ಮಂಗಳವಾರ, ಜೂನ್ 17, 2025
HomeCinemaRJ Rachana : ಹೃದಯಾಘಾತದಿಂದ ಆರ್‌ ಜೆ ರಚನಾ ಸಾವು : ಮಗಳ ಸಾವಿನಲ್ಲೂ ಸಾರ್ಥಕತೆ...

RJ Rachana : ಹೃದಯಾಘಾತದಿಂದ ಆರ್‌ ಜೆ ರಚನಾ ಸಾವು : ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು

- Advertisement -

ಬೆಂಗಳೂರು : ಸ್ಯಾಂಡಲ್‌ವುಡ್‌ ನ ಸಿಂಪಲ್‌ ಆಗಿ ಒಂದ್‌ ಸ್ಟೋರಿ ಸಿನಿಮಾ ಖ್ಯಾತಿಯ ರಾಜ್ಯದ ಪ್ರಮುಖ ಎಫ್‌ ಎಂ ರೆಡಿಯೋ ಮಿರ್ಚಿ ಮೂಲಕ ಮನೆ ಮಾತಾಗಿದ್ದ ಖ್ಯಾತ ಆರ್‌ಜೆ ರಚನಾ (RJ Rachana) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 35 ವರ್ಷ ವಯಸ್ಸಾಗಿತ್ತು. ಇದೀಗ ರಚನಾ ಸಾವಿನ ಸುದ್ದಿ ಅಭಿಮಾನಿಗಳಿಗೆ ಆಘಾತವನ್ನು ಮೂಡಿಸಿದೆ. ಇನ್ನು ಮಗಳ ಸಾವಿನ ನಡುವಲ್ಲೂ ಅಂಗಾಂಗ ದಾನ ಮಾಡುವ ಮೂಲಕ ಕುಟುಂಬ ಸಾವಿನಲ್ಲೂ ಸಾರ್ಥಕತೆಯನ್ನು ಮರೆದಿದೆ.

ಬೆಂಗಳೂರಿನ ಜೆಪಿ ನಗರದಲ್ಲಿರುವ ಪ್ಲಾಟ್‌ನಲ್ಲಿ ರಚನಾಗೆ ಎದೆನೋವು ಕಾಣಿಸಿಕೊಂಡಿತ್ತು. ಆದರೆ ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯದಲ್ಲಿಯೇ ರಚನಾ ಸಾವನ್ನಪ್ಪಿದ್ದಾರೆ. ರಚನಾ ಅವರ ತಂದೆ ತಾಯಿ ಚಾಮರಾಜಪೇಟೆಯಲ್ಲಿ ವಾಸವಾಗಿದ್ದು, ಮೃತ ದೇಹವನ್ನು ಚಾಮರಾಜಪೇಟೆಗೆ ಕೊಂಡೊಯ್ಯಲಾಗುತ್ತಿದೆ.

ತಮ್ಮ ಕಂಠ ಸಿರಿಯಿಂದಲೇ ಅಪಾರ ಕೇಳುಗರನ್ನು ಹೊಂದಿದ್ದ ರಚನಾ ಕಳೆದ ಕೆಲವು ವರ್ಷಗಳ ಹಿಂದೆ ಆರ್‌ಜೆ ವೃತ್ತಿಗೆ ವಿದಾಯ ಹೇಳಿದ್ದರು. ರೇಡಿಯೋ ಮಿರ್ಚಿ, ರೇಡಿಯೋ ಸಿಟಿ ಸೇರಿದಂತೆ ಹಲವು ಎಫ್‌ಎಂಗಳಲ್ಲಿ ಕೆಲಸ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸ್ನೇಹಿತರ ಜೊತೆಗೆ ರಚನಾ ಹೆಚ್ಚಾಗಿ ಬೆರೆಯುತ್ತಿರಲಿಲ್ಲ ಎಂದು ತಿಳಿದು ಬಂದಿದೆ.

ಮಗಳ ಸಾವಿನ ಬೆನ್ನಲ್ಲೇ ರಚನಾ ಅವರ ಅಂಗಾಂಗಳನ್ನು ದಾನ ಮಾಡಲು ಕುಟುಂಸ್ಥರು ಮುಂದಾಗಿದ್ದಾರೆ. ಸದಾ ಡಯಟ್‌ ಎನ್ನುತ್ತಿದ್ದ ರಚನಾ ಸಾವು ಇದೀಗ ಆಘಾತವನ್ನು ಮೂಡಿಸಿದೆ. ರಚನಾ ಕಾರ್ಡಿಕ್‌ ಅರೆಸ್ಟ್‌ ನಿಂದ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ರಚನಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇನ್ನು ಇತ್ತೀಚಿಗಷ್ಟೇ ಸ್ಯಾಂಡಲ್‌ವುಡ್‌ ಯುವರಾಜ ಪುನೀತ್‌ ರಾಜ್‌ ಕುಮಾರ್‌ ಕಾರ್ಡಿಕ್‌ ಅರೆಸ್ಟ್‌ ನಿಂದ ವಿಧಿವಶರಾಗಿದ್ದರೆ, ಕಳೆದ ಎರಡು ವರ್ಷಗಳ ಹಿಂದೆ ಚಿರಂಜೀವಿ ಸರ್ಜಾ ಕೂಡ ಅತ್ಯಂಕ ಕಡಿಮೆ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದೀಗ ರಚನಾ ಕೂಡ ಅದೇ ಹಾದಿಯನ್ನೇ ಹಿಡಿದಿದ್ದಾರೆ.

ಇದನ್ನೂ ಓದಿ : ಶಬ್ದ ಸಿನಿಮಾದಲ್ಲಿ ನಟಿಸಲಿದ್ದಾರೆ ಮೇಘನಾ ಸರ್ಜಾ: ಇನ್ ಸ್ಟಾಗ್ರಾಂ ನಲ್ಲಿ ಕೊಟ್ರು ಸಿಹಿಸುದ್ದಿ

ಇದನ್ನೂ ಓದಿ : ವಿಜಯ್ ದೇವರಗೊಂಡ – ರಶ್ಮಿಕಾ ಮಂದಣ್ಣ ಪರಿಣಯ: ವರ್ಷಾಂತ್ಯದಲ್ಲಿ ಒಂದಾಗುತ್ತಾ ಟಾಲಿವುಡ್ ಜೋಡಿ

ಇದನ್ನೂ ಓದಿ : ವಿಜಯ್ ದೇವರಗೊಂಡ – ರಶ್ಮಿಕಾ ಮಂದಣ್ಣ ಪರಿಣಯ: ವರ್ಷಾಂತ್ಯದಲ್ಲಿ ಒಂದಾಗುತ್ತಾ ಟಾಲಿವುಡ್ ಜೋಡಿ

(Simple Aagi ond Love story actress Famous RJ Rachana Passes away)

.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular