(Sulochana Chavan Passes Away)ಲಾವಣಿಗಳ ರಾಣಿ ಎಂದು ಖ್ಯಾತಿ ಪಡೆದ ಮತ್ತು ಪದ್ಮಶ್ರೀಯನ್ನು ಮುಡಿಗೇರಿಸಿಕೊಂಡ ಹಿರಿಯ ಗಾಯಕಿ ಸುಲೋಚನಾ ಚವಾಣ್ ವಯೋಸಹಜ ಕಾರಣದಿಂದಾಗಿ ಇಂದು ತಮ್ಮ ಮಹಾರಾಷ್ಟ್ರದ ನಿವಾಸದಲ್ಲಿ ವಿದಿವಶರಾಗಿದ್ದಾರೆ. ಪದ್ಮಶ್ರೀ ಪುರಸ್ಕೃತೆ ಹಿರಿಯ ಕಂಠಕ್ಕೆ 89 ವರ್ಷ ವಯಸ್ಸಾಗಿತ್ತು. ಇಂದು ದಕ್ಷಿಣ ಮುಂಬೈನ ಮೆರೈನ್ ಲೈನ್ಸ್ ನಲ್ಲಿ ಅಂತ್ಯಕ್ರಿಯೆ ನಡೆಯುತ್ತದೆ ಎಂದು ಕುಟುಂಬದವರು ತಿಳಿಸಿದ್ದಾರೆ.
(Sulochana Chavan Passes Away)ಹಿರಿಯ ಗಾಯಕಿ ಸುಲೋಚನಾ ಚವಾಣ್ ಅವರು ಮಾರ್ಚ್ 13,1933 ರಂದು ಮುಂಬೈನಲ್ಲಿ ಜನಿಸಿದರು. ಇವರಿಗೆ ಚಿಕ್ಕಂದಿನಿಂದಲೂ ಗಾಯನದೆಡೆಗೆ ಒಲವು ಹೆಚ್ಚಿತ್ತು ಹಾಗಾಗಿ ಅದನ್ನೇ ವೃತ್ತಿಯನ್ನಾಗಿ ಆಯ್ದುಕೊಂಡರು. ಅದರಲ್ಲೂ ಲಾವಣಿ ಹಾಡುಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು . ಅವರ ಕಂಠ ದ್ವನಿಯಲ್ಲಿ ಬಂದ ಅದೆಷ್ಟೋ ಲಾವಣಿ ಗೀತೆಗಳು ಜನರಿಗೆ ಮುದವನ್ನು ನೀಡಿದೆ. ಸುಲೋಚನಾ ಚವಾಣ್ ಅವರು ಮರಾಠಿಯ ಲಾವಣಿ ಹಾಡುವುದಕ್ಕೆ ಹೆಸರುವಾಸಿ ಆಗಿದ್ದರು. ಅಷ್ಟೇ ಅಲ್ಲದೆ ಹಲವು ಹಿಂದಿ ಸಿನಿಮಾ ಮತ್ತು ಆಲ್ಬಮ್ ಹಾಡುಗಳು ಇವರ ಕಂಠಸಿರಿಯಲ್ಲಿ ಮೂಡಿ ಬಂದಿದೆ.
1964 ರಲ್ಲಿ ಪರದೆಯ ಮೇಲೆ ಮಿಂಚಿದ ಸವಾಲ್ ಮಜಾ ಐಕಾ ಸಿನಿಮಾದ ಸೋಲಾವಾ ವರೀಸ್ ಧೋಕ್ಯಾಚಾ,ಕಸ ಕೇ ಪಾಟೀಲ್ ಬಾರಾ ಹೇ ಕಾ ಸಿನಿಮಾದ ಹಾಡುಗಳನ್ನು ಹಾಡಿ ಜನರ ಮನಸ್ಸಲ್ಲಿ ಅಚ್ಚುಳಿಯುವಂತೆ ಮಾಡಿದ್ದಾರೆ. 1965 ರಲ್ಲಿ ತೆರೆಮೇಲೆ ಬಂದ ಮಲ್ಹಾರಿ ಮಾರ್ತಾಂಡ್, ಸಿನಿಮಾದಲ್ಲಿ ತುಜ್ಯಾ ಉಸಲಾ ಲಾಗಲ್ ಕೊಲ್ಹಾ, ಪದಾರವಾರ್ತಿ ಜರ್ತಾರಿಚ್ಚಾ ಎಂಬ ಹಾಡನ್ನು ಹಾಡಿದ್ದಾರೆ. ಹೀಗೆ ಸಾಲು ಸಾಲು ಹಾಡನ್ನು ಕೊಡುತ್ತಾ ಯಶಸ್ಸು ಗಳಿಸಿದ ಗಾಯಕಿ ಸುಲೋಚನಾ ಚವಾಣ್ ಅವರ ಸಾಧನೆಯನ್ನು ಗುರುತಿಸಿ ಕೇಂದ್ರ ಸರಕಾರ 2022 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತ್ತು.
ಮಾರ್ಚ್ ತಿಂಗಳಿನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಲಾವಣಿಗಳ ರಾಣಿ ಸುಲೋಚನಾ ಅವರಿಗೆ ಪ್ರಶಸ್ತಿ ನೀಡಿದ್ದರು. ಅವರ ಈ ಕಲಾಸಾಧನೆಗೆ “ಲಾವಣಿ ಸಮ್ರಾಧನಿ” ಎಂಬ ಬಿರುದನ್ನು ನೀಡಲಾಗಿದೆ. ಹಿರಿಯ ಗಾಯಕಿಯ ಅಗಲಿಕೆಯಿಂದ ಜನಪದದ ಮುಖ್ಯ ಕೊಂಡಿ ಕಳಚಿದಂತಾಗಿದೆ.
Sulochana Chavan Passes Away Sulochana Chavan, famous singer of ballads, is only remembered