ಮಂಗಳವಾರ, ಏಪ್ರಿಲ್ 29, 2025
HomeCinemaCharlie 777 Movie : ಸಿಂಪಲ್‌ಸ್ಟಾರ್‌ ರಕ್ಷಿತ್‌ ಶೆಟ್ಟಿ ಚಾರ್ಲಿ 777 ಸಿನಿಮಾಕ್ಕೆ ಮೊದಲ ವರ್ಷದ...

Charlie 777 Movie : ಸಿಂಪಲ್‌ಸ್ಟಾರ್‌ ರಕ್ಷಿತ್‌ ಶೆಟ್ಟಿ ಚಾರ್ಲಿ 777 ಸಿನಿಮಾಕ್ಕೆ ಮೊದಲ ವರ್ಷದ ಸಂಭ್ರಮ

- Advertisement -

ಕಳೆದ ವರ್ಷ (ಜೂನ್‌ 10) ಪರಂವಃ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಚಾರ್ಲಿ 777 (Charlie 777 Movie)ಕ್ಕೆ ಮೊದಲ ವರ್ಷದ ಸಂಭ್ರಮ. ಈ ಸಿನಿಮಾದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಧರ್ಮ ಪಾತ್ರದಲ್ಲಿ ಮಿಂಚಿದ್ದು, ರಕ್ಷಿತ್ ಗೆ ಜೋಡಿಯಾಗಿ ಸಂಗೀತ ಶೃಂಗೇರಿ ನಟಿಸಿದ್ದಾರೆ. ನಟನೆ ಜೊತೆಗೆ ರಕ್ಷಿತ್ ಶೆಟ್ಟಿ ನಿರ್ಮಾಣದ ಜವಾಬ್ದಾರಿ ನಿರ್ವಹಿಸಿದ್ದಾರೆ. ಈ ಸಿನಿಮಾ ಕನ್ನಡ ಸಿನಿಮಾ ಅಂಗಳದಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿ ಧೂಳ್ ಎಬ್ಬಿಸಿತ್ತು. ಸದ್ಯ ಈ ಸಿನಿಮಾದ ಮೊದಲ ವರ್ಷ ಸಂಭ್ರಮವನ್ನು ಪರಂವಃ ಸ್ಟುಡಿಯೋಸ್‌ ಇನ್‌ಸ್ಟಾಗ್ರಾಮ್‌ ಫೇಜ್‌ನಲ್ಲಿ ಹಂಚಿಕೊಂಡಿದೆ.

ನಟ ರಕ್ಷಿತ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ, “365 ದಿನಗಳ ಅಂತ್ಯವಿಲ್ಲದ ಪ್ರೀತಿ! ಚಾರ್ಲಿ ಮತ್ತು ಧರ್ಮ ಪ್ರೇಕ್ಷಕರ ಹೃದಯವನ್ನು ಸೆರೆಹಿಡಿಯಲು ಒಂದು ವರ್ಷವಾಗಿದೆ! ಯಾವಾಗಲೂ ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ಉತ್ತಮವಾಗಿ ಮಾಡಲು ನಮ್ಮನ್ನು ಪ್ರೇರೇಪಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು ನೀವು ಪ್ರೀತಿಸುತ್ತೀರಿ, ಇದು ನಮ್ಮ ಶಕ್ತಿ ಆಗಿದೆ” ಎಂದು ಹಂಚಿಕೊಂಡಿದ್ದಾರೆ.

#image_title

ಚಾರ್ಲಿ 777 ಸಿನಿಮಾವು ನಾಯಿ ಮತ್ತು ಮನುಷ್ಯನ ಬಾಂಧವ್ಯ ಕಥೆ ಆಗಿ ತೆರೆ ಕಂಡಿತ್ತು. ಹಾಗೆಯೇ ಚಾರ್ಲಿ 777 ಸಿನಿಮಾವು ಜಗತ್ತಿನಾದ್ಯಂತ ಪ್ರೇಕ್ಷಕರ ಮನ ಗೆಲುವಲ್ಲಿ ಯಶಸ್ವಿಯಾಗಿದೆ. ಇತ್ತೀಚೆಗೆ ಸಿನಿರಂಗದಲ್ಲಿ ಹೊಸ ಹೊಸ ಕಥೆಗಳನ್ನು ಹೊತ್ತು ತರುತ್ತಿದ್ದು, ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾಗಳು ಮಾತ್ರ ಸದ್ದು ಮಾಡ್ತಿವೆ. ಅದರಲ್ಲೂ ಪ್ಯಾನ್ ಇಂಡಿಯಾ ಸಿನಿಮಾಗಳು ಒಂದೊಂದಾಗಿ ತೆರೆಗೆ ಬರ್ತಿವೆ. ಇಷ್ಟೆಲ್ಲಾ ಕಾಂಪಿಟೇಷನ್ ನಡುವೆಯೂ ಸಿನಿಮಾ ಭರ್ಜರಿ ಕಲೆಕ್ಷನ್‌ ಮಾಡುವ ಮೂಲಕ ಯಶಸ್ಸನ್ನು ಪಡೆದುಕೊಂಡಿದೆ.

ಈ ಸಿನಿಮಾದಲ್ಲಿ ನಟ ರಕ್ಷಿತ್ ಶೆಟ್ಟಿ ಜತೆಗೆ ರಾಜ್‌ ಬಿ. ಶೆಟ್ಟಿ, ದಾನಿಶ್‌ ಸೇಠ್‌, ತಮಿಳಿನ ಬಾಬಿ ಸಿಂಹ ಸೇರಿ ಇನ್ನೂ ಅನೇಕರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿರಣ್‌ ರಾಜ್‌ ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ನೋಬಿನ್‌ ಪೌಲ್‌ ಸಂಗೀತ ಮತ್ತು ಹಿನ್ನೆಲೆ ಸಂಗೀತ, ಅರವಿಂದ್‌ ಕಶ್ಯಪ್‌ ಛಾಯಾಗ್ರಹಣ, ಪ್ರತೀಕ್‌ ಶೆಟ್ಟಿ ಸಂಕಲನ, ಪ್ರಗತಿ ರಿಷಬ್‌ ಶೆಟ್ಟಿ ಅವರ ವಸ್ತ್ರ ವಿನ್ಯಾಸ, ವಿಕ್ರಮ್‌ ಮೋರ್‌ ಅವರ ಸಾಹಸ ಈ ಸಿನಿಮಾಕ್ಕಿತ್ತು.

ಇದನ್ನೂ ಓದಿ : Actress Ramya : ಆರೆಂಜ್‌ ಕಲರ್‌ ಸೀರೆಯಲ್ಲಿ ಸಖತ್‌ ಕ್ಯೂಟ್‌ ಆಗಿ ಕಾಣಿಸಿಕೊಂಡ ಮೋಹಕತಾರೆ ರಮ್ಯಾ

ನಟ ರಕ್ಷಿತ ಶೆಟ್ಟಿ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಹೇಮಂತ್ ರಾವ್ ನಿರ್ದೇಶನವಿದೆ. ಬೀರಬಲ್ ಸಿನಿಮಾದ ಖ್ಯಾತಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ.

Simple star Rakshit Shetty’s Charlie 777 movie celebrates first year

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular