ಇತ್ತೀಚಿನ ದಿನಗಳಲ್ಲಿ ನಿಜ ಜೀವನವನ್ನು ಆದರಿಸಿದ ಕಥೆಯನ್ನೇ ಇಟ್ಟುಕೊಂಡು ಸಿನಿಮಾಗಳ ನಿರ್ಮಾಣ ಮಾಡೋರ ಸಂಖ್ಯೆ ಹೆಚ್ಚಾಗಿದೆ. ಕಾರ್ಗಿಲ್ ಯುದ್ಧದ ಹೀರೊ ಕ್ಯಾಪ್ಟನ್ ವಿಕ್ರಂ ಬಾತ್ರಾ ಅವರ ಜೀವನ ಕಥೆಯನ್ನೇ ಆಧಾರವಾಗಿರಿಸಿಕೊಂಡು ಸಿದ್ಧಪಡಿಸಲಾಗಿರುವ ಹಿಂದಿ ಸಿನಿಮಾ “ಶೇರ್‍ಶಾಹ್’ ಸದ್ಯ ದೇಶಾದ್ಯಂತ ತೆರೆಕಂಡಿದೆ.
ಆದರೆ, ಸಿನಿಮಾದ ‘ರಾಂಝಾ’ ಅನ್ನೋ ಗೀತೆ ಸೂಪರ್ ಹಿಟ್ ಆಗಿತ್ತು. ಅದರಲ್ಲೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಮನಗೆದ್ದಿರುವುದು ವಿಶೇಷ. ಈ ಬಗ್ಗೆ ಅವರೇ ಇನ್‍ಸ್ಟಾಗ್ರಾಂ ಸ್ಟೋರೀಸ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಗೀತೆಯನ್ನು ಜಸ್ಲೀನ್ ರಾಯಲ್ ಮತ್ತು ಬಿ ಪ್ರಾಕ್ ಹಾಡಿದ್ದಾರೆ.
ಕೊರೋನಾ ಅಟ್ಟಹಾಸದ ಸಮಯದಲ್ಲಿ ಈ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿದ್ದು. ನಿಜ ಜೀವನದಲ್ಲೂ ಲವ್ ಬರ್ಡ್ಸ್ ಎನ್ನಲಾಗುತ್ತಿರುವ ಸಿದ್ಧಾರ್ಥ ರಾಯ್ ಕಪೂರ್ ಮತ್ತು ಕಿಯಾರ ಅಡ್ವಾನಿ ಅವರು ಜೋಡಿಯಾಗಿ ನಟಿಸಿರುವ ಈ ಸಿನಿಮಾ ಭಾರಿ ಜನಪ್ರಿಯತೆ ಗಳಿಸಿದೆ.