ಪುನೀತ್ ರಾಜ್ ಕುಮಾರ್ ನಿಧನದ ನಾಲ್ಕು ತಿಂಗಳ ಬಳಿಕವೂ ಅಭಿಮಾನಿಗಳ ಅಭಿಮಾನ ಕೊಂಚವೂ ಕಡಿಮೆಯಾಗಿಲ್ಲ. ಅಪ್ಪು ಹುಟ್ಟುಹಬ್ಬ ಹಾಗೂ ಅಪ್ಪು ಕೊನೆಯ ಸಿನಿಮಾ ರಿಲೀಸ್ ಎರಡೂ ಸಂಭ್ರಮಕ್ಕೂ ದಿನಗಣನೆ ನಡೆದಿದೆ. ಈ ಮಧ್ಯೆ ಸುದೀಪ್ ರನ್ನು(sudeep and puneeth) ಸಂಪರ್ಕಿಸಿರೋ ಜೇಮ್ಸ್ (James) ಚಿತ್ರತಂಡ ಪುನೀತ್ (Puneeth Rajkumar) ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ.
ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನಿಲ್ಲವಾಗಿ ನಾಲ್ಕು ತಿಂಗಳು ಕಳೆದರೂ ಅಭಿಮಾನಿಗಳು ಪ್ರತಿಕ್ಷಣ ಅಪ್ಪು ಸ್ಮರಣೆಯಲ್ಲೇ ಬದುಕುತ್ತಿದ್ದಾರೆ. ಮಾತ್ರವಲ್ಲ ಅಪ್ಪು ನೆನಪು ಅಮರವಾಗಿಸಲು ಸರ್ಕಸ್ ನಡೆಸಿದ್ದಾರೆ. ಈ ಮಧ್ಯೆ ಅಪ್ಪು ನಟನೆಯ ಕೊನೆಯ ಸಿನಿಮಾ ಜೇಮ್ಸ್ ತೆರೆಗೆ ಅದ್ದೂರಿ ಸಿದ್ಧತೆ ನಡೆದಿದೆ. ಅಪ್ಪು ಸೈನಿಕರಾಗಿ ನಟಿಸಿದ ಕೊನೆಯ ಚಿತ್ರವನ್ನು ತೆರೆಗೆ ತರೋಕೆ ದಿನಗಣನೆ ನಡೆದಿರುವಾಗಲೇ, ಬೆಂಗಳೂರಿನ ವಿರೇಶ್ ಸೇರಿದಂತೆ ಎಲ್ಲ ಥಿಯೇಟರ್ ಗಳ ಮುಂದೇ ಅಪ್ಪು ಕಟೌಟ್ ರಾರಾಜಿಸುತ್ತಿದೆ.
ಈ ಮಧ್ಯೆ ಅಪ್ಪು ಬಹುನೀರಿಕ್ಷಿತ ಸಿನಿಮಾ ಜೇಮ್ಸ್ ನ ಸಲಾಂ ಸೋಲ್ಜರ್ ಹಾಡನ್ನು ಇಂದು ನಟ ಸುದೀಪ್ ಬಿಡುಗಡೆ ಮಾಡಿದ್ದಾರೆ.ಅಪ್ಪು ಬಹುಕಾಲದ ಗೆಳೆಯ ಹಾಗೂ ಬಾಲ್ಯದ ಒಡನಾಡಿ ಸುದೀಪ್ ಈ ಹಾಡನ್ನು ರಿಲೀಸ್ ಮಾಡಿದ್ದು ಹಾಡು ಹಾಗೂ ಅಪ್ಪು ನಟನೆ, ಡ್ಯಾನ್ಸ್ ನೋಡಿ ಖುಷಿ ಪಟ್ಟಿದ್ದಾರೆ. ಹಾಡು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ ಸುದೀಪ್ ತಮ್ಮ ಹಾಗೂ ಅಪ್ಪು ಒಡನಾಟವನ್ನು ಸ್ಮರಿಸಿದ್ದಾರೆ. ಮಾತ್ರವಲ್ಲ ಅಪ್ಪು ನಟನೆಗೆ ಯಾರೂ ಸರಿಸಾಟಿಯಲ್ಲ. ಅವರ ನಟನೆಯನ್ನು ಕಣ್ತುಂಬಿಕೊಳ್ಳೋಕೆ ನಾನು ಕಾಯುತ್ತಿದ್ದೇನೆ ಎಂದಿದ್ದಾರೆ.
ಅಪ್ಪು ನಟನೆಯ ಕೊನೆಯ ಸಿನಿಮಾ ಜೇಮ್ಸ್ ಹಾಡನ್ನು ಸುದೀಪ್ ಬಿಡುಗಡೆಗೊಳಿಸಿದ ಪೋಟೋ ಸೋಷಿಯಲ್ ಮೀಡಿಯಾ ದಲ್ಲಿ ಸಖತ್ ವೈರಲ್ ಆಗಿದ್ದು ಇಬ್ಬರೂ ಸ್ಟಾರ್ ಗಳ ಅಭಿಮಾನಿಗಳು ಪೋಟೋಸ್ ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ. ಮಾರ್ಚ್ 17 ರ ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬದ ದಿನ ಈ ಸಿನಿಮಾ ಬಹುಭಾಷೆಗಳಲ್ಲಿ ತೆರೆಗೆ ಬರಲಿದೆ.ಅಪ್ಪು ನಿಧನರಾದ ಸಂದರ್ಭದಲ್ಲಿ ಅಪ್ಪು ಜೇಮ್ಸ್ ಸಿನಿಮಾದ ಒಂದು ಹಾಡಿನ ಶೂಟಿಂಗ್ ಮಾತ್ರ ಬಾಕಿ ಇದ್ದು ಮತ್ತೆಲ್ಲವೂ ಮುಗಿದಿತ್ತು. ಆದರೆ ಸಿನಿಮಾದಲ್ಲಿ ಅಪ್ಪು ಪಾತ್ರಕ್ಕೆ ಡಬ್ಬಿಂಗ್ ಆಗಿರಲಿಲ್ಲ. ತಂತ್ರಜ್ಞಾನ ಬಳಸಿ ಅಪ್ಪು ವಾಯ್ಸ್ ನ್ನೇ ಚಿತ್ರಕ್ಕೆ ನೀಡುವ ಪ್ರಯತ್ನ ವಿಫಲಗೊಂಡಿದ್ದರಿಂದ ಶಿವಣ್ಣ ಅಪ್ಪು ಪಾತ್ರಕ್ಕೆ ಜೀವ ತುಂಬಿದ್ದಾರೆ.
ಇದನ್ನೂ ಓದಿ : Lakshmi Manchu : ಸ್ಟಾರ್ ಪುತ್ರಿಯನ್ನೂ ಕಾಡಿದ ಕಾಸ್ಟಿಂಗ್ ಕೌಚ್ : ನಟಿ ಹಂಚಿಕೊಂಡ್ರು ಕಹಿನೆನಪು
ಇದನ್ನೂ ಓದಿ : Avatara Purusha : ಶರಣ್ ಅವತಾರ ಪುರುಷ ರಿಲೀಸ್ ಡೇಟ್ ಫಿಕ್ಸ್
(Sudeep admiration for Puneeth Rajkumar song)