ಬೆಂಗಳೂರು : ನನಗೂ ಸಂಸ್ಕಾರ ಸಂಸ್ಕೃತಿ ಇದೆ. ದರ್ಶನ್ ವಿಚಲಿತರಾಗಿದ್ದಾರೆ. ನೀವು ನಿಮ್ಮ ತಂದೆಗೆ ಹುಟ್ಟಿದ್ದರೆ ಧರ್ಮಸ್ಥಳಕ್ಕೆ ಬನ್ನಿ. ಅಲ್ಲಿಯೇ ಆಣೆ ಪ್ರಮಾಣ ಮಾಡೋಣಾ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ನಟ ದರ್ಶನ್ ತೂಗುದೀಪ್ ಅವರಿಗೆ ಪ್ರತಿ ಸವಾಲು ಹಾಕಿದ್ದಾರೆ.

ಬೆಂಗಳೂರಲ್ಲಿಂದು ಸುದ್ದಿಗೋಷ್ಠಿ ನಡೆಸಿದ ನಿರ್ದೇಶಕ ಇಂದ್ರಜಿತ್ ಲಂಕೇಶ್, ನಟ ದರ್ಶನ್ ವಿರುದ್ದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸ್ಕಾರ, ಸಂಸ್ಕೃತಿ, ಹಿನ್ನೆಲೆ ಭಾಷೆಯಲ್ಲಿ ತೋರಿಸುತ್ತದೆ. ನಟ ದರ್ಶನ್ ನಾನು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ರೆ ಸಾಕು. ನಾನು ಸೆಲೆಬ್ರಿಟಿಗಳು ಸಮಾಜಕ್ಕೆ ಮಾದರಿಯಾಗಬೇಕು ಎಂದಿದ್ದೇನೆ. ಆದ್ರೆ ಅನ್‌ಎಜುಕೇಟೆಡ್ ಅಂತ ಹೇಳಿಲ್ಲ ಎಂದಿದ್ದಾರೆ.

ದರ್ಶನ್ ಅವರ ಆಡಿಯೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಇಂದ್ರಜಿತ್, ನಾನು ದಾಖಲೆಗಳನ್ನು ಪೊಲೀಸರಿಗೆ ನೀಡುತ್ತೇನೆ. ನೀವು ಸಪ್ಲೈಯರ್ ಗೆ ಹೊಡೆದಿದ್ರೋ ಇಲ್ಲವೋ ಅನ್ನೋದ್ರ ಬಗ್ಗೆ ಪ್ರಮಾಣ ಮಾಡಿ. ನೀವು ಅರುಣಾ ಕುಮಾರಿ ಅವರನ್ನು ತೋಟಕ್ಕೆ ಕರೆಯಿಸಿಕೊಂಡಿದ್ದು ಯಾಕೆ. ನೀವು ಹೋಟೆಲ್ ಗೆ ಏನ್ ಮಾಡಲು ಹೋಗಿದ್ರಿ. ಗಂಡಸುತನ ಪ್ರೂ ಮಾಡೋದಕ್ಕೆ ಹೋಗಿದ್ರಾ. ನೀವು ಹೋಟೆಲ್ ನಲ್ಲಿ ಸಪ್ಲೈಯರ್‌ಗೆ ಹೊಡೆದಿದ್ರಾ ಇಲ್ವಾ, ನೀವು ೨೫ ಕೋಟಿ ಡೀಲ್ ವಿಚಾರವಾಗಿ ಮಾತನಾಡಿ. ನಿಮ್ಮ ಡೈಲಾಗ್ ಸಿನಿಮಾದಲ್ಲಿ ತೋರಿಸಿ ಎಂದು ನಟ ದರ್ಶನ್ ಗೆ ಪ್ರತಿ ಸವಾಲು ಹಾಕಿದ್ದಾರೆ.
ಇದನ್ನೂ ಓದಿ : ನೀವು ಗಂಡಸಾಗಿದ್ರೆ ಆಡಿಯೋ ರಿಲೀಸ್ ಮಾಡಿ : ನಿರ್ದೇಶಕ ಇಂದ್ರಜಿತ್ ಲಂಕೇಶ್ ಗೆ ದರ್ಶನ್ ಸವಾಲು
ಡಾ. ರಾಜ್ ಕುಮಾರ್ ಅವರು ಅಭಿಮಾನಿಗಳು ದೇವರು ಎಂದಿದ್ದಾರೆ. ಅಭಿಮಾನಿಗಳಲ್ಲಿ ಸಪ್ಲೈಯರ್ ಗಳು, ಬಡವರು ಇದ್ದಾರೆ. ಹೀಗಿದ್ದಾಗ ನೀವು ಸಪ್ಲೈಯರ್ ಮೇಲೆ ಹೊಡೆದಿರುವುದು ಎಷ್ಟು ಸರಿ. ಮಹಿಳೆಯ ವಿರುದ್ದ ದೂರು ನೀಡಿದ್ರೆ ಮಹಿಳೆಯನ್ನು ಠಾಣೆಗೆ ಕರೆಯಿಸಿ ವಿಚಾರಣೆ ಮಾಡ್ತೀರಿ. ಆದ್ರೆ ನಟನ ವಿರುದ್ದ ದೂರು ನೀಡಿದ್ರೆ ಯಾಕೆ ಕ್ರಮಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ದರ್ಶನ್ ತೂಗುದೀಪ್ ಅವರು ತಾನು ಸಂಗೊಳ್ಳಿ ರಾಯಣ್ಣ ಸಿನಿಮಾ ಮಾಡಿದ್ದೇನೆ ಎಂದಿದ್ದಾರೆ. ಆದ್ರೆ ಸಂಗೊಳ್ಳಿ ರಾಯಣ್ಣ ಸಿನಿಮಾ ಮಾಡಿದ ಪ್ರೋಡ್ಯೂಸರ್ ಅವರು ಜೈಲು ಸೇರಿದ್ದಾರೆ. ಸಾಮಾನ್ಯ ವರ್ಗದವರ ಸೊಸೈಟಿ ಟ್ರಸ್ಟ್ ಮಾಡಿ ಅದರಿಂದ ತಂದ ಹಣವನ್ನು ಸಿನಿಮಾಕ್ಕೆ ಹೂಡಿಕೆ ಮಾಡಿದ್ದಾರೆ. ಇದೀಗ ಅವರು ಜೈಲು ಸೇರಿದ್ದಾರೆ. ನಾನು ಸಿನಿಮಾ ನಿರ್ದೇಶನ, ನಿರ್ಮಾಣ ಮಾಡಿದ್ದೇನೆ. ನಾನು ಸೋಲು ಗೆಲುವು ಎಲ್ಲವನ್ನೂ ಕಂಡಿದ್ದೇನೆ ಎಂದಿದ್ದಾರೆ.