ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅವರು ಆಗಸ್ಟ್ 6ರಂದು ಹೃದಯಾಘಾತದಿಂದ (Spandana Vijay Raghavendra) ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಸ್ಪಂದನಾ ವಿಜಯ್ ರಾಘವೇಂದ್ರ ಅಪೂರ್ವ ಮತ್ತು ಕಿಸ್ಮತ್ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕನ್ನಡದ ನಟಿಯಾಗಿದ್ದಾರೆ. ಆರೋಗ್ಯವಾಗಿದ್ದ ಸ್ಪಂದನಾ ಸಡನ್ ಆಗಿ ನಿಧನ ಹೊಂದಿದ್ದು, ನಿಜಕ್ಕೂ ದುಃಖಕರವಾಗಿದೆ. ಸದ್ಯ ಈ ಆಘಾತಕಾರಿ ಸುದ್ದಿ ಇಡೀ ಕುಟುಂಬ ಕಣ್ಣೀರಲ್ಲಿ ಮುಳುಗಿದಂತೆ ಆಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಇವರ ವಿವಾಹ ವಾರ್ಷಿಕೋತ್ಸವ ಇರಲಿದ್ದು, ಅದಕ್ಕೂ ಮೊದಲೇ ಸ್ಪಂದನಾ ಮೃತಪಟ್ಟಿರುವುದು ಪತಿ ವಿಜಯ ರಾಘವೇಂದ್ರ ಅವರಿಗೆ ಸಾಕಷ್ಟು ನೋವು ತಂದಿದೆ.
ಸ್ಪಂದನಾ ವಿಜಯ್ ರಾಘವೇಂದ್ರ ಅವರು 2016 ರಲ್ಲಿ ವಿ. ರವಿಚಂದ್ರನ್ ನಿರ್ದೇಶನದ ಕನ್ನಡ ಸಿನಿಮಾ “ಅಪೂರ್ವ” ದೊಂದಿಗೆ ತಮ್ಮ ನಟನೆಯನ್ನು ಪ್ರಾರಂಭಿಸಿದರು. ನಿವೃತ್ತ ಡಿ.ಕೆ.ಶಿವರಾಮನ್ ಅವರ ಪುತ್ರಿ ಸ್ಪಂದನಾ ದಕ್ಷಿಣ ಕನ್ನಡದ ಬೆಳ್ತಂಗಡಿ ಮೂಲದವರಾಗಿದ್ದು, ಪತಿಯೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಸ್ಪಂದನಾ ವಿಜಯ್ ರಾಘವೇಂದ್ರ ಅವರು ಭಾರತದ ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆಯ ಹೆಸರು ಬಿ.ಕೆ.ಶಿವರಾಂ, ಸಹಾಯಕ ಪೊಲೀಸ್ ಆಯುಕ್ತರು, ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸ್ಪಂದನಾ ತನ್ನ ಶಾಲಾ ಶಿಕ್ಷಣವನ್ನು ಬೆಂಗಳೂರಿನ ಸ್ಟೆಲ್ಲಾ ಮಾರಿಸ್ ಹೈಸ್ಕೂಲ್‌ನಲ್ಲಿ ಪೂರ್ಣಗೊಳಿಸಿದರು ಮತ್ತು ಕೇರಳದ MES ಕಾಲೇಜಿನಲ್ಲಿ ಪದವಿಯನ್ನು ಮುಗಿಸಿದರು. ಸ್ಪಂದನಾ ಅವರು ಕನ್ನಡ ಪ್ರಸಿದ್ಧ ನಟ ವಿಜಯ ರಾಘವೇಂದ್ರ ಅವರನ್ನು 26 ಆಗಸ್ಟ್ 2007 ರಂದು ವಿವಾಹವಾದರು. ಈ ದಂಪತಿಗಳಿಗೆ ಶೌರ್ಯ ಎಂಬ ಮಗನಿದ್ದಾನೆ. ಇದನ್ನೂ ಓದಿ : Spandana Passed Away : ಸ್ಯಾಂಡಲ್‌ವುಡ್ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ವಿಧಿವಶ
ಸ್ಪಂದನಾ ವಿಜಯ್ ರಾಘವೇಂದ್ರ ಅವರು ಗೃಹಿಣಿಯಾಗಿದ್ದು, ಮನೆ ನಿರ್ವಹಣೆಯನ್ನು ಮಾಡಿಕೊಂಡಿದ್ದರು. ಅವರು ವಿದೇಶಿ ಪ್ರಯಾಣದಲ್ಲಿದ್ದಾಗ, ಲೋ ಬಿಪಿ ಆಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ನಾಳೆ ಬೆಂಗಳೂರಿನ ಸ್ವಗೃಹಕ್ಕೆ ಸ್ಪಂದನಾ ಅವರ ಪಾರ್ಥಿವ ಶರೀರ ಬರಲಿದ್ದು, ನಂತರ ವಿಧಿ ವಿಧಾನದೊಂದಿಗೆ ಅಂತ್ಯಕ್ರಿಯೆ ನಡೆಸಲಿದ್ದಾರೆಂದು ಹೇಳಲಾಗಿದೆ.
Spandana Vijay Raghavendra: Do you know where actor Vijay Raghavendra’s wife Spandana was born?