ಡಿ ಬಾಸ್ ದರ್ಶನ್ ಹಾಗೂ ಸೃಜನ್ ಲೋಕೇಶ್ ಆತ್ಮೀಯ ಮಿತ್ರರು. ಎಲ್ಲಿಗೆ ಹೋಗಲಿ, ಎಲ್ಲಿಗೆ ಬರಲಿ ಇಬ್ಬರೂ ಒಟ್ಟಿಗೆ ಇರ್ತಾರೆ. ಕಷ್ಟಕಾಲದಲ್ಲಿ ಸೃಜನ್ ಲೋಕೇಶ್ ಕೈ ಹಿಡಿದಿದ್ದು ಕೂಡ ದರ್ಶನ್. ಹೀಗಾಗಿಯೇ ಸೃಜನ್ ಗೆ ದರ್ಶನ್ ಅಂದ್ರೆ ಪಂಚಪ್ರಾಣ. ಇಂತಹ ಗೆಳೆಯನಿಗೆ ಡಿ ಬಾಸ್ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ.

ಸ್ಯಾಂಡಲ್ ವುಡ್ ನಟ, ಕಿರುತೆರೆಯ ಕಾಮಿಡಿ ಕಿಂಗ್ ಸೃಜನ್ ಲೋಕೇಶ್ ಅವರಿಗಿಂದು ಹುಟ್ಟು ಹಬ್ಬದ ಸಂಭ್ರಮ. ಲೋಕೇಶ್ ಹಾಗೂ ಗಿರಿಜಾ ಲೋಕೇಶ್ ಅವರ ಮುದ್ದಿನ ಮಗನಾಗಿರೋ ಸೃಜನ್ ಲೋಕೇಶ್ ಕನ್ನಡಿಗರ ಮನೆ ಮಾತಾಗಿದ್ದಾರೆ. ಮಜಾ ಟಾಕೀಸ್ ಕಿರುತೆರೆಯಲ್ಲಿಯೇ ಹೊಸ ದಾಖಲೆ ಬರೆದಿದೆ.

ಲೋಕೇಶ್ ಪ್ರೋಡಕ್ಷನ್ ಮೂಲಕ ಕಿರಿತು ತೆರೆಯಲ್ಲಿ ರಿಯಾಲಿಟಿ ಶೋ, ಧಾರವಾಹಿ, ಸಿನಿಮಾಗಳ ಮೂಲಕ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿರೋ ಸೃಜನ್ ಲೋಕೇಶ್ ಹಲವು ಕನಸುಗಳನ್ನು ಕಂಡಿದ್ದಾರೆ. ಇಂತಹ ಕನಸುಗಳೆಲ್ಲಾ ನನಸಾಗಲಿ ಅಂತಾನೂ ಡಿ ಬಾಸ್ ಶುಭಕೋರಿದ್ದಾರೆ.