkumar : Actor Shiva Rajkumar has been chosen as the ambassador for Nandini products