ಮೀಟೂ ಪ್ರಕರಣದಲ್ಲಿ ಹಿನ್ನಡೆಯಾಗಿದ್ದರೂ ವೃತ್ತಿಬದುಕಿನಲ್ಲಿ ಹಿಂದೆ ಬಿದ್ದಿಲ್ಲ ನಟಿ ಶೃತಿ ಹರಿಹರನ್. ಮೊನ್ನೆ ಮೊನ್ನೆಯಷ್ಟೇ ಹಿರಿಯ ನಟ ಅರ್ಜುನ್ ಸರ್ಜಾ ಮೇಲೆ ನಟಿ ಶ್ರುತಿ ಹರಿಹರನ್ (Sruthi Hariharan) ಮಾಡಿದ್ದ ಮೀಟೂ ಆರೋಪ ಪ್ರಕರಣದ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ. ತಾವು ಮಾಡಿದ ಆರೋಪಗಳಿಗೆ ಸೂಕ್ತ ದಾಖಲೆ ಒದಗಿಸಲು ವಿಫಲರಾಗಿ ದ್ದಾರೆ. ಆದರೆ ಈ ನೋವಿನ ನಡುವೆಯೂ ಶ್ರುತಿ ಸಿನಿಮಾ ಬದುಕಿನಲ್ಲಿ ಬ್ಯುಸಿಯಾಗಿದ್ದು ಇದೇ ಮೊದಲ ಬಾರಿಗೆ ಶ್ರುತಿ ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ರಕ್ಷಿತ್ ಶೆಟ್ಟಿ ನಿರ್ಮಾಣದ ಸ್ಟ್ರಾಬರಿ ಸಿನಿಮಾದಲ್ಲಿ ಶ್ರುತಿ ಹರಿಹರನ್ ನಟಿಸಿದ್ದು, ವಿಭಿನ್ನ ಕತೆಯೊಂದರ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿರುವ ಈ ಸಿನಿಮಾದಲ್ಲಿ ಶ್ರುತಿ ನಟನೆ ಸದ್ದು ಮಾಡುವಂತಿದೆ. ತಾಯಿ ಪ್ರೀತಿಯನ್ನು ಕಳೆದುಕೊಂಡ ಅಮೃತಾ ಎನ್ನುವ ಲೈಂಗಿಕ ಕಾರ್ಯಕರ್ತೆಯೊಬ್ಬಳ ಕತೆಯನ್ನು ಚಿತ್ರವನ್ನು ತೆರೆದಿಡುತ್ತದೆ. ತಾಯಿಪ್ರೀತಿ ಕಳೆದುಕೊಂಡು ತಬ್ಬಲಿಯಾದ ಹೆಣ್ಣುಮಗಳಿಗೆ ಮತ್ತೊಮ್ಮೆ ಬಾಳಲ್ಲಿ ಅಂತಹ ಪ್ರೀತಿ ಭರವಸೆ ಸಿಕ್ಕಾಗ ಅಮೃತಾ ಕಡಲನ್ನು ಸೇರಲು ಹೊರಟ ನದಿಯಂತೆ ಸಾಗುವ ಕಥೆಯೇ ಸ್ಟಾಬ್ರೇರಿ ಎಂದು ಸಿನಿಮಾತಂಡ ಹೇಳ್ತಿದೆ.
ಸಿನಿಮಾಗಳ ಆಯ್ಕೆ ವಿಚಾರದಲ್ಲಿ ಸದಾ ಚ್ಯೂಸಿಯಾಗಿರೋ ಶ್ರುತಿ, ಈ ಸಿನಿಮಾದಲ್ಲಿ ಲೈಂಗಿಕ ಕಾರ್ಯಕರ್ತೆಯಾಗಿ ನಟಿಸಲು ಸಿದ್ಧವಾಗಿದ್ದಾರೆ. ಸಾಮಾನ್ಯ ಪಾತ್ರಗಳಿಗೆ ಹೋಲಿಸಿದರೇ ಲೈಂಗಿಕ ಕಾರ್ಯಕರ್ತೆ ಪಾತ್ರ ಕೊಂಚ ಚಾಲೆಂಜಿಂಗ್ . ಇದೇ ಕಾರಣಕ್ಕೆ ನಟಿಯರು ಸಾಮಾನ್ಯವಾಗಿ ಇಂಥ ಪಾತ್ರ ಆಯ್ಕೆ ಮಾಡಿಕೊಳ್ಳೋದಿಲ್ಲ. ಆದರೂ ಶ್ರುತಿ ಈ ಪಾತ್ರ ಆಯ್ಕೆ ಮಾಡಿಕೊಂಡಿದ್ದು ಪಾತ್ರಕ್ಕೆ ಜೀವ ತುಂಬುವಂತೆ ನಟಿಸಿದ್ದಾರಂತೆ. ಸದ್ಯ ಸ್ಟಾಬ್ರೆರಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಸದ್ಯದಲ್ಲೇ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ.
ಸ್ಟ್ರಾಬೆರಿ ರಕ್ಷಿತ್ ಶೆಟ್ಟಿ ನಿರ್ಮಾಣ ಸಂಸ್ಥೆ ಪರಂವಃ ಸ್ಪಾಟ್ ಲೈಟ್ ಬ್ಯಾನರ್ ನಿಂದನಿರ್ಮಾಣಗೊಂಡಿರೋ ಮೊದಲಸಿನಿಮಾವಾಗಿದ್ದು, ಸಿನಿಮಾವನ್ನು ಅರ್ಜುನ್ ಲೂವೀಸ್ ಬರೆದು ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ಶ್ರುತಿ ಹರಿಹರನ್ ಜೊತೆ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ, ನಟ ವಿನೀತ್ ಕುಮಾರ್, ವಿಜಯ್ ಮಯ್ಯ ಸೇರಿದಂತೆ ಹಲವು ನಟ- ನಟಿಯರು ನಟಿಸಿದ್ದಾರೆ. ಶ್ರುತಿ ಲೈಂಗಿಕ ಕಾರ್ಯಕರ್ತೆ ಅನ್ನೋದೇ ಈ ಸಿನಿಮಾದ ಹೈಲೈಟ್ ಅಲ್ಲ ಸಿನಿಮಾದ ಸ್ಕ್ರಿನ್ ಪ್ಲೇ ಅದ್ಭುತವಾಗಿ ಮೂಡಿಬಂದಿದೆ ಅಂತಿದೆ ಸಿನಿಮಾ ತಂಡ. ಒಟ್ಟಿನಲ್ಲಿ ಶ್ರುತಿ ಕೆರಿಯರ್ ಈ ಹೊಸ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ.
ಇದನ್ನೂ ಓದಿ : CD Case ಕ್ಲೀನ್ ಚೀಟ್ : ಸಚಿವ ಸ್ಥಾನಕ್ಕೆ ಮತ್ತೆ ಲಾಬಿ ಆರಂಭಿಸಿದ ರಮೇಶ್ ಜಾರಕಿಹೊಳಿ
ಇದನ್ನೂ ಓದಿ : ಗದ್ದೆಯಲ್ಲಿ ಮೂಡಿತು ಅಭಿಮಾನ: ಭತ್ತದ ಸಸಿಯಲ್ಲಿ ಪುನೀತ್ ರಾಜ್ ಕುಮಾರ್ ಗೆ ಹಾರೈಕೆ
( Sruthi Hariharan starrer new movie Strawberry produced by Rakshit Shetty )