ಸೌತ್ ನ ಬಿಗ್ ಸ್ಟಾರ್ ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ (Shruti Haasan) ಕೂಡ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಟಾಲಿವುಡ್ ಸೇರಿದಂತೆ ಬಹುತೇಕ ಸಿನಿಮಾರಂಗದ ಪೇಮಸ್ ಸ್ಟಾರ್ ಗಳ ಜೊತೆಯೂ ಸ್ಕ್ರಿನ್ ಹಂಚಿಕೊಂಡಿದ್ದಾರೆ. ಸದ್ಯ ಕೈತುಂಬ ಸಿನಿಮಾಗಳಿಟ್ಟುಕೊಂಡಿರೋ ಶೃತಿ ಹಾಸನ್ ಈಗ ಗಂಭೀರ ಸಮಸ್ಯೆಯೊಂದು ಕಾಡ್ತಿದೆಯಂತೆ. ಅದೇನು ಸಮಸ್ಯೆ ಇಲ್ಲಿದೆ ಡಿಟೇಲ್ಸ್.
ಬಹುಭಾಷಾ ನಟಿ ,ಸಿಂಗರ್ ಹಾಗೂ ಡಬ್ಬಿಂಗ್ ಆರ್ಟಿಸ್ಟ್ ಹೀಗೆ ಬಹುಮುಖ ಪ್ರತಿಭೆಯಾಗಿರೋ ಶೃತಿ ಹಾಸನ್ (Shruti Haasan ) ನೋಡೋಕೆ ತೆಳ್ಳಗೆ ಬೆಳ್ಳಗೆ ಸುಂದರವಾಗಿದ್ದಾರೆ. ಅವರ ಶಾರ್ಪ್ ಕಣ್ಣುಗಳೇ ಅವರ ಅಂದಕ್ಕೆ ಇಂಬುಕೊಟ್ಟಂತಿವೆ. ಆದರೆ ಈಗ ಅದೇ ಸೌಂದರ್ಯ ಕುಂದಿಹೋಗೋ ಭಯದಲ್ಲಿದ್ದಾರಂತೆ ಶೃತಿ ಹಾಸನ್. ಹೌದು ಸ್ವತಃ ಶ್ರುತಿ ಹಾಸನ್ ಈ ವಿಚಾರ ವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ತಮಗೆ ಇತ್ತೀಚಿಗೆ ನಿದ್ರಾಹೀನತೆ ಕಾಡುತ್ತಿದೆ ಎಂದಿದ್ದಾರೆ. ಕೋವಿಡ್ ಗೆ ತುತ್ತಾಗಿ ಚೇತರಿಸಿಕೊಂಡ ಮೇಲೆ ಶ್ರುತಿ ಈ ಗಂಭೀರ ಸಮಸ್ಯೆಗೆ ತುತ್ತಾಗಿದ್ದಾರಂತೆ.
ಕಳೆದ ತಿಂಗಳು ಶ್ರುತಿ ಹಾಸನ್ ಗೆ ಕೊರೋನಾ ಕಾಣಿಸಿಕೊಂಡಿತ್ತು. ಕೊಂಚ ತೀವ್ರವಾಗಿ ಕೊರೋನಾದ ಲಕ್ಷಣಗಳು ತೊಂದರೆ ಕೊಟ್ಟಿದ್ದರಿಂದ ಶ್ರುತಿ (Shruti Haasan ) ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಕೊರೋನಾದಿಂದ ಚೇತರಿಸಿಕೊಂಡು ವಿಶ್ರಾಂತಿ ಪಡೆದು ಬಂದ ಮೇಲೂ ಶ್ರುತಿಗೆ ಅನಾರೋಗ್ಯ ಕಾಡುತ್ತಿದೆಯಂತೇ. ಕೊರೋನಾ ಚಿಕಿತ್ಸೆ ಬಳಿಕ ಶ್ರುತಿಗೆ ವಿಪರೀತ ತಲೆ ನೋವು ಕಾಡುತ್ತಿದ್ದು, ದೇಹ ಆಯಾಸಗೊಳ್ಳುತ್ತಿದೆ. ಅಲ್ಲದೇ ರಾತ್ರಿಯೆಲ್ಲ ನಿದ್ದೆ ಇಲ್ಲದೇ ಪರದಾಡುವಂತಾಗುತ್ತಿದೆ. ಇದೆಲ್ಲವೂ ಪೋಸ್ಟ್ ಕರೋನಾ ಎಫೆಕ್ಟಾ ಎಂದು ಶ್ರುತಿ ಪ್ರಶ್ನಿಸಿದ್ದಾರೆ.
ಸಾಕಷ್ಟು ತೆಲುಗು ಹಾಗೂ ತಮಿಳು ಸಿನಿಮಾಗಳನ್ನು ಒಪ್ಪಿಕೊಂಡಿರೋ ಶ್ರುತಿ (Shruti Haasan ) ಈಗ ಶೂಟಿಂಗ್ ಗಳಲ್ಲಿ ಭಾಗಿಯಾಗಬೇಕಿದೆ.ಹೀಗಾಗಿ ದೈಹಿಕ ಅನಾರೋಗ್ಯ ಶ್ರುತಿಯನ್ನು ಕಂಗೆಡಿಸಿದ್ದು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸದ್ಯ ಶ್ರುತಿ ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾ ರಿಲೀಸ್ ಗೆ ಸಿದ್ಧವಾಗಿದೆ. ಇದಲ್ಲದೇ ಇನ್ನು ಹಲವು ಬಿಗ್ ಬಜೆಟ್ ಸಿನಿಮಾಗಳಲ್ಲಿ ಶ್ರುತಿ ನಟಿಸಲು ಸಿದ್ಧವಾಗಿದ್ದಾರೆ. ಇತ್ತೀಚಿಗಷ್ಟೇ ನಟಿ ಶ್ರುತಿ ಬ್ಲ್ಯಾಕ್ ಆ್ಯಂಡ್ ಬ್ಲ್ಯಾಕ್ ಡ್ರೆಸ್ ನಲ್ಲಿ ಹಾಟ್ ಹಾಟ್ ಪೋಟೋಶೂಟ್ ಗೆ ಪೋಸ್ ಕೊಡುವ ಮೂಲಕ ಗಮನ ಸೆಳೆದಿದ್ದರು. ಈಗ ತಮ್ಮ ಆರೋಗ್ಯ ಸಮಸ್ಯೆಯನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ನನ್ನಿಂದ ಜೇಮ್ಸ್ ಸಿನಿಮಾ ನೋಡಲು ಸಾಧ್ಯವಿಲ್ಲ: ನಾನಿನ್ನು ಆ ನೋವಿನಿಂದ ಹೊರಗೆ ಬಂದಿಲ್ಲ: ಅಶ್ವಿನಿ ಪುನೀತ್
ಇದನ್ನೂ ಓದಿ : Puneeth Rajkumar ಗೆ ರಾಜ್ಯದ ಹಲವು ಗಣ್ಯರಿಂದ ಹುಟ್ಟುಹಬ್ಬದ ಶುಭಾಯಗಳ ಮಹಾಪೂರ!
( Shruti Haasan says she is not eating, sleeping )