ಸೋಮವಾರ, ಏಪ್ರಿಲ್ 28, 2025
HomeCinemaಪುನೀತ್‌ ಸಮಾಧಿಗೆ ಕುಟುಂಬಸ್ಥರಿಂದ ಹಾಲು-ತುಪ್ಪ ಶಾಸ್ತ್ರ

ಪುನೀತ್‌ ಸಮಾಧಿಗೆ ಕುಟುಂಬಸ್ಥರಿಂದ ಹಾಲು-ತುಪ್ಪ ಶಾಸ್ತ್ರ

- Advertisement -

ಬೆಂಗಳೂರು : ದೊಡ್ಡ ಮನೆಯ ಮಗ ಪುನೀತ್‌ ರಾಜ್‌ ಕುಮಾರ್‌ ನಿಧನರಾಗಿ ಇಂದಿಗೆ 5ನೇ ದಿನ. ಈ ಹಿನ್ನಲೆಯಲ್ಲಿ ಪುನೀತ್‌ ರಾಜ್‌ ಕುಮಾರ್‌ ಅವರ ಸಮಾಧಿ ಇರುವಂತ ಕಂಠೀರವ ಸ್ಟುಡಿಯೊಗೆ ತೆರಳಿ ಕುಟುಂಬಸ್ಥರಿಂದ 5ನೇ ದಿನದ ಹಾಲು- ತುಪ್ಪ ಬಿಡುವ ಶಾಸ್ತ್ರ ನೇರವೇರಲಿದೆ.

ಕಳೆದ ಶುಕ್ರವಾರದಂದು ಹೃದಯಾಘಾತದಿಂದ ಕನ್ನಡದ ಯುವ ರತ್ನ ಅಪ್ಪು ನಿಧನರಾದರು. ನಟ ಪುನೀತ್ ರಾಜ್‌ ಕುಮಾರ್‌ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಿ ನಂತರ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಇದನ್ನೂ ಓದಿ: Puneeth- Padma shri Award : ಪುನೀತ್ ಗೆ ಸಲ್ಲಲಿ ಪದ್ಮಶ್ರೀ: ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ

ಇದಾದ ಬಳಿಕ ನಡೆಯುವಂತಹ ಶಾಸ್ತ್ರ ಹಾಲು-ತುಪ್ಪ ಬಿಡುವಂತ ಶಾಸ್ತ್ರ. ಈ ಶಾಸ್ತ್ರವನ್ನು ನಿಧನರಾದ 5ನೇ ದಿನಕ್ಕೆ ಮಾಡುವುದರಿಂದ ಇಂದು ಈ ಹಾಲು-ತುಪ್ಪ ಬಿಡುವಂತ ಶಾಸ್ತ್ರ ನೆರವೇರಲಿದೆ. ಇದಕ್ಕಾಗಿ ಕಂಠೀರವ ಸ್ಟುಡಿಯೋಗೆ ದೊಡ್ಡ ಮನೆ ಕುಟುಂಬಸ್ತರು ತೆರಳಲಿದ್ದು. ಸಿದ್ಧತೆಯ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ: Puneeth Rajkumar James : ಜೇಮ್ಸ್ ಮೂಲಕ ಮತ್ತೆ ತೆರೆಗೆ ಬರ್ತಾರೆ ಪುನೀತ್: ಪವರ್ ಗೆ ಧ್ವನಿಯಾಗ್ತಾರೆ ಶಿವಣ್ಣ

(Milk-Ghee Shastra from The Family for Puneet Samadhi)

RELATED ARTICLES

Most Popular