ಸೋಮವಾರ, ಏಪ್ರಿಲ್ 28, 2025
HomeCinemaKL Rahul Athiya Shetty wedding : "ಮಗಳ ಮದುವೆಯ ದಿನಾಂಕ ಫಿಕ್ಸ್ ಆದ್ರೆ ಹೇಳಿ,...

KL Rahul Athiya Shetty wedding : “ಮಗಳ ಮದುವೆಯ ದಿನಾಂಕ ಫಿಕ್ಸ್ ಆದ್ರೆ ಹೇಳಿ, ನಾನೂ ಬರುವೆ ” ಹೀಗಂದರೇಕೆ ಸುನೀಲ್ ಶೆಟ್ಟಿ ?

- Advertisement -

ಮುಂಬೈ: ಕ್ರಿಕೆಟಿಗ ಕೆ.ಎಲ್ ರಾಹುಲ್ ಮತ್ತು ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿಯವರ ಪುತ್ರಿ ಆತಿಯಾ ಶೆಟ್ಟಿ (KL Rahul Athiya Shetty wedding) ಮದುವೆ ಮುಂದಿನ ತಿಂಗಳು ನಡೆಯಲಿದೆ. ಜನವರಿ 21 ರಿಂದ 23ರವರೆಗೆ ಮುಂಬೈ-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಖಂಡಾಲದಲ್ಲಿ ಸ್ಟಾರ್ ಜೋಡಿಯ ಮದುವೆ ನಡೆಯಲಿದ್ದು, ಈಗಾಗಲೇ ಸಿದ್ಧತೆಗಳು ಆರಂಭಗೊಂಡಿವೆ. ಎರಡೂ ಕಡೆಯವರಿಂದ ಮದುವೆಗೆ ಅತಿಥಿಗಳನ್ನು ಆಹ್ವಾನಿಸಲಾಗುತ್ತಿದೆ. ಕುಟುಂಬಸ್ಥರು ಮತ್ತು ಆತ್ಮೀಯ ಸ್ನೇಹಿತರಿಗಷ್ಟೇ ಮದುವೆ ಆಮಂತ್ರಣ ನೀಡಲು ಎರಡೂ ಕುಟುಂಬಗಳು ನಿರ್ಧರಿಸಿವೆ. ರಾಹುಲ್-ಆತಿಯಾ ಶೆಟ್ಟಿ ಮದುವೆ ಖಂಡಾಲದಲ್ಲಿರುವ ಸುನೀಲ್ ಶೆಟ್ಟಿಯವರ ಫಾರ್ಮ್ ಹೌಸ್’ನಲ್ಲಿ ನಡೆಯಲಿದೆ ಎನ್ನಲಾಗ್ತಿದೆ.

ಮಗಳ ಮದುವೆಯ ದಿನಾಂಕ ನಿಗದಿಯಾಗಿದ್ದರೂ ಗುಟ್ಟು ಬಿಟ್ಟು ಕೊಡಲು ಸುನೀಲ್ ಶೆಟ್ಟಿ ಸಿದ್ಧರಿಲ್ಲ. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಕ್ಕ ಸುನೀಲ್ ಶೆಟ್ಟಿಯವರನ್ನು ಪತ್ರಕರ್ತರು ಮಂಗಳ ಮದುವೆ ದಿನಾಂಕದ ಬಗ್ಗೆ ಪ್ರಶ್ನಿಸಿದಾಗ ಪತ್ರಕರ್ತರಿಗೇ ಗೂಗ್ಲಿ ಹಾಕಿದ್ದಾರೆ ಸುನೀಲ್ ಶೆಟ್ಟಿ. “ದಿನಾಂಕ ಖಚಿತ ಪಟ್ಟರೆ ನನಗೂ ಹೇಳಿ, ನಾನೂ ಮದುವೆಗೆ ಹಾಜರಾಗಬಹುದು” ಎಂದು ಸುನೀಲ್ ಶೆಟ್ಟಿ ಹಾಸ್ಯದ ಧಾಟಿಯಲ್ಲಿ ಹೇಳಿದ್ದಾರೆ. ಮದುವೆ ಆದಷ್ಟು ಶೀಘ್ರವಾಗಿ ನಡೆಯಲಿದೆ ಎಂದು ಸುನೀಲ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ಆದರೆ ದಿನಾಂಕದ ಗುಟ್ಟು ಬಿಟ್ಟುಕೊಡಲು ನಿರಾಕರಿಸಿದ್ದಾರೆ.

ರಾಹುಲ್-ಆತಿಯಾ ಶೆಟ್ಟಿ ಮದುವೆ ಇನ್ನು ಮೂರು ತಿಂಗಳಲ್ಲಿ ನಡೆಯಲಿದೆ ಎಂದು ಕೆಲ ಮಾಧ್ಯಮಗಳು ಕಳೆದ ಸೆಪ್ಟೆಂಬರ್’ನಲ್ಲಿ ವರದಿ ಮಾಡಿದ್ದವು. ಆಗ ಆತಿಯಾ ಶೆಟ್ಟಿ ಇನ್’ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕಿದ್ದರು. ತಮ್ಮ ಮದುವೆ ದಿನಾಂಕದ ಬಗ್ಗೆ ಎದ್ದಿದ್ದ ರೂಮರ್’ಗಳ ಬಗ್ಗೆ ಇನ್’ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದ ಆತಿಯಾ ಶೆಟ್ಟಿ “ಮೂರು ತಿಂಗಳಲ್ಲಿ ನಡೆಯಲಿರುವ ಮದುವೆಗೆ ನನಗೆ ಆಹ್ವಾನವಿರಲಿದೆ ಎಂದು ಭಾವಿಸುತ್ತೇನೆ” ಎಂದು ಪೋಸ್ಟ್ ಮಾಡಿದ್ದರು.

ಟೀಮ್ ಇಂಡಿಯಾ ಉಪನಾಯಕ ಕೆ.ಎಲ್ ರಾಹುಲ್ ಮತ್ತು ಬಾಲಿವುಡ್ ತಾರೆ ಆತಿಯಾ ಶೆಟ್ಟಿ ಕಳೆದ 3 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಇದೀಗ ವಿವಾಹವಾಗಲು ನಿರ್ಧರಿಸಿದ್ದಾರೆ. ಕೆ.ಎಲ್ ರಾಹುಲ್ ಮಂಗಳೂರಿನವರು. ವಿಶೇಷವೆಂದರೆ ರಾಹುಲ್ ಮದುವೆಯಾಗಲಿರುವ ಆತಿಯಾ ಶೆಟ್ಟಿ ಕೂಡ ಮಂಗಳೂರು ಮೂಲದವರು. ಸುನೀಲ್ ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು, ಹಲವಾರು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದಾರೆ.

ಇದನ್ನೂ ಓದಿ : Shreyas Iyer : ಶತಕ ಮಿಸ್ಸಾದ್ರೂ ಯಾರೂ ಮಾಡಲಾಗದ ದಾಖಲೆ ಬರೆದ ಶ್ರೇಯಸ್ ಅಯ್ಯರ್

ಇದನ್ನೂ ಓದಿ : Exclusive: Mayank Agarwal RCB: ಮಯಾಂಕ್ ಅಗರ್ವಾಲ್’ಗೆ RCB ಗಾಳ.. ಮತ್ತೆ ಬೆಂಗಳೂರು ಪರ ಆಡ್ತಾರಾ ಕನ್ನಡಿಗ?

Sunil Shetty statement About KL Rahul Athiya Shetty wedding

ಇಂಗ್ಲಿಷ್‌ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular