ಭಾನುವಾರ, ಏಪ್ರಿಲ್ 27, 2025
HomeCinemaMadhagaja : ರಾಜ್ಯದ 800 ಸ್ಕ್ರೀನ್​ಗಳಲ್ಲಿ ತೆರೆಕಂಡ ಬಹುನಿರೀಕ್ಷಿತ ಮದಗಜ ಸಿನಿಮಾ..!

Madhagaja : ರಾಜ್ಯದ 800 ಸ್ಕ್ರೀನ್​ಗಳಲ್ಲಿ ತೆರೆಕಂಡ ಬಹುನಿರೀಕ್ಷಿತ ಮದಗಜ ಸಿನಿಮಾ..!

- Advertisement -

ಸ್ಯಾಂಡಲ್​ವುಡ್​ನ ರೋರಿಂಗ್​ ಸ್ಟಾರ್​ ಶ್ರೀಮುರುಳಿ ನಟನೆಯ ಬಹುನಿರೀಕ್ಷಿತ ಸಿನಿಮಾ ಮದಗಜ (Madhagaja) ರಾಜ್ಯಾದ್ಯಂತ ಗ್ರ್ಯಾಂಡ್​ ರಿಲೀಸ್​ ಕಂಡಿದೆ. ಸಿನಿಮಾದ ಟೀಸರ್​ ಹಾಗೂ ಟ್ರೇಲರ್​ ಮೂಲಕವೇ ಅಭಿಮಾನಿಗಳ ಕಣ್ಣಿಗೆ ಹಬ್ಬದೂಟವನ್ನು ನೀಡಿದ್ದ ಈ ಸಿನಿಮಾದ ಇಂದು ರಾಜ್ಯಾದ್ಯಂತ 800 ತೆರೆಗಳಲ್ಲಿ ಪ್ರದರ್ಶನ ಕಾಣುತ್ತಿದೆ.


ಮೊದಲ ಬಾರಿಗೆ ಬೆಳ್ಳಿ ತೆರೆ ಮೇಲೆ ಜೋಡಿಯಾಗಿ ನಟ ಶ್ರೀಮುರುಳಿ ಹಾಗೂ ನಟಿ ಆಶಿಕಾ ರಂಗನಾಥ್​ ನಟಿಸಿದ್ದಾರೆ. ಈ ಸಿನಿಮಾಗೆ ಉಮಾಪತಿ ಶ್ರೀನಿವಾಸ್​ ಬಂಡವಾಳ ಹೂಡಿದ್ದರೆ ಮಹೇಶ್​ ಕುಮಾರ್​ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಡಿಸೆಂಬರ್​ ತಿಂಗಳಲ್ಲಿ ತೆರೆ ಕಂಡ ಕನ್ನಡದ ಮೊದಲ ಸಿನಿಮಾ ಇದಾಗಿದ್ದು ಪ್ರೇಕ್ಷಕರು ಸಿನಿಮಾ ಮಂದಿರಗಳತ್ತ ಧಾವಿಸಿದ್ದಾರೆ.

ಮುರುಳಿ ಅಭಿಮಾನಿಗಳು ಅವರನ್ನು ಸಾಹಸ ದೃಶ್ಯಗಳಲ್ಲಿ ನೋಡಲು ಹೆಚ್ಚು ಇಷ್ಟಪಡ್ತಾರೆ . ಅದರಂತೆ ಈ ಸಿನಿಮಾದ ಟ್ರೇಲರ್​ನ್ನು ನೋಡ್ತಿದ್ರೆ ಮುರುಳಿ ಈ ಸಿನಿಮಾದಲ್ಲಿಯೂ ತಮ್ಮ ಸಾಹಸ ಪ್ರದರ್ಶನ ನೀಡಿದ್ದಾರೆ ಎನ್ನೋದ್ರಲ್ಲಿ ಯಾವುದೇ ಡೌಟ್​ ಇಲ್ಲ. ವರ್ಷದ ಕೊನೆಯಲ್ಲಿ ಗ್ರ್ಯಾಂಡ್​ ರಿಲೀಸ್​ ಕಂಡ ಬಿಗ್​ ಬಜೆಟ್​ ಸಿನಿಮಾ ಇದಾಗಿದ್ದು ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡೇ ಸಿನಿ ಮಂದಿರದಲ್ಲಿ ಕುಳಿತಿದ್ದಾರೆ.

ಕೆಜಿಎಫ್​ ಖ್ಯಾತಿಯ ರವಿ ಬಸ್ರೂರು ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.ಈಗಾಗಲೇ ಈ ಸಿನಿಮಾದ ಟೈಟಲ್​ ಸಾಂಗ್​ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಸಿನಿಮಾದಲ್ಲಿ ನಟಿ ಆಶಿಕಾ ರಂಗನಾಥ್​ ಹಳ್ಳಿ ಹುಡುಗಿ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನು ಓದಿ :Bhopal gas tragedy : 2022 ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ ಯಶ್ ರಾಜ್ ಫಿಲ್ಮ್ಸ್ ನ ಮೊದಲ ಒಟಿಟಿ ಚಿತ್ರ ” ದಿ ರೈಲ್ವೆ ಮೆನ್”

ಇದನ್ನೂ ಓದಿ : Rayan Raj Sarja : ಮೊಟ್ಟೆ ಬಾಸ್ ಇನ್ ಹೌಸ್: ಹೊಸ ಪೋಸ್ಟ್ ಗೆ ಮೇಘನಾರಾಜ್ ಟ್ಯಾಗ್ ಲೈನ್

State wide Madhagaja Cinema Release

RELATED ARTICLES

Most Popular