ಮುಂಬೈ: Tamannaah marriage: ತಮ್ಮ ಲುಕ್, ಸ್ಮೈಲ್ ನಿಂದಲೇ ಲಕ್ಷಾಂತರ ಅಭಿಮಾನಿಗಳ ಪ್ರೀತಿ ಗಳಿಸಿದ್ದ ನಟಿ ತಮನ್ನಾ ಇದೀಗ ತಮ್ಮ ಬದುಕಿನ ಸೆಕೆಂಡ್ ಇನ್ನಿಂಗ್ಸ್ ಗೆ ಸಜ್ಜಾಗಿದ್ದಾರಂತೆ. ಮುಂಬೈ ಮೂಲದ ಉದ್ಯಮಿ ಜೊತೆ ಅತಿ ಶೀಘ್ರದಲ್ಲೇ ತಮನ್ನಾ ಹಸೆಮಣೆ ಏರಲಿದ್ದಾರೆ ಅನ್ನೋ ಗುಸು ಗುಸು ಮಾತುಗಳು ಇದೀಗ ಎಲ್ಲೆಡೆ ಕೇಳಿಬರ್ತಿವೆ.
ಮೂಲಗಳ ಪ್ರಕಾರ, ತಮನ್ನಾ ಬಾಟಿಯಾ ಮುಂಬೈ ಮೂಲದ ಉದ್ಯಮಿ ಜೊತೆ ಸಪ್ತಪದಿ ತುಳಿಯಲಿದ್ದಾರೆ ಅಂತ ಹೇಳಲಾಗುತ್ತಿದೆ. ಸದ್ಯ ಯಾವ ಪ್ರಾಜೆಕ್ಟ್ ಗಳಿಗೂ ಅವರು ಸಹಿ ಹಾಕದಿರುವುದು ಈ ವದಂತಿಗಳಿಗೆ ಪುಷ್ಟಿ ನೀಡಿದಂತಿದೆ. ಸದ್ಯದಲ್ಲೇ ಅವರು ವಿವಾಹವಾಗಲಿದ್ದು, ಈ ಪ್ರಯುಕ್ತ ಅವರು ವಿಶ್ರಾಂತಿ ತೆಗೆದುಕೊಳ್ಳಲು ಬಯಸಿದ್ದಾರಂತೆ. ವಿವಾಹ ಕಾರ್ಯದ ಪೂರ್ವ ತಯಾರಿಗಳಲ್ಲಿ ತಮನ್ನಾ ನಿರತರಾಗಿದ್ದಾರೆ. ಹೀಗಾಗಿ ಯಾವುದೇ ಸಿನಿಮಾ ಕೂಡಾ ಒಪ್ಪಿಕೊಳ್ಳುತ್ತಿಲ್ಲ ಅನ್ನೋ ವದಂತಿಗಳು ಹಬ್ಬಿವೆ.
ಆದರೆ ಈ ಸುದ್ದಿ ಎಷ್ಟರಮಟ್ಟಿಗೆ ನಿಜ ಅನ್ನೋದು ಗೊತ್ತಿಲ್ಲ. ಯಾಕೆಂದರೆ ತಮನ್ನಾ ಮದುವೆ ಬಗೆಗಿನ ವದಂತಿಗಳು ವೈರಲ್ ಆಗುತ್ತಿರುವುದು ಇದು ಮೊದಲನೇ ಬಾರಿ ಅಲ್ಲ. ಈ ಹಿಂದೆಯೂ ತಮನ್ನಾ ಬಾಟಿಯಾ ಮದುವೆ ಬಗ್ಗೆ ಹಲವು ಬಾರಿ ಗುಸು ಗುಸು ವದಂತಿಗಳು ಕೇಳಿಬಂದಿದ್ದವು. 2020ರಲ್ಲಿ ಪಾಕಿಸ್ತಾನಿ ಕ್ರಿಕೆಟಿಗ ಅಬ್ದುಲ್ ರಜಾಕ್ ಜೊತೆಗೆ ಸಂಬಂಧ ಹೊಂದಿದ್ದಾರೆ ಎಂದು ಸುದ್ದಿಯಾಗಿತ್ತು. ಅಷ್ಟು ಮಾತ್ರವಲ್ಲ, ಕ್ರಿಕೆಟಿಗ ವಿರಾಟ್ ಕೊಹ್ಲಿ, ತಮಿಳು ನಟ ಕಾರ್ತಿ ಶಿವಕುಮಾರ್ ಜೊತೆಯೂ ತಮನ್ನಾ ಹೆಸರು ತಳುಕು ಹಾಕಿಕೊಂಡಿತ್ತು.
ಸದ್ಯ ಮುಂಬೈ ಮೂಲದ ಉದ್ಯಮಿ ಜೊತೆ ಮದುವೆ ಎಂಬ ವಿಚಾರವಷ್ಟೆ ತಿಳಿದುಬಂದಿದೆ. ಆದರೆ ಉದ್ಯಮಿ ಯಾರು ಅನ್ನೋದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಅಲ್ಲದೇ ತಮನ್ನಾ ಕೂಡಾ ತಮ್ಮ ಮದುವೆ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಹಾಗಂತ ವದಂತಿಯನ್ನೂ ತಳ್ಳಿಹಾಕಿಲ್ಲ. ಸದ್ಯದಲ್ಲೇ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ, ಮುಂಬೈ ಉದ್ಯಮಿಯಿಂದ ತಮನ್ನಾಗೆ ಮದುವೆ ಪ್ರಪೋಸಲ್ ಬಂದಿದೆ. ನಟಿಯನ್ನು ಒಲಿಸಿಕೊಳ್ಳಲು ಉದ್ಯಮಿ ಸಾಕಷ್ಟು ಪ್ರಯತ್ನಿಸಿದ್ದು, ಕೊನೆಗೂ ತಮನ್ನಾ ಪ್ರಪೋಸಲ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ತಮನ್ನಾ ತನ್ನ ಮದುವೆ ಯಾವಾಗ ಮತ್ತು ತಾನು ಯಾರನ್ನು ಮದುವೆ ಆಗಬೇಕು ಅನ್ನೋದನ್ನು ತನ್ನ ಹೆತ್ತವರು ನಿರ್ಧರಿಸುತ್ತಾರೆ ಅಂತ ಮಾಧ್ಯಮಗಳ ಮುಂದೆ ಸಾಕಷ್ಟು ಬಾರಿ ಹೇಳಿಕೊಂಡಿದ್ದರು. ಹೀಗಾಗಿ ತಮನ್ನಾ ಮದುವೆ ಬಗ್ಗೆ ಅಧಿಕೃತ ಘೋಷಣೆ ಕೇಳಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.
ಇದನ್ನೂ ಓದಿ: Shabrimala Yatre : ಶಬರಿಮಲೆ ಯಾತ್ರಿಕರಿಗಾಗಿ ಕೊಟ್ಟಾಯಂ ರೈಲು ನಿಲ್ದಾಣದಲ್ಲಿ ಪ್ರಾರಂಭವಾದ ‘ಶಬರಿಮಲೆ ಯಾತ್ರಿಕ ಕೇಂದ್ರ’
ಮುಂಬೈ ಮೂಲದ ನಟಿ ತಮನ್ನಾ ಬಾಟಿಯಾ ದಕ್ಷಿಣ ಭಾರತದ ಸಿನಿರಂಗದಲ್ಲಿ ತನ್ನ ಅಮೋಘ ಅಭಿನಯದ ಮೂಲಕ ತನ್ನದೇ ಛಾಪು ಮೂಡಿಸಿದ್ದಾರೆ. ಭಾರತೀಯ ಚಿತ್ರರಂಗದ ಹಲವು ಸ್ಟಾರ್ ನಟಗಳ ಜೊತೆ ತೆರೆ ಹಂಚಿಕೊಂಡಿರುವ ಇವರು ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ.
Tamannaah marriage: actress Tamannaah Bhatia is all set to marry a business man from Mumbai very soon