ಸೋಮವಾರ, ಏಪ್ರಿಲ್ 28, 2025
HomeCinemaShree Balaji Photo Studio Movie : ಸ್ಯಾಂಡಲ್‌ವುಡ್‌ ನಲ್ಲಿ ಸದ್ದು ಮಾಡುತ್ತಿದೆ "ಶ್ರೀ ಬಾಲಾಜಿ...

Shree Balaji Photo Studio Movie : ಸ್ಯಾಂಡಲ್‌ವುಡ್‌ ನಲ್ಲಿ ಸದ್ದು ಮಾಡುತ್ತಿದೆ “ಶ್ರೀ ಬಾಲಾಜಿ ಸ್ಟುಡಿಯೋ” ಅನ್ನೋ ಪೋಟೋಗ್ರಾಫರ್‌ ಕಥೆಯ ಸಿನಿಮಾ

- Advertisement -

ಶ್ರೀ ಬಾಲಾಜಿ ಸ್ಟುಡಿಯೋ (Shree Balaji Photo Studio Movie) ಟ್ರೇಲರ್‌ ಮೂಲಕ ಕನ್ನಡ ಸಿನಿಪ್ರಿಯರ ಕುತೂಹಲವನ್ನು ಕೆರಳಿಸಿದೆ. ಇತ್ತೀಚೆಗಷ್ಟೇ “ಶ್ರೀ ಬಾಲಾಜಿ ಸ್ಟುಡಿಯೋ” ಎಂಬ ಹೊಸ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಸಿನಿಮಾ ಹೊಸಪ್ರತಿಭೆಗಳನ್ನು ಒಳಗೊಂಡಿರುವ, ಹೊಸತನ ಇರುವ ಕಥೆ ಆಗಿದೆ. ಈ ಸಿನಿಮಾ ಕೂಡ ಸೊಗಸಾಗಿ ಮೂಡಿಬಂದಿದೆ ಎಂದು ಸಿನಿತಂಡ ತಿಳಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಹಾಡುಗಳು ಬಿಡುಗಡೆಯಾಗಿದ್ದು, ಸಖತ್‌ ಸದ್ದು ಮಾಡುತ್ತಿದೆ.

ಇದುವರೆಗೆ ಹಲವು ಸಿನಿಮಾಗಳಲ್ಲಿ ಹೀರೋ ಅಥವಾ ಮತ್ತಿತರರು ಕ್ಯಾಮೆರಾ ಹಿಡಿದು ಕೆಲಸ ಮಾಡೋದನ್ನು ನೋಡಿದ್ದೀರಿ. ಆದರೆ ಒಬ್ಬ ಫೋಟೋಗ್ರಾಫರ್ ಎದುರಿಸುವ ಸವಾಲು, ಸಮಸ್ಯೆಗಳನ್ನೇ ಮನರಂಜನಾತ್ಮಕವಾಗಿ ಹೇಳಿರುವ ಸಿನಿಮಾ ಬಾಲಾಜಿ ಸ್ಟುಡಿಯೋ. ಈ ಸಿನಿಮಾವನ್ನು ಫೋಟೋಗ್ರಾಫರುಗಳೆಲ್ಲ ಇಷ್ಟಪಡುವ ಕಥೆ ಎನ್ನಬಹುದು. ಫೋಟೋಗ್ರಾಫರ್ ಒಬ್ಬನ ಕಥೆ ಆಧರಿಸಿದ ಸಿನಿಮಾದ ಟ್ರೇಲರ್ ಬಿಡುಗಡೆ ವೇಳೆ ಹಿರಿಯ ಫೋಟೋಗ್ರಾಫರ್ ಕೆ.ಎನ್. ನಾಗೇಶ್ ಕುಮಾರ್ ಅವರನ್ನುಸಿನಿತಂಡ ಅಭಿನಂದಿಸಿದ್ದು, ವಿಶೇಷವಾಗಿತ್ತು. ಇನ್ನೂ ಈ ಹೊಸಬರ ಪ್ರಯತ್ನಕ್ಕೆ ಗಂಧದ ಗುಡಿ ಅಮೋಘವರ್ಷ ಸಿನಿಮಾಕ್ಕೆ ಶುಭ ಕೋರಿದರು.

ನಿರ್ಮಾಪಕ ವೆಂಕಟೇಶ್ವರ ರಾವ್ ಬಳ್ಳಾರಿ ಮಾತನಾಡಿ ನಿರ್ದೇಶಕ ರಾಜೇಶ್ ಧ್ರುವ ಸಿನಿಮಾದ ಬಗ್ಗೆ ಪ್ರೀತಿಯಿಂದ ಮಾತನಾಡಿದರು. ವೆಂಕಟೇಶ್ವರ್ ರಾವ್ ಅವರರು ಮಾತನಾಡಿ “ಅಯ್ಯೋ ಸಿನಿಮಾಗೆ ಯಾಕೆ ಹೋಗ್ತೀರಾ ಎಂದು ಹೇಳಿದವರೇ ಜಾಸ್ತಿ” ಎಂದು ಸ್ವಾರಸ್ಯವಾಗಿ ಹೇಳಿದರು. ಇಡೀ ಸಿನಿಮಾನ್ನು ಶಿರಸಿ ಸುತ್ತಮುತ್ತಲೇ ಚಿತ್ರೀಕರಿಸಲಾಗಿದೆ.

ಇದನ್ನೂ ಓದಿ : Raj B Shetty : ಸೇಡಿನ ಜ್ವಾಲೆಯ ಸಿನಿಮಾಕ್ಕೆ ರಾಜ್‌ ಬಿ ಶೆಟ್ಟಿ ನಾಯಕ !

ಇದನ್ನೂ ಓದಿ : Actor Siddharth: ಏರ್ ಪೋರ್ಟ್ ನಲ್ಲಿ ನಟ ಸಿದ್ದಾರ್ಥ್ ಹೆತ್ತವರು ಪಟ್ಟ ಪಾಡೇನು..?; ಹಿಂದಿ ಹೇರಿಕೆ ಬಗ್ಗೆ ಗುಡುಗಿದ ತಮಿಳು ನಟ

ಇದನ್ನೂ ಓದಿ : Avatar The Way of Water : ಬಾಕ್ಸ್‌ ಆಫೀಸ್‌ನಲ್ಲಿ 8200 ಕೋಟಿ ರೂ.. ಬಾಚಿಕೊಂಡ ಅವತಾರ್ ದಿ ವೇ ಆಫ್ ವಾಟರ್

23 ದಿನದ ಟೈಟ್ ಶೆಡ್ಯೂಲ್‍ನಲ್ಲಿ ಸಿನಿಮಾ ಚಿತ್ರೀಕರಣ ಮಾಡಿರುವುದು ಈ ಸಿನಿ ತಂಡದ ವಿಶೇಷ. ಈಗಾಗಲೇ ಸಾಕಷ್ಟು ಸೀರಿಯಲ್ ಮೂಲಕ ಖ್ಯಾತಿ ಗಳಿಸಿರುವ ರಾಜೇಶ್ ಧ್ರುವ, ರಾಧಿಕಾ ಅಚ್ಯುತ್ ರಾವ್, ಶಿಶಿರ್, ನಕುಲ್ ಶರ್ಮಾ, ಶುಭಲಕ್ಷ್ಮಿ, ರವಿ ಸಾಲಿಯಾನ್ ಒಳಗೊಂಡಂತೆ ಬಹು ತಾರಾಬಳಗ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಕ್ಕೆ ಕಥೆ ಮತ್ತು ಚಿತ್ರಕಥೆ ಅಭಿಷೇಕ್ ಶಿರಸಿ, ಪೃಥ್ವಿರಾಜ ಪೆನ್ನು ಅವರು ನೀಡಿದ್ದಾರೆ. ಇನ್ನೂ ಈ ಸಿನಿಮಾಕ್ಕೆ ಅದ್ಬುತ ಸಂಭಾಷಣೆಯನ್ನು ಅಜಿತ್ ಬೊಪ್ಪನಳ್ಳಿ ನೀಡಿದ್ದಾರೆ. ಸ್ವಸ್ವಿಕ್ ಕಾರೆನಾಡ್ ಅವರು ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

Shree Balaji Photo Studio Movie is making noise in Sandalwood, a movie about a photographer.

RELATED ARTICLES

Most Popular