ಬಣ್ಣದ ಲೋಕ ಅಂದ್ರೇನೆ ಹಾಗೆ. ಇಲ್ಲಿ ಕಲಾವಿದರ ಜೀವನ ಪ್ರತಿ ಬಾರಿಯೂ ಒಂದೇ ರೀತಿ ಇರೋದಿಲ್ಲ. ಒಮ್ಮೊಮ್ಮೆ ಯಶಸ್ಸಿನ ಉತ್ತುಂಗದಲ್ಲಿದ್ದರೆ ಮಗದೊಮ್ಮೆ ನಿಮ್ಮನ್ನು ಮಾತನಾಡಿಸವವರೂ ಯಾರೂ ಇರೋದಿಲ್ಲ. ಅದರಲ್ಲೂ ಕೋವಿಡ್ ಸಾಂಕ್ರಾಮಿಕ ಬಂದ ಮೇಲಂತೂ ಕೆಲ ಕಲಾವಿದರ ಪಾಡು ಹೇಳತೀರದಾಗಿದೆ. ಇದೇ ಸಾಲಿಗೆ ಸೇರಿದ ತೆಲುಗಿನ ಖ್ಯಾತ ಹಾಸ್ಯ ನಟ ರಘು ಕರುಮಂಚಿ(Raghu Karumanchi) ಇದೀಗ ಜೀವನ ನಿರ್ವಹಣೆಗೆ ಹೊಸ ಮಾರ್ಗವನ್ನು ಕಟ್ಟಿಕೊಂಡಿದ್ದಾರೆ.
ಸರಿಸುಮಾರು 2 ದಶಕಗಳ ಕಾಲ ತೆಲುಗಿನಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯನಟನಾಗಿ ಬಣ್ಣ ಹಚ್ಚಿದ್ದ ರಘು ಅವರ ಬಾಳಲ್ಲಿ ಕೋವಿಡ್ ಲಾಕ್ಡೌನ್ ಬರಸಿಡಿಲಿನಂತೆ ಬಂದೆರಗಿತ್ತು. ಕೋವಿಡ್ ತಹಬಧಿಗೆ ಬಂದು ಲಾಕ್ಡೌನ್ ತೆರವು ಮಾಡಲಾಯ್ತಾದರೂ ಕೈ ತಪ್ಪಿ ಹೋದ ಅವಕಾಶಗಳು ವಾಪಸ್ ಕೈ ಸೇರಲೇ ಇಲ್ಲ.ರಿಲೀಸ್ ಆಗಬೇಕಾದ ಅದೆಷ್ಟೋ ಸಿನಿಮಾಗಳು ತೆರೆ ಕಾಣದೇ ಮರೆಯಾದವು.
ಕೈಯಲ್ಲಿ ಒಂದೇ ಒಂದು ಪ್ರಾಜೆಕ್ಟ್ ಇಲ್ಲದೆಯೇ ಜೀವನ ನಿರ್ವಹಣೆ ಹೇಗಪ್ಪ ಎಂದುಕೊಳ್ತಿರುವಾಗ ಹೈದರಾಬಾದ್ನ ಗಡಿಯಲ್ಲಿರುವ ತಮ್ಮ ಜಮೀನಿನಲ್ಲಿ ತೋಟದ ಕೆಲಸ ಆರಂಭಿಸಿದ್ರು. ತೋಟದ ಕೆಲಸದಿಂದಾಗಿ ರಘು ಕೈಯಲ್ಲಿ ಸ್ವಲ್ಪ ಹಣ ಹರಿದಾಡುವಂತಾಯ್ತು. ಇದೇ ಹಣವನ್ನು ಕೂಡಿಟ್ಟ ರಘು ಇದೀಗ ಮದ್ಯದಂಗಡಿಯೊಂದನ್ನು ತೆರೆದಿದ್ದಾರೆ. ನಲ್ಗೊಂಡಾ ಜಿಲ್ಲೆಯ ಗಡಿ ಪ್ರದೇಶದ ಬೈಪಾಸ್ನಲ್ಲಿ ಡಿಸೆಂಬರ್ 1ರಂದು ಈ ಅಂಗಡಿ ಕಾರ್ಯಾರಂಭಗೊಂಡಿದೆ.
ಮದ್ಯದ ಉದ್ಯಮದಲ್ಲಿ ತಾವು ಯಶಸ್ಸು ಸಾಧಿಸಬಹುದು ಎಂಬ ನಿರೀಕ್ಷೆ ರಘು ಅವರದ್ದು. ಮದ್ಯದಂಗಡಿಗೆ ಬಂದ ಗ್ರಾಮಸ್ಥರಲ್ಲಿ ಅನೇಕರು ರಘು ಅವರನ್ನು ಗುರುತಿಸುತ್ತಿದ್ದಾರೆ. ಸಾಕಷ್ಟು ಮಂದಿ ಇವರ ಜೊತೆ ಸೆಲ್ಫಿಯನ್ನು ತೆಗೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡ್ತಿದ್ದಾರೆ. ಆದರೆ ರಘು ಹೊಸ ಪ್ರಯತ್ನದ ಮೂಲಕ ಜೀವನ ಕಟ್ಟಿಕೊಳ್ಳ ಬೇಕೆಂಬ ಕನಸನ್ನು ಗಟ್ಟಿ ಮಾಡಿಕೊಳ್ಳುವುದರಲ್ಲೇ ಮಗ್ನರಾಗಿದ್ದಾರೆ.
ಇದನ್ನು ಓದಿ : blouse less saree : ಟ್ಯಾಟೂನೇ ಬ್ಲೌಸ್ : ಸೀರೆ ಸೆರಗು ಜಾರಿದ್ರೇ ಗತಿ ಏನು ಅಂದ್ರು ನೆಟ್ಟಿಗರು
Telugu Comedian Raghu Karumanchi Opens Liquor Shop. Here’s Why