ನಟಿಮಣಿಯರು ಸಿನಿಮಾಗಿಂತ ಹೆಚ್ಚು ಪೋಟೋಶೂಟ್ ನಲ್ಲೇ ಸುದ್ದಿ ಮಾಡೋ ಕಾಲಇದು. ಸ್ವಲ್ಪ ಟೈಂ ಸಿಕ್ಕರೂ ಸಾಕು ನಟಿಮಣಿಯರು ಪ್ರವಾಸಿ ತಾಣಗಳತ್ತ ಮುಖಮಾಡೋದು ಕಾಮನ್. ಈಗ ಈ ಸಾಲಿಗೆ ಸೌತ್ ಬೆಡಗಿ ಶ್ರೀಯಾ ಶರಣ್ ಹೊಸ ಸೇರ್ಪಡೆ. ಸದ್ಯ ಗೋವಾದಲ್ಲಿ ಬೀಡು ಬಿಟ್ಟಿರೋ ಶ್ರೀಯಾ ಶರಣ್ ಹಾಟ್ ಹಾಟ್ ಪೋಟೋಸ್ ಮೂಲಕ ಗಮನ ಸೆಳೆದಿದ್ದಾರೆ. ಗೋವಾದಲ್ಲಿ ಬೇಸಿಗೆ ರಜೆ ಎಂಜಾಯ್ ಮಾಡ್ತಿರೋ ಶ್ರೀಯಾ ಶರಣ್ (Shriya Saran), ಪಿಂಕ್ ಕಲರ್ ಬಿಕನಿಯಲ್ಲಿ ಮೈಸಿರಿ ತೋರುತ್ತಾ ಪೋಟೋಗೆ ಪೋಸ್ ನೀಡಿದ್ದಾರೆ.
ಬಿರು ಬೇಸಿಗೆಯಲ್ಲಿ ಸುಡುವ ಸೂರ್ಯನ ಅಡಿಯಲ್ಲಿ ಬಿಕನಿ ತೊಟ್ಟು ಸಮುದ್ರ ತೀರದಲ್ಲಿ ಮೈಚೆಲ್ಲಿ ಮಲಗಿದ ಶ್ರೀಯಾ ಶರಣ್ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಆರ್ ಆರ್ ಆರ್ ಸಿನಿಮಾ ಸಕ್ಸಸ್ ಬಳಿಕ ಸ್ಯಾಂಡಲ್ ವುಡ್ ನತ್ತ ಮುಖ ಮಾಡಿರೋ ಶ್ರೀಯಾ ಶರಣ್ ಇದೇ ಮೊದಲ ಬಾರಿಗೆ ರಿಯಲ್ ಸ್ಟಾರ್ ಉಪೇಂದ್ರ ಗೆ ಜೋಡಿಯಾಗಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ನಟಿಸುತ್ತಿರೋ ಬಹು ನೀರಿಕ್ಷಿತ ಸಿನಿಮಾ ಕಬ್ಜದಲ್ಲಿ ನಾಯಕಿಯಾಗಿರೋ ಶ್ರೀಯಾ ಶರಣ್ ಸಿನಿಮಾಗಾಗಿ ಗ್ರ್ಯಾಂಡ್ ಪೋಟೋ ಶೂಟ್ ಮಾಡಿ ಗಮನ ಸೆಳೆದಿದ್ದರು. ಇನ್ನೇನು ಕಬ್ಜ ಸಿನಿಮಾ ಶೂಟಿಂಗ್ ಆರಂಭವಾಗಲಿದ್ದು ಈ ಶೂಟಿಂಗ್ ಆರಂಭಕ್ಕೂ ಮುನ್ನವೇ ವೆಕೆಶನ್ ಮೂಡ್ ನಲ್ಲಿರೋ ಶ್ರೀಯಾ ಶರಣ್ ಗೋವಾದಲ್ಲಿ ಬೀಡು ಬಿಟ್ಟಿದ್ದಾರೆ.
ಕಬ್ಜ ಸಿನಿಮಾದ ಮೂಲಕ ಇದೇ ಮೊದಲ ಬಾರಿಗೆ ಶ್ರೀಯಾ ಶರಣ್, ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದಾರೆ. ಕಬ್ಜ ಚಿತ್ರ ಆರ್ ಚಂದ್ರು ನೇತೃತ್ವದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಬಹುಕೋಟಿ ವೆಚ್ಚದಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಇದೇ ಸಿನಿಮಾದಲ್ಲಿ ಉಪೇಂದ್ರ್ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಅಂಡರ್ ವಲ್ಡ್ ನ ಡಾನ್ ಪಾತ್ರದಲ್ಲಿ ಮಿಂಚಲಿದ್ದಾರೆ. ಉಪ್ಪಿಗೆ ಸುದೀಪ್ ಕೂಡ ಸಾಥ್ ನೀಡ್ತಿದ್ದು ಸಿನಿಮಾದ ವಿಶೇಷ ಪಾತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ.
ಇನ್ನೂ ಉಪ್ಪಿ ಮತ್ತು ಶ್ರೀಯಾ ಶರಣ್ ಜೋಡಿ ಬಗ್ಗೆಯೂ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲವಿದ್ದು, ಸಿನಿಮಾದ ಶೂಟಿಂಗ್ ಇನ್ನೂ ಪೂರ್ಣಗೊಳ್ಳಬೇಕಿದೆ. ಸದ್ಯ ಶ್ರೀಯಾ ಶರಣ್ ಹಾಟ್ ಹಾಟ್ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
Shriya Saran raises temperature in pink bikini, drops hot photos from Goa Beach