ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ನಿನ್ನೆ (ಆಗಸ್ಟ್ 6) ರಂದು ವಿದೇಶಿ ಪ್ರಯಾಣದಲ್ಲಿ ಇದ್ದಾಗ ಹೃದಯಾಘಾತದಿಂದ (Spandana Vijay Raghavendra) ವಿಧಿವಶರಾಗಿದ್ದಾರೆ. ಸ್ಪಂದನಾ ಅವರ ಸಾವು ಎಲ್ಲರಿಗೂ ಶಾಕಿಂಗ್ ಸುದ್ದಿಯಾಗಿದೆ. ಕುಟುಂಬದವರಿಗೆ ಸಹಿಸಿಕೊಳ್ಳಲಾಗದಂತಹ ಆಘಾತಕಾರಿ ಸುದ್ದಿಯಾಗಿದೆ. ನಟ ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ಅವರದ್ದು ಪ್ರೇಮ ವಿವಾಹವಾಗಿದೆ. ಈಗಾಗಲೇ ವಿವಾಹವಾಗಿ 15 ವರ್ಷಗಳ ಅನ್ಯೋನ್ಯತೆಯ ದಾಂಪತ್ಯವನ್ನು ಕಳೆದಿದ್ದಾರೆ. ಸದ್ಯ ನಟ ವಿಜಯ ರಾಘವೇಂದ್ರ ಅವರಿಗೆ ಈ ನೋವನ್ನು ಭರಿಸುವಂತ ಶಕ್ತಿ ನೀಡಲಿ ಎಂದು ಅಭಿಮಾನಿಗಳು ದೇವರಲ್ಲಿ ಕೇಳಿಕೊಂಡಿದ್ದಾರೆ.
ಎಲ್ಲರಿಗೂ ಗೊತ್ತಿರುವಂತೆ ಇವರದ್ದು, ಪ್ರೇಮ ವಿವಾಹವಾಗಿದೆ. ನಟ ವಿಜಯ ಅವರಿಗೆ ಹೆಂಡತಿ ಸ್ಪಂದನಾ ಮೇಲೆ ಅಪಾರ ಪ್ರೀತಿ. ಕನ್ನಡದ ಬಿಗ್‌ಬಾಸ್ ಮೊದಲ ಸೀಸನ್ ಕಂಡಿದ್ದವರಿಗೆ ತಿಳಿದಿರುತ್ತದೆ. ನೂರು ದಿನ ಬಿಗ್‌ಬಾಸ್ ಮನೆಯಲ್ಲಿದ್ದಾಗ ನಟ ವಿಜಯ ರಾಘವೇಂದ್ರ ತಮ್ಮ ಹೆಂಡತಿಯನ್ನು ನೆನಪಿಸಿಕೊಳ್ಳದ ದಿನವೇ ಇಲ್ಲ. ಅಷ್ಟಕ್ಕೂ ಇವರ ಪ್ರೀತಿ ಹುಟ್ಟಿದ್ದು ಎಲ್ಲಿ ಗೊತ್ತಾ ಇಲ್ಲಿದೆ ಅದರ ಕಂಪ್ಲೀಟ್ ಮಾಹಿತಿ
ನಟ ವಿಜಯ ರಾಘವೇಂದ್ರ 2003ರಲ್ಲಿ ಮಲ್ಲೇಶ್ವರ ಕಾಫಿ ಡೇನಲ್ಲಿ ಮೊದಲು ಸ್ಪಂದನಾ ಅವರನ್ನು ನೋಡಿದ್ದು, ಆ ದಿನವೇ ಅವರು ಇಷ್ಟವಾಗಿದ್ರು ಅಂತೆ. ಆದರೆ ಮಾತನಾಡಿಸುವ ಧೈರ್ಯ ಇರಲ್ವಂತೆ. ನಂತರ 2006ರಲ್ಲಿ ಮತ್ತೆ ಸ್ಪಂದನಾ ಅವರನ್ನು ನೋಡಿದ್ರಂತೆ ಆಗಲೂ ಮಾತನಾಡಿರಲಿಲ್ಲ. ಆದರೆ ಒಂದು ಸ್ಪಂದನಾ ಜಿಮ್‌ನಲ್ಲಿ ಸಿಕ್ಕಿದ್ದು, ಮಾತನಾಡಿಸಿದ್ರು ಹೆಸರನ್ನು ಕೇಳಿರಲಿಲ್ವಂತೆ. ಇತ್ತ ನಟ ವಿಜಯ ಅವರ ಮನೆಯಲ್ಲಿ ಮದುವೆಗೆ ಹುಡುಗಿ ನೋಡುತ್ತಿದ್ದರಂತೆ, ಆಗ ಅವರು ತಮ್ಮ ತಂದೆ ಚಿನ್ನೆಗೌಡರ ಬಳಿ ತಮ್ಮ ಪ್ರೇಮಕಥೆಯನ್ನು ತಿಳಿಸಿದ್ದಾರೆ. ಆಗ ಅವರು ಖುಷಿಪಟ್ಟು ಸ್ಪಂದನಾ ತಂದೆ ಶಿವರಾಮ್ ಬಳಿ ಮಾತನಾಡಿದರು ಎಂದು ವಿಜಯ ರಾಘವೇಂದ್ರ ಅವರು ಹಿಂದೊಮ್ಮೆ ಹೇಳಿಕೊಂಡಿದ್ದರು.
ಇದನ್ನೂ ಓದಿ : Spandana Vijay Raghavendra : ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹುಟ್ಟಿದು ಎಲ್ಲಿ ಗೊತ್ತಾ ?
ಸ್ಪಂದನಾ ಅವರ ತಂದೆ ಹಾಗೂ ಚಿನ್ನೆಗೌಡ ಕುಟುಂಬದವರಿಗೆ ಮೊದಲೇ ಪರಿಚಯವಿದ್ದರಿಂದ ಮುದುವೆ ಮಾತುಕತೆ ಸುಲಭವಾಗಿ ನಡೆದಿದೆ. ಹೀಗಾಗಿ ಇವರ ಮದುವೆ ಲವ್ ಕಮ್ ಆರೇಂಜ್ ಮ್ಯಾರೇಜ್ ಆಗಿ ಮದುವೆ ನಡೆದಿರುತ್ತದೆ. ಅದರಂತೆ ಸ್ಪಂದನಾ ಅವರು ಕನ್ನಡ ಪ್ರಸಿದ್ಧ ನಟ ವಿಯ್ ರಾಘವೇಂದ್ರ ಅವರನ್ನು 26 ಆಗಸ್ಟ್ 2007 ರಂದು ವಿವಾಹವಾದರು. ಈ ದಂಪತಿಗಳಿಗೆ ಶೌರ್ಯ ಎಂಬ ಮಗನಿದ್ದಾನೆ.
Spandana Vijay Raghavendra: Do you know how actor Vijay Raghavendra and Spandana’s love journey was?