ಸೋಮವಾರ, ಏಪ್ರಿಲ್ 28, 2025
HomeCinemaSpark Life Movie : ಯುವ ಪ್ರತಿಭೆ ವಿಕ್ರಾಂತ್ ಅಭಿನಯದ ‘ಸ್ಪಾರ್ಕ್ ಲೈಫ್’ ಸಿನಿಮಾ ಟೀಸರ್...

Spark Life Movie : ಯುವ ಪ್ರತಿಭೆ ವಿಕ್ರಾಂತ್ ಅಭಿನಯದ ‘ಸ್ಪಾರ್ಕ್ ಲೈಫ್’ ಸಿನಿಮಾ ಟೀಸರ್ ರಿಲೀಸ್‌

- Advertisement -

ಸಿನಿರಂಗದಲ್ಲಿ ಇತ್ತೀಚೆಗೆ ಪ್ಯಾನ್‌ ಇಂಡಿಯಾ ಹಾವಳಿ ಆಗಿದೆ. ಹಾಗಾಗಿ ಎಲ್ಲಾ ಭಾಷೆಯ ಸಿನಿರಂಗದಲ್ಲೂ ಒಂದರ ಹಿಂದೆ ಮತ್ತೊಂದು ಎನ್ನುವಂತೆ ಪ್ಯಾನ್‌ ಇಂಡಿಯಾ ಸಿನಿಮಾಗಳು ಅನೌನ್ಸ್‌ ಆಗುತ್ತಿದೆ. ಸದ್ಯ ತೆಲುಗಿನಲ್ಲಿ ಸ್ಪಾರ್ಕ್‌ ಲೈಫ್‌ (Spark Life Movie) ಎಂಬ ಸಿನಿಮಾ ತಯಾರಾಗ್ತಿದ್ದು, ಈ ಸಿನಿಮಾದ ಟೀಸರ್‌ ಕೂಡ ರಿಲೀಸ್‌ ಆಗಿದೆ. ಈ ಸಿನಿಮಾದ ಟೀಸರ್‌ ಎರಡು ನಿಮಿಷ ಎರಡು ಸೆಕೆಂಡ್‌ ಇದ್ದು, ಸಂಪೂರ್ಣವಾಗಿ ಆಕ್ಷನ್‌ ಸೀನ್‌ಗಳಿಂದ ಕೂಡಿದೆ. ಇದರಲ್ಲಿ ಯುವ ಪ್ರತಿಭೆ ವಿಕ್ರಾಂತ್‌ ನಾಯಕನಾಗಿ ನಟಿಸಿದ್ದು, ಮೆಹ್ರೀನ್‌ ಫಿರ್ಜಾದಾ ಹಾಗೂ ರುಕ್ಸಾರ್‌ ಧಿಲ್ಲೋನ್‌ ನಟಿ ಮಣಿಯರು ಅಭಿನಯಿಸಿದ್ದಾರೆ.

ಧಗಧಗಿಸುವ ಬೆಂಕಿ, ಹೆಣಗಳ ರಾಶಿ, ರಕ್ತಪಾತದಿಂದ ಆರಂಭವಾಗುವ ಟೀಸರ್ ನಲ್ಲಿ ನಾಯಕನನ್ನು ಭರ್ಜರಿ ಆಕ್ಷನ್ ಮೂಲಕ ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸಿದ್ದಾರೆ. ಸಿನಿಮಾ ಟೀಸರ್‌ ಉದ್ದಕ್ಕೂ ಪ್ರೀತಿ, ಪ್ರೇಮ, ತನಿಖೆ ಸುತ್ತ ಸಾಗುತ್ತದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಸಿನಿತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಸೈಕಾಲಜಿಕಲ್ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸ್ಪಾರ್ಕ್ ಲೈಫ್ ಸಿನಿಮಾಗೆ ಡೆಫ್ ಫ್ರಾಗ್ ಪ್ರೊಡಕ್ಷನ್ ಆಕ್ಷನ್ ಕಟ್ ಹೇಳಿದ್ದು, ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ : Skanda Movie : ಸ್ಕಂದ ಸಿನಿಮಾದ ಫಸ್ಟ್‌ ಸಾಂಗ್‌ ರಿಲೀಸ್‌ : ಸಖತ್‌ ಆಗಿ ಕುಣಿದ ನಟಿ ಶ್ರೀಲೀಲಾ

ಮಲಯಾಳಂ ನಟ ಗುರು ಸೋಮಸುಂದರಂ ಮತ್ತು ನಾಸರ್, ಸುಹಾಸಿನಿ ಮಣಿರತ್ನಂ, ವೆನ್ನೆಲ ಕಿಶೋರ್, ಸತ್ಯ, ಶ್ರೀಕಾಂತ್ ಅಯ್ಯಂಗಾರ್, ಅನ್ನಪೂರ್ಣಮ್ಮ, ರಾಜಾ ರವೀಂದ್ರ ತಾರಾಬಳಗದಲ್ಲಿದ್ದಾರೆ. ಹೃದಯಂ ಸಿನಿಮಾ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನವಿರುವ ಸ್ಪಾರ್ಕ್ ಲೈಫ್ ಸಿನಿಮಾ ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಮೂಡಿ ಬರಲಿದೆ.

Spark Life Movie: Teaser release of young talent Vikrant’s movie ‘Spark Life’

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular