ಸನ್ನಿ ಲಿಯೋನ್ (Sunny Leone) ಅಂದ್ರೇ ಸಾಕು ಪಡ್ಡೆಗಳ ಮೈಮನವೆಲ್ಲ ಬಿಸಿ ಏರುತ್ತದೆ. ನೀಲಿ ಚಿತ್ರದಿಂದ ಬಾಲಿವುಡ್ ಗೆ ಭಡ್ತಿ ಪಡೆದ ಈ ಸುಂದರಿ ಈಗ ಸೌತ್ ಸಿನಿಮಾದಲ್ಲೂ ಮಿಂಚಿದ್ದಾರೆ. ಈಗಾಗಲೇ ಕನ್ನಡದಲ್ಲೂ ತಮ್ಮ ಮಿಂಚಿನ ಡ್ಯಾನ್ಸ್ ಹಾಗೂ ಮಾದಕ ಮೈಮಾಟದಿಂದ ಮನೆಮಾತಾದ ಸನ್ನಿ ಲಿಯೋನ್ ಮತ್ತೊಮ್ಮೆ ಕನ್ನಡಕ್ಕೆ ಬಂದಿದ್ದಾರೆ. ಮಾತ್ರವಲ್ಲ ಸ್ಯಾಂಡಲ್ ವುಡ್ ನಲ್ಲಿ ಕುಣಿದು ರಂಗೇಬ್ಬಿಸಿ ಹೋಗಿದ್ದಾರೆ.

ಸನ್ನಿ ಲಿಯೋನ್ ಗೆ ಸ್ಯಾಂಡಲ್ ವುಡ್ ನಲ್ಲೂ ಸಖತ್ ಫ್ಯಾನ್ಸ್ ಇದ್ದಾರೆ. ಈ ಹಿಂದೆ ನಿರ್ದೇಶಕ ಪ್ರೇಮ್ ಸನ್ನಿ ಲಿಯೋನ್ ರನ್ನು ಕನ್ನಡಕ್ಕೆ ಕರೆತಂದಿದ್ದರು. ಅಷ್ಟೇ ಅಲ್ಲ ಸನ್ನಿ ಲಿಯೋನ್ ಸೇಸಮ್ಮ ಸೇಸಮ್ಮ ಎಂದು ಕುಣಿದು ಯುವಕರ ಮನಗೆದ್ದಿದ್ದರು. ಅಷ್ಟೇ ಅಲ್ಲ ಇಂದ್ರಜಿತ್ ಲಂಕೇಶ್ ನಿರ್ದೇಶನದ ಲವ್ ಯೂ ಆಲಿಯಾ ಚಿತ್ರದ ಹಾಡಿನಲ್ಲೂ ಸೊಂಟ ಬಳುಕಿಸಿದ್ದರು. ಈಗ ಮತ್ತೊಮ್ಮೆ ನೀಲಿ ತಾರೆ, ಪಡ್ಡೆಗಳ ಕನಸಿನ ಹುಡುಗಿ ಸನ್ನಿ ಲಿಯೋನ್ ಚಂದನವಕ್ಕೆ ಕಾಲಿಟ್ಟಿದ್ದಾರೆ.

ಯುವ ನಟ ಸಚಿನ್ ಧನಪಾಲ್ ಹಾಗೂ ಅದಿತಿ ಪ್ರಭುದೇವ್ ನಟನೆಯ ಚಾಂಪಿಯನ್ ಸಿನಿಮಾದಲ್ಲಿ ಸನ್ನಿ ಲಿಯೋನ್ ಐಟಂ ಸಾಂಗ್ ವೊಂದಕ್ಕೆ ಮಸ್ತಾಗಿ ಡ್ಯಾನ್ಸ್ ಮಾಡಿದ್ದಾರೆ. ಈಗಾಗಲೇ ಈ ಹಾಡಿನ ಶೂಟಿಂಗ್ ಪೂರ್ತಿಯಾಗಿ ಮುಗಿದಿದ್ದು, ಸಂಪೂರ್ಣ ಉತ್ತರ ಕರ್ನಾಟಕ ಶೈಲಿಯಲ್ಲಿ ಹಾಡು ಮೂಡಿಬಂದಿದೆಯಂತೆ.

ಕ್ರೀಡಾ ಕತೆಯನ್ನು ಆಧರಿಸಿ ನಿರ್ಮಾಣವಾಗಿರೋ ಈ ಸಿನಿಮಾದಲ್ಲಿ ಡಿಂಗರ್ ಬಿಲ್ಲಿ ಎಂಬ ಉತ್ತರ ಕರ್ನಾಟಕ ಶೈಲಿಯ ಸಾಹಿತ್ಯವನ್ನು ಹೊಂದಿರೋ ಹಾಡಿಗೆ ಸನ್ನಿ ಲಿಯೋನ್ ಧೂಳೆಬ್ಬಿಸುವಂತೆ ಕುಣಿದಿದ್ದಾರೆ. ಶಿವು ಬೊರಗಿ ಸಾಹಿತ್ಯಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದ್ದು, ಈ ಸಿನಿಮಾದಲ್ಲಿ ಅದಿತಿ ಹಾಗೂ ಸಚಿನ್ ಜೊತೆ ದೇವರಾಜ್, ಚಿಕ್ಕಣ್ಣ,ಪ್ರಶಾಂತ್ ಸಿದ್ದಿ ಹೀಗೆ ಹಲವರು ನಟಿಸಿದ್ದಾರೆ.
ಇದನ್ನೂ ಓದಿ : ಸನ್ನಿ ಮೇನಿಯಾ : ಮಾಲ್ಡೀವ್ಸ್ ಹಾಟ್ ವಿಡಿಯೋ ವೈರಲ್

ಇದನ್ನೂ ಓದಿ : Sunny Leone : ಸನ್ನಿ ಲಿಯೋನ್ ಪಾನ್ ಕಾರ್ಡ್ ಗೂ ಕನ್ನ: 2 ಸಾವಿರ ರೂಪಾಯಿ ಸಾಲ ಪಡೆದ ಭೂಪ, ದುಃಖ ತೋಡಿಕೊಂಡ ನೀಲಿತಾರೆ
ಶಾಹುರಾಜ್ ಶಿಂಧೆ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಈಗಾಗಲೇ ಶೂಟಿಂಗ್ ಮುಗಿಸಿರೋ ತಂಡ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಸಿನಿಮಾದಲ್ಲಿ ನಟಿ ಅದಿತಿ ಪ್ರಭುದೇವ್ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಸನ್ನಿ ಲಿಯೋನ್ ಐಟಂ ಸಾಂಗ್ ಗೆ ಹೆಜ್ಜೆ ಹಾಕಿರೋ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದು, ಸನ್ನಿ ಫ್ಯಾನ್ಸ್ ಸಿನಿಮಾ ರಿಲೀಸ್ ಆಗೋದ್ಯಾವ್ಯಾಗ ಅನ್ನೋ ಕಾತುರತೆಯಿಂದ ಕಾಯ್ತಿದ್ದಾರೆ.
Sunny Leone again enter Sandalwood