Amruthadhaare Serial: ಸೀರಿಯಲ್ ಗಳು ಅಂದ್ರೆ ಸಾಕು ಮಾರು ಉದ್ದ ಓಡುತ್ತಿದ್ದ ಜನ ಇದೀಗ ಸೀರಿಯಲ್ ಅಂದ್ರೆ ಸಾಕು ಓಡೋಡಿ ಬರುವಂತಾಗಿದೆ. ಅದಕ್ಕೆ ಕಾರಣ ಇತ್ತೀಚಿಗೆ ಸಿನಿಮಾ ಶೈಲಿಯಲ್ಲೇ ಬರುವ ಧಾರಾವಾಹಿಗಳು. ಸದ್ಯ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ಹಲವು ಧಾರಾವಾಹಿಗಳು ತಮ್ಮದೇ ಆದಂತಹ ಕಥೆಗಳ ಮೂಲಕ ವೀಕ್ಷಕ ಬಳಗವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಂತಹ ಧಾರಾವಾಹಿಗಳಲ್ಲಿ ಝೀ ಕನ್ನಡದಲ್ಲಿ ಪ್ರಸಾರವಾಗುವ ಶ್ರೀರಸ್ತು ಶುಭಮಸ್ತು ಧಾರಾವಾಹಿ ಹಾಗೂ ಅಮೃತಧಾರೆ ಧಾರಾವಾಹಿಗಳು ಮುಖ್ಯವಾದವು.

ಶ್ರೀರಸ್ತು ಶುಭಮಸ್ತು ಧಾರಾವಾಹಿ ಹಿರಿಯ ನಟಿ ಸುಧಾರಾಣಿ, ಹಿರಿಯ ನಟ ವೆಂಕಟರಾವ್, ಮುಖ್ಯ ಸೀರಿಯಲ್ ಖ್ಯಾತಿಯ ಅಜಿತ್ ಹಂದೆ ಅಂತಹ ಅದ್ಭುತ ಕಲಾವಿದರನ್ನು ಹೊಂದಿದ್ದರೆ ಹಾಗೂ ಅಮೃತಧಾರೆ ಧಾರಾವಾಹಿಯಲ್ಲಿ ರಾಜೇಶ್ ನಟರಂಗ, ಛಾಯಾಸಿಂಗ್, ವನಿತಾ ವಾಸು, ಸಿಹಿಕಹಿ ಚಂದ್ರು, ಚಿತ್ರಾ ಶೆಣೈಯಂತಹ ಖ್ಯಾತನಾಮ ಕಲಾವಿದರಿದ್ದಾರೆ. ಸದ್ಯಕ್ಕೆ ಎರಡು ಧಾರಾವಾಹಿಗಳಲ್ಲಿ ಕಥೆ ಅದ್ಭುತ ರೀತಿಯಲ್ಲಿ ಸಾಗುತ್ತಿದೆ.
ಇದನ್ನು ಓದಿ; ಕನಸೊಂದು ನನಸಾಯಿತು ಎಂದ ಶಿವಣ್ಣಪುತ್ರಿ: ನಿವೇದಿತಾ ಪೋಸ್ಟ್ ವೈರಲ್
ಸದ್ಯ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಸಂಚಿಕೆಗಳಲ್ಲಿ ತುಳಸಿ ತಾಯಿಯಾಗಿದ್ದು ಅದನ್ನು ಮಾಧವನಿಗೆ ತಿಳಿಸೋದಕ್ಕೆ ಆಕೆ ಒದ್ದಾಡುತ್ತಿರುವುದನ್ನು ತೋರಿಸಲಾಗುತ್ತಿದೆ. ಸದ್ಯ ಸಮರ್ಥ ಕೂಡ ತಾಯಿಯ ಮೇಲಿನ ಮುನಿಸು ಕಮ್ಮಿ ಮಾಡಿಕೊಂಡು ಅಮ್ಮಾ ಅನ್ನುತ್ತಿದ್ದು ಪ್ರತಿ ಸಂಚಿಕೆಗಳು ವೀಕ್ಷಕರಿಗೆ ಇಷ್ಟವಾಗುತ್ತಿದೆ. ಅತ್ತ ಅಮೃತಧಾರೆ ಧಾರಾವಾಹಿಯಲ್ಲಿ ಮನೆಯವೆರಲ್ಲಾ ಸೇರಿ ಮಲ್ಲಿಗೆ ಸೀಮಂತ ಮಾಡಿದ್ದಾರೆ. ಈ ವೇಳೆ ಸೀಮಂತಕ್ಕೆ ಮನೆಗೆ ಬಂದ ಶಕುಂತಲಾ ಗೆಳತಿಯರು ಭೂಮಿಕಾಗೆ ನಿಮ್ದೇನು ಗುಡ್ ನ್ಯೂಸ್ ಇಲ್ವಾ? ಯಾವುದಕ್ಕೂ ಒಮ್ಮೆ ವೈದ್ಯರಿಗೆ ತೋರಿಸಿ ಎಂದು ಹೇಳಿ ಆಕೆಯ ಮನಸ್ಸಿಗೆ ನೋವು ಮಾಡುತ್ತಾರೆ. ಇದು ಗೌತಮ್ ಗೆ ಗೊತ್ತಾಗಿ ಆ ಮಹಿಳೆಯರ ಅಹಂಕಾರ ಇಳಿಸುತ್ತಾನೆ. ಇದಾದ ಬಳಿಕ ನಾವು ಒಮ್ಮೆ ಯಾಕೆ ಡಾಕ್ಟರ್ ಅನ್ನು ಕನ್ಸಲ್ಟ್ ಮಾಡಬಾರದು ಎಂದು ಭೂಮಿ ಗೌತಮ್ ಗೆ ಕನ್ವಿನ್ಸ್ ಮಾಡಿ ಇಬ್ಬರು ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ.

ಇದೀಗ ಆ ಸಂಚಿಕೆ ಪ್ರೋವನ್ನು ಪ್ರಸಾರ ಮಾಡಲಾಗಿದ್ದು ಅದರಲ್ಲಿ ಭೂಮಿಕಾ ಹಾಗೂ ಗೌತಮ್ ಗೆ ಯಾಕೆ ಮಕ್ಕಳಾಗಲು ಸಮಸ್ಯೆಯಾಗುತ್ತಿದ್ದಂತೆ ಎಂಬ ಬಗ್ಗೆ ವೈದ್ಯರು ವಿವರಿಸುತ್ತಿದ್ದಾರೆ. ನಿಮಗೆ ಇಬ್ಬರಿಗೂ ವಯಸ್ಸಾಗಿದೆ. ಮಹಿಳೆಯರಿಗೆ 30 ದಾಟಿದ ಬಳಿಕ ಗರ್ಭ ಧರಿಸೋದು ಕಷ್ಟ ಆಗುತ್ತೆ. ಹಾಗಾಗಿ ಸಮಸ್ಯೆಯಾಗಿದೆ. ಆದರೆ ಮಕ್ಕಳಾಗುವುದಿಲ್ಲ ಅಂತಲ್ಲ. ಆಗುತ್ತೆ ಸ್ವಲ್ಪ ಕಷ್ಟ ಆಗುತ್ತೆ ಎನ್ನುತ್ತಾರೆ.
ಈ ಪ್ರೋಮೋ ನೋಡಿದ ಬಹುತೇಕ ನೆಟ್ಟಿಗರು ಹಾಗಾದ್ರೆ ಮೊಮ್ಮಕ್ಕಳನ್ನು ಆಡಿಸೋ ವಯಸ್ಸಿನ ತುಳಸಿ ತಾಯಿಯಾಗಿದ್ದಾಳೆ. ಆದರೆ ಜಸ್ಟ್ 30 ದಾಟಿದ ಭೂಮಿಕಾಗೆ ಯಾಕೆ ಮಕ್ಕಳಾಗ್ತಿಲ್ಲ ಎಂದು ಕಮೆಂಟ್ ಮಾಡ್ತಿದ್ದಾರೆ. ಸದ್ಯ ಎರಡೂ ಧಾರಾವಾಹಿಗಳನ್ನು ಕಂಪೇರ್ ಮಾಡಿ ವೀಕ್ಷಕರು ಕಮೆಂಟ್ ಮಾಡುತ್ತಿದ್ದು ಒಂದೊಂದು ಕಮೆಂಟ್ ಜನ ಸೀರಿಯಲ್ ಅನ್ನು ಯಾವ ರೇಂಜಿಗೆ ಸೀರಿಯಸ್ಸಾಗಿ ತೆಗೆದುಕೊಂಡಿದ್ದಾರೆ ಅನ್ನೋದು ಗೊತ್ತಾಗ್ತಿದೆ.
ಇದನ್ನು ಓದಿ; ರಾಯನ್ ಜೊತೆ ಮೇಘನಾ ರಾಜ್ ಸರ್ಜಾ : ಮಗನ ತುಂಟಾಟದ ವಿಡಿಯೋ ಶೇರ್ ಮಾಡಿದ ನಟಿ